ಕಾವೇರಿ : ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆಯ 3 ಮನವಿ

Posted By:
Subscribe to Oneindia Kannada

ಬೆಂಗಳೂರು, ಸೆ 29: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೆಹಲಿಯ ಶ್ರಮಶಕ್ತಿ ಭವನದಲ್ಲಿ ಗುರುವಾರ (ಸೆ 29) ಬೆಳಗ್ಗೆ 11.30ಕ್ಕೆ ಕೇಂದ್ರ ಜನಸಂಪನ್ಮೂಲ ಖಾತೆಯ ಸಚಿವೆ ಉಮಾಭಾರತಿ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಸ್ಥರ ಸಭೆಯನ್ನು ಕರೆದಿದ್ದಾರೆ.

ರಾಜ್ಯದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮಿಳುನಾಡು ಸಿಎಂ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿರುವುದರಿಂದ ಆ ರಾಜ್ಯದ ಪರವಾಗಿ ಲೋಕೋಪಯೋಗಿ ಸಚಿವ ಪಳನಿಸ್ವಾಮಿ ಭಾಗವಹಿಸಲಿದ್ದಾರೆ.
(ಆದೇಶ ಪಾಲಿಸುವಂತೆ ಸಿದ್ದರಾಮಯ್ಯಗೆ ಹೇಳಿ)

shobha-karandlaje-requested-cm-to-demand-center-cauvery-issue

ಈ ನಡುವೆ, ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಾವೇರಿ ನದಿ ನೀರಿನ ಹೋರಾಟದಲ್ಲಿ ರಾಜ್ಯ ಸರಕಾರವು ಈ ತಕ್ಷಣ ಈ ಮೂರನ್ನು ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ.

ಶೋಭಾ, ಸಿಎಂ ಬಳಿ ಮಾಡಿರುವ ಮೂರು ಮನವಿ ಇಂತಿದೆ:

1. ಇಂದು ಉಮಾಭಾರತಿ ಭೇಟಿ ಸಂದರ್ಭದಲ್ಲಿ ಕೇಂದ್ರದಿಂದ ತಜ್ಞರ ಸಮಿತಿಯನ್ನು ಎರಡೂ ರಾಜ್ಯಗಳ ಜಲಾಶಯಗಳಿಗೆ ಕಳುಹಿಸಿ ವಸ್ತುಸ್ಥಿತಿ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸುವಂತೆ ಕೋರುವುದು.

2. ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿರುವ ಶಶಿಶೇಖರನ್ ಅವರ ಬದಲಾವಣೆಗೆ ಕೋರುವುದು.

3. ಇಂದೇ ಸುಪ್ರೀಂಕೋರ್ಟಿನ ಮುಂದೆ ಈಗಿರುವ ದ್ವಿಸದಸ್ಯ ಪೀಠವನ್ನು ಬದಲಾಯಿಸುವಂತೆ ವಿನಂತಿಸುವುದು.

ಮೇಲಿನ ಮೂರು ಅಂಶಗಳನ್ನು ರಾಜ್ಯ ಸರಕಾರವು ಕೇಳದೇ ಹೋದರೆ ಕಾವೇರಿ ನದಿನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವುದು ಮುಂದುವರಿಯಬಹುದು ಎಂದು ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಗಳಿಗೆ ವಿನಂತಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cauvery issue, Uma Bharti meeting with Karnataka and TN heads: MP Shobha Karandlaje requested CM to demand three points
Please Wait while comments are loading...