ಸಾಂಬಾರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್!
Sambar lovers: ಸಾಂಬಾರ್ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಾಂಬಾರ್ ಬಳಕೆ ಹೆಚ್ಚಾಗಿದೆ. ದಿನ ನಿತ್ಯವೂ ಆಹಾರ ಪದ್ಧತಿಯಲ್ಲಿ ಸಾಂಬಾರ್ ಇದೆ. ಆದರೆ ಇದೀಗ ಸಾಂಬಾರ್‌ನಲ್ಲಿ ಬಳಸುವ ಪ್ರಮುಖ ಆಹಾರ ಪದಾರ್ಥವಾದ ತೊಗರಿ ಬೇಳೆಯ ಬಗ್ಗೆ ಗಂಭೀರವಾದ ವರದಿಯೊಂದು ಬಂದಿದ್ದು. ಸಾಂಬಾರು ಪ್ರಿಯರನ್ನು ಶಾಕ್‌ಗೆ ದೂಡಿದ್ದು. ಬೇಳೆ ಬಳಕೆಯ ಬಗ್ಗೆ ಜನ ಎರಡು ಬಾರಿ ಯೋಚನೆ ಮಾಡುವಂತೆ ಆಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ತೊಗರಿಬೇಳೆ ಭಾರತದ ಆಹಾರ ಪದ್ಧತಿಯಲ್ಲಿ ಪ್ರಮುಖ ವಸ್ತುವಾಗಿದೆ. ಉತ್ತರ ಭಾರತದಲ್ಲಿ ದಾಲ್ / ದಾಲ್ ಕಿಚಡಿಯಂತಹ ಆಹಾರ ಪದಾರ್ಥಗಳು ಪ್ರಮುಖವಾಗಿದ್ದರೆ ದಕ್ಷಿಣ ಭಾರತದ ಭಾಗದಲ್ಲಿ ಸಾಂಬಾರ್ ಸೇರಿದಂತೆ ಹಲವು ಅಡುಗೆಗಳಲ್ಲಿ ತೊಗರಿ ಬೇಳೆಯನ್ನು ಬಳಸಲಾಗುತ್ತದೆ. ಆದರೆ, ತೊಗರಿಬೇಳೆಯಲ್ಲಿ ಆಗುತ್ತಿರುವ ಕೆಲವೊಂದು ವಿಷಯದ ಬಗ್ಗೆ ಇದೀಗ ಆತಂಕಕಾರಿ ವರದಿಯೊಂದು ಬಂದಿದೆ. ಅದೇನು ಎನ್ನುವ ವಿವರ ನೋಡೋಣ.

ತೊಗರಿಬೇಳೆಯಲ್ಲಿ ಕೆಮಿಕಲ್ ಅಂಶಗಳನ್ನು ಬಳಸಲಾಗುತ್ತಿದೆ. ಅಲ್ಲದೆ ಬಣ್ಣ ಸೇರಿಸಿರುವ ಕೇಸರಿ ಬೇಳೆಯನ್ನು ಸಹ ತೊಗರಿ ಬೇಳೆಯಲ್ಲಿ ಬೆರೆಸಲಾಗುತ್ತಿದೆ. ಇದರಿಂದ ಹಲವು ಆರೋಗ್ಯ ಸಮಸ್ಯೆ ಎದುರಾಗಲಿದೆ ಎನ್ನುವ ಗಂಭೀರ ವಿಷಯ ಇದೀಗ ಬಹಿರಂಗವಾಗಿದೆ. ಈ ವರದಿಯನ್ನು ಆಹಾರ ಸುರಕ್ಷತಾ ಇಲಾಖೆ ಪ್ರಕಟಿಸಿದ್ದು. ಸಾಂಬಾರ್ ಪ್ರಿಯರು ಆತಂಕಕ್ಕೆ ಒಳಗಾಗುವಂತೆ ಆಗಿದೆ. ಇದು ತೊಗರಿಬೇಳೆಯನ್ನೇ ಹೋಲುವಂತೆ ಇದ್ದರೂ ಇದರಲ್ಲಿ ರಾಸಾಯನಿಕ ಮಿಶ್ರಣ ಮಾಡಲಾಗುತ್ತಿದೆ. ಕೇಸರಿ ಬೇಳೆಗೆ ಬಣ್ಣ ಬರಿಸುವ ಉದ್ದೇಶದಿಂದ ಟಾಟ್ರಾಜಿನ್ (ಇ- 102) ಬಣ್ಣವನ್ನು ಮಿಶ್ರಣ ಮಾಡಲಾಗುತ್ತಿದೆ ಎನ್ನುವ ಆಘಾತಕಾರಿ ಅಂಶವು ಇದೀಗ ಬೆಳಕಿಗೆ ಬಂದಿದೆ.
ತೊಗರಿಬೇಳೆ ಮತ್ತು ಕಲಬೆರಕೆ ಬೇಳೆಯ ವ್ಯತ್ಯಾಸವೇ ತಿಳಿಯದಂತೆ ಇದರಲ್ಲಿ ಮಿಶ್ರಣ ಮಾಡಲಾಗುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ಭಾಗದಲ್ಲಿ ಇದನ್ನು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬೇಳೆಗೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿಗೆ ಬೇಳೆ ಆಮದು ಸಹ ಇದೆ. ಹೀಗಾಗಿ ಇಲ್ಲೂ ಈ ಬಗ್ಗೆ ಆತಂಕ ಹೆಚ್ಚಾಗಿದೆ.
ಗಂಭೀರ ಆರೋಗ್ಯ ಸಮಸ್ಯೆಯ ಎಚ್ಚರಿಕೆ: ಇನ್ನು ತೊಗರಿಬೇಳೆಯಲ್ಲಿ ಬಣ್ಣ ಹಾಕಿರುವ ಕೇಸರಿ ಬೆಳೆಯನ್ನು ಬೆರೆಸುತ್ತಿರುವುದರಿಂದ ಇದನ್ನು ಸೇವಿಸಿದರೆ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದು ಎಚ್ಚರಿಸಲಾಗಿದೆ. ಇದರಿಂದ ಲ್ಯಾಥರಿಸಂ ಎನ್ನುವ ಅಂಗಾಂಗ ವೈಕಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಷ್ಟೇ ಅಲ್ಲ ಕ್ಯಾನ್ಸರ್ ಹಾಗೂ ನರರೋಗ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಲಾಗಿದೆ.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ, ಕಲ್ಲಂಗಡಿ ಹಣ್ಣಿಗೆ ಬಣ್ಣ ಮಿಶ್ರಣದಂತಹ ಸುದ್ದಿಗಳನ್ನು ಕೇಳಿದ ಬೆನ್ನಲ್ಲೇ ಅಡುಗೆ ತಯಾರಿಕೆಯಲ್ಲಿನ ಪ್ರಮುಖ ಪದಾರ್ಥದ ಬಗ್ಗೆಯೇ ಸ್ಫೋಟಕ ಅಂಶವೊಂದು ಬಹಿರಂಗವಾಗಿದೆ. ಕಬಾಬ್ ಮತ್ತು ಗೋಬಿ ಮಂಚೂರಿಯನ್ ಬಗ್ಗೆಯೂ ಈಚೆಗೆ ಕೆಲವೊಂದು ಆಘಾತಕಾರಿ ಅಂಶಗಳು ವರದಿಯಾಗಿದ್ದವು.
ಜೇನುತುಪ್ಪ ಬಳಕೆಯ ಬಗ್ಗೆಯೂ ಆತಂಕ: ಇನ್ನು ಜೇನುತುಪ್ಪದಲ್ಲೂ ಕಲಬೆರಕೆಗಳನ್ನು ಅಥವಾ ರಾಸಾಯನಿಕವನ್ನು ಬಳಸಲಾಗುತ್ತಿದೆ ಎನ್ನುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಎಲ್ಲಾ ಮಾದರಿಯ ಜೇನುತುಪ್ಪದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವುದಕ್ಕೆ ನಿರ್ಧರಿಸಲಾಗಿದೆ.












Click it and Unblock the Notifications