ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಮುಖಂಡರ ರಾಜಕಾರಣಕ್ಕೆ ಬ್ರೇಕ್

ಬೆಂಗಳೂರು, ಅಕ್ಟೋಬರ್ 13: ಸ್ತ್ರೀ ಶಕ್ತಿ ಸಂಘಟನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.

ಸ್ತ್ರೀ ಶಕ್ತಿ ಸಂಘಟನೆಗಳಲ್ಲಿ ಸಕ್ರಿಯವಾಗಿ ಇರಲು ಬಯಸುವ ಯಾವುದೇ ವ್ಯಕ್ತಿ ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿ ಆಗುವಂತಿಲ್ಲ. ಅಂದರೆ ಸಕ್ರಿಯ ಸದಸ್ಯ ಆಗುವಂತಿಲ್ಲ. ಒಂದು ವೇಳೆ ರಾಜಕೀಯ ಪಕ್ಷದಲ್ಲಿ ಸಕ್ರಿಯನಾಗಿದ್ದರೆ ಸ್ತ್ರೀ ಶಕ್ತಿ ಸಂಘಟನೆಗಳಲ್ಲಿ ಪ್ರತಿನಿಧಿ ಆಗುವಂತಿಲ್ಲ.

ಮಹಿಳಾ ಸಬಲೀಕರಣದ ಉದ್ದೇಶದಿಂದ ಸ್ಥಾಪನೆಯಾಗಿರುವ ಸ್ತ್ರೀಶಕ್ತಿ ಒಕ್ಕೂಟಗಳನ್ನು ರಾಜಕೀಯ ಸಹವಾಸದಿಂದ ದೂರವಿಡಲು ಪಂಚಸೂತ್ರಗಳನ್ನು ಹೆಣೆಯಲಾಗಿದೆ.

SHG representatives cant involve in political parties

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ನೋಂದಾಯಿತವಾಗಿರುವ ಒಕ್ಕೂಟಗಳ ಕಾರ್ಯನಿರ್ವಹಣೆ ಬೈಲಾಗೆ ಹೊಸ ನಿಬಂಧನೆ ಸೇರಿಸಲು ಇಲಾಖೆ ಆದೇಶ ನೀಡಿದೆ. ಈ ಕುರಿತು ಎಲ್ಲಾ ಡಿಡಿಗಳಿಗೂ ಲಿಖಿತ ಪತ್ರ ರವಾನಿಸಲಾಗಿದೆ.

ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದುಕೊಂಡೇ ಹಲವು ಕಡೆಗಳಲ್ಲಿ ಒಕ್ಕೂಟಗಳನ್ನು ಮುನ್ನಡೆಸಿದ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೂ ಕಡಿವಾಣ ಹಾಕಲಾಗುತ್ತಿದ್ದು, ಏಕಕಾಲದಲ್ಲಿ ಒಂದು ಹುದ್ದೆಯನ್ನು ನಿರ್ವಹಿಸಬೇಕೆಂಬ ನಿಯಮ ತರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+