Sharanabasappa Darshanapur Profile: ಸಿದ್ದರಾಮಯ್ಯ ಸಂಪುಟದಲ್ಲಿ ಹಿರಿಯ ನಾಯಕನಿಗೆ ಮಂತ್ರಿಗಿರಿ
ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಶಹಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕಾರಣರಾದ ಹಿರಿಯ ನಾಯಕ ಶರಣಬಸಪ್ಪ ದರ್ಶನಾಪುರ ಅವರು ಬಹುಮತ ಪಡೆದವರು. ಅನೇಕ ವರ್ಷಗಳಿಂದ ಕಾಂಗ್ರೆಸ್ ಸಿದ್ಧಾಂತ ನಂಬಿ ಪಕ್ಷದಲ್ಲಿರುವ ಶರಣಬಸಪ್ಪ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸಚಿವರ ಪೂರ್ಣ ಹೆಸರು ಶರಣಬಸಪ್ಪ ಗೌಡ ದರ್ಶನಾಪುರ ಅವರ ಹುಟ್ಟು, ಶಿಕ್ಷಣ, ರಾಜಕೀಯ ಇತಿಹಾಸ ನೋಡುವುದಾದರೆ, ಅವರು ದಿವಂಗತ ಬಾಪುಗೌಡ ದರ್ಶನಾಪುರ ಅವರ ಪುತ್ರರಾಗಿ 1961ರ ಮಾರ್ಚ್‌ನಲ್ಲಿ ಜನಿಸಿದರು. ಅವರಿಗೆ ಪತ್ನಿ ಭಾರತಿ ದರ್ಶನಾಪುರ, ಒಬ್ಬರು ಪುತ್ರಿ ಮತ್ತು ಒಬ್ಬರು ಪುತ್ರ ಇದ್ದಾರೆ.

ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕಲಬುರಗಿ ಜಿಲ್ಲೆಯಲ್ಲಿನ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಕಾಲೇಜಿನ ಪದವಿ ವಿಧ್ಯಾರ್ಥಿಯಾಗಿದ್ದಾರೆ. ರಾಜಕೀಯಕ್ಕೂ ಮುನ್ನ ಅವರು 1985-1989 ಅವಧಿಯಲ್ಲಿ ರವರೆಗೆ ಲಿಫ್ಟ್ ನೀರಾವರಿ ಕಾರ್ಪೊರೇಷನ್ ಈಗಿನ ವಿಜಯಪುರದಲ್ಲಿ ಅಂದು ಸಹಾಯಕ ಎಂಜಿನಿಯರ್ ದುಡಿದವರು.
ನಂತರ 1992ರಲ್ಲಿ ಇಂಜಿನಿಯರಿಂಗ್ ಪದವೀಧರ ಕ್ಷೇತ್ರ ಕಲಬುರಗಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಚುನಾಯಿತರಾದರು. ಬಳಿಕ 1996 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್ ನಿಯಮಿತದ ಸಂಸ್ಥಾಪಕ ಅಧ್ಯಕ್ಷರಾಗಿಯು ಅವರು ಕಾರ್ಯ ನಿರ್ವಹಿಸಿದರು. ಕೆಲ ಕಾಲ ಅವರು ಗುಲ್ಬರ್ಗಾ ಇಂಜಿನಿಯರ್ಸ್ ಫ್ಯಾಮಿಲಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷರಾಗಿ ದುಡಿದರು. ಈಗ ಅದೇ ಕ್ಲಬ್ ಪೋಷಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರ ರಾಜಕೀಯ ಜೀವನ ಪರಿಚಯ
ಶರಣಬಸಪ್ಪ ದರ್ಶನಾಪುರ ಅವರು 1994ರಿಂದ ಈವರೆಗೆ ಐದು ಬಾರಿ ಶಹಾಪುರ ಕ್ಷೇತ್ರದಿಂದಲೇ ಆಯ್ಕೆಯಾಗುತ್ತಾ ಬಂದಿದ್ದಾರೆ. 1994ರಲ್ಲಿ ಜನತಾ ದಳದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತ ಪಡೆದು ಗೆದ್ದರು. ಆದರೆ ನಂತರ 1999ರ ಚುನಾವಣೆಯಲ್ಲಿ ಮತ್ತದೇ ಪಕ್ಷದಿಂದ ಕಣಕ್ಕಿಳಿದು ಸೋಲು ಕಂಡರು. 1996 ರಲ್ಲಿ ಜೆಎಚ್ ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದರು.
ಯಾವತ್ತೂ ಪಕ್ಷ ಸಂಘಟನೆ ನಿಲ್ಲಿಸದ ಅವರು ಮಾರನೇ ಬಾರಿಯ ಚುನಾವಣೆಯಲ್ಲಿ (2004) ಕಾಂಗ್ರೆಸ್ ವಿರುದ್ಧ ಜೆಡಿಎಸ್‌ನಿಂದಲೇ ಸ್ಪರ್ಧಿಸಿ ಗೆದ್ದು ಬೀಗಿದರು. ಇದಾದ ಬಳಿಕ ಬದಲಾದ ಕೆಲವು ರಾಜಕೀಯ ಕಾರಣಗಳಿಂದಾಗಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.
ಕರ್ನಾಟಕದ ರಾಜ್ಯ ವಿಧಾನಸಭಾ ಚುನಾವಣೆ 2023ರಲ್ಲಿ ಅವರು ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬರೊಬ್ಬರಿ 78353 ಮತಗಳನ್ನು ಪಡೆದು ವಿಜಯ ಸಾಧಿಸಿದರು. ಈ ವೇಳೆ ಅವರ ವಿರುದ್ಧ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಅಮೀನ್ ರೆಡ್ಡಿ ಯಾಲಗಿ ಅವರು 52326ಮತ ಪಡೆದು ಪರಾಭವಗೊಂಡರು.
ಜವಾಬ್ದಾರಿ ನಿರ್ವಹಿಸಿದ ಅನುಭವದ ಮಾಹಿತಿ
ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಈವರೆಗೆ ಅವರು ನಾಲ್ಕು ಬಾರಿ 2008ರಿಂದ 2023ರವರೆಗೆ ಶಹಾಪುರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಭಾರಿಸಿದ್ದಾರೆ. ಶರಣಬಸಪ್ಪ ಅವರು ಎಚ್‌ಡಿ ಕುಮಾರಸ್ವಾಮಿಯವರ ಮೊದಲ ಸಂಪುಟದಲ್ಲಿ 2006ರಲ್ಲಿ ಸುಮಾರು ಒಂದು ವರ್ಷ ಕಾಲ ಕೃಷಿ ಮಾರುಕಟ್ಟೆ ಸಚಿವರಾಗಿ ಸೇವೆ ನೀಡಿದರು. ಅಲ್ಲದೇ ಅವಿಭಜಿತ ಗುಲ್ಬರ್ಗಾ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿಯು ಎರಡು ಭಾರಿ ಕೆಲಸ ಮಾಡಿದ ಅನುಭವ ಅವರಿಗಿದೆ.
ಸುಮಾರು ಮೂರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ, ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವ ಈ ಹಿರಿಯ ನಾಯಕ ಶರಣಬಸಪ್ಪ ದರ್ಶನಾಪುರ ಅವರಿಗಿದೆ. ಈ ಕಾರಣದಿಂದ ಅವರಿಗೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿದೆ. ತಮ್ಮ ಶಹಾಪುರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಕ್ಷೇತ್ರದ ಚಿತ್ರಣ ಬದಲಿಸಲು ಅವರ ಸಜ್ಜಾಗಿದ್ದಾರೆ.












Click it and Unblock the Notifications