ಶಿವಮೊಗ್ಗ ಘಟನೆ: ಆನೆಗಳ ಈ ವರ್ತನೆ ಸ್ವಾಭಾವಿಕ! ರಾಮಲಿಂಗಾ ರೆಡ್ಡಿ; ಧಾರ್ಮಿಕ ಉತ್ಸವಗಳಲ್ಲಿ ಆನೆ ಬಳಕೆಗೆ ಹೊಸ ನಿಯಮ

ಬೆಂಗಳೂರು: ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ ವೇಳೆ ಆನೆ ಸೋಮಣ್ಣನ ವರ್ತನೆ, ಆನೆ ಮೇಲಿಂದ ಉರುಳಿದ ಅಂಬಾರಿಯು ಘಟನೆ ನಾಡಿನಾದ್ಯಂತ ಚರ್ಚೆ ಆಗುತ್ತಿದೆ. ಆನೆಗೆ ಗಾಯವಾಗಿತ್ತು, ಶಿಬಿರದ ಆನೆಯನ್ನು ಈ ರೀತಿಯ ಮೆರವಣಿಗೆಗೆ ಬಳಸುವ ಅಗತ್ಯವಿರಲಿಲ್ಲ ಎಂದು ನಟಿ ರಮ್ಯಾ ಸೇರಿದಂತೆ ಕೆಲವರು ದೂರಿದ್ದರು. ಇದರ ಬೆನ್ನಲ್ಲೇ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿ, 'ಘಟನೆಯಲ್ಲಿ ಜೀವ ಹಾನಿ ಆಗಿಲ್ಲ ಎಂಬುದು ಸಮಾಧಾನಕರ, ಆನೆಗಳ ಇಂಥಹ ವರ್ತನೆ ಸ್ವಾಭಾವಿಕ' ಎಂದಿದ್ದಾರೆ. ಆಗಿದ್ದೇನು, ಸಚಿವರು ಹೇಳಿದ್ದೇನು?

ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದ ಸೋಮಣ್ಣ ಎಂಬ ಅರಣ್ಯ ಇಲಾಖೆಯ ಆನೆಯು ದಿನಾಂಕ 21/10/2026 ರಂದು ಶಿವಮೊಗ್ಗದಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಭಾಗವಹಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ನಿಯಂತ್ರಣ ತಪ್ಪಿ ಓಡಿತು. ಪರಿಣಾಮವಾಗಿ ಒಂದು ಕಾರು ಹಾಗೂ ಕೆಲವು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಈ ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ಹಾಗೂ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದರು.

Shivamogga Dasara Elephant Incident

ಆನೆಗಳ ಈ ರೀತಿ ವರ್ತನೆ ಸ್ವಾಭಾವಿಕ!

ಅರಣ್ಯ ಇಲಾಖೆಯ ಅಥವಾ ಖಾಸಗಿ ಸ್ವಾಮ್ಯದ ಆನೆಗಳನ್ನು ರಾಜ್ಯದ ವಿವಿಧ ಧಾರ್ಮಿಕ ಉತ್ಸವಗಳು, ಜಾತ್ರೆಗಳು ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸುವ ಸಂದರ್ಭದಲ್ಲಿ ಅಪಾರ ಜನಸಂದಣಿ, ಅಧಿಕ ಗದ್ದಲ, ಪಟಾಕಿಗಳ ಸದ್ದು, ವಾದ್ಯಗಳ ಘೋಷ ಹಾಗೂ ಇತರೆ ತೀವ್ರ ಶಬ್ದಗಳ ಪರಿಣಾಮವಾಗಿ ಆನೆಗಳು ಒತ್ತಡಕ್ಕೆ ಒಳಗಾಗಿ ವಿಚಲಿತಗೊಂಡು ಅನಿರೀಕ್ಷಿತವಾಗಿ ವರ್ತಿಸುವ ಸಾಧ್ಯತೆ ಇರುವುದು ಸ್ವಾಭಾವಿಕವಾಗಿದೆ ಎಂದು ಹೇಳಿದ್ದಾರೆ.

ಇಂತಹ ಧಾರ್ಮಿಕ ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಕೆ ಮಾಡುವ ಸಂದರ್ಭದಲ್ಲಿ ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಸೂಚಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ಅಲ್ಲದೇ ಮುಂದೆ ಹೀಗೆ ಆನೆಗಳ ಬಳಕೆ ವೇಳೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಅಂತಲೂ ಅವರು ನಿರ್ದೇಶಿಸಿದ್ದಾರೆ.

ಸಚಿವರು ಸೂಚಿಸಿದ ಕ್ರಮಗಳು

* ಕಾರ್ಯಕ್ರಮದ ಆಯೋಜಕರು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಸಂಬಂಧಿಸಿದ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು.

* ಕಾರ್ಯಕ್ರಮದಲ್ಲಿ ಭಾಗವಹಿಸುವ ಆನೆಗಳಿಗೆ ಕಡ್ಡಾಯವಾಗಿ ಕನಿಷ್ಠ 20 ದಿನಗಳ ಪೂರ್ವ ತರಬೇತಿ (ತಾಲೀಮು) ನೀಡಬೇಕು.

* ಆನೆಗಳು ಮಾನಸಿಕ ಹಾಗೂ ದೈಹಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸನ್ನದ್ಧವಾಗಿರುವುದನ್ನು ಸಂಬಂಧಿತ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.

* ಅಪಾರ ಜನಸಂದಣಿ, ಗದ್ದಲ ಹಾಗೂ ತೀವ್ರ ಶಬ್ದಮಟ್ಟಗಳಿಗೆ ಆನೆಗಳು ಸಮರ್ಪಕವಾಗಿ ಹೊಂದಿಕೊಳ್ಳಬಲ್ಲವು ಎಂಬುದನ್ನು ಪರಿಶೀಲಿಸಿದ ನಂತರವೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು.

* ಕಾರ್ಯಕ್ರಮದ ಅವಧಿಯಲ್ಲಿ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.

ಈ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ವತಿಯಿಂದ ಸ್ಪಷ್ಟ ಹಾಗೂ ಸಮಗ್ರ ಮಾರ್ಗಸೂಚಿಗಳನ್ನು ತುರ್ತಾಗಿ ಹೊರಡಿಸಿ, ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿತ ಅಧಿಕಾರಿಗಳು ಹಾಗೂ ಕಾರ್ಯಕ್ರಮದ ಆಯೋಜಕರಿಗೆ ನಿರ್ದೇಶನ ನೀಡುವುದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅವರು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ನಟಿ ರಮ್ಯಾ ಆಗ್ರಹವೇನು?

ಶಿವಮೊಗ್ಗ ಘಟನೆ ಕುರಿತು ಎಕ್ಸ್ ಮಾಡಿದ್ದ ನಟಿ ರಮ್ಯಾ ಅವರು, ದಸರಾ ಆನೆ ಸೋಮಣ್ಣಗೆ ಗಾಯವಾಗಿತ್ತು. ಆತನಿಕಗೆ ಚಿಕಿತ್ಸೆ ಅಗತ್ಯವಿತ್ತು. ಅದನ್ನು ಮಾಡಲು ಸಾಧ್ಯವಾಗಲಿಲ್ವವೇ? ಎಂದು ಪ್ರಶ್ನಿಸಿದ್ದರು. ಇಂತಹ ಮೆರವಣಿಗೆಯಲ್ಲಿ ಶಿಬಿರದ ಆನೆ ಬಳಕೆ ಬೇಡ. ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಟ್ಯಾಗ್ ಮಾಡಿ ಕೋರಿದ್ದರು. ಅದರ ಬೆನ್ನಲ್ಲೆ ಸಚಿವರು ಘಟನೆ, ಆನೆ ವರ್ತನೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+