ಗುಜರಾತಿ ಗುಲಾಮಿತನಕ್ಕೆ ನಾಚಿಕೆಯಗಲ್ಲವೇ: ನಿರ್ಮಲ ಸೀತಾರಾಮನ್‌ಗೆ ಜೆಡಿಎಸ್ ತರಾಟೆ

ಬೆಂಗಳೂರು, ಏಪ್ರಿಲ್‌ 25: ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಮನ್‌ ಅವರು ನಾನು ಈಗಲೂ ಅಮುಲ್ ಖರೀದಿಸುತ್ತೇನೆ. ಅದು ಕರ್ನಾಟಕದ ವಿರುದ್ಧ ಎಂದು ಅಲ್ಲ ಎಂದು ಹೇಳಿದ್ದರ ವಿರುದ್ಧ ಜೆಡಿಎಸ್‌ ಟ್ವೀಟ್‌ ಮೂಲಕ ತಿರುಗೇಟು ನೀಡಿದೆ.

ನಿರ್ಮಲ ಸೀತಾರಾಮನ್‌ ಅವರಿಗೆ ಖಾರವಾಗಿ ಪ್ರಶ್ನಿಸಿರುವ ಜೆಡಿಎಸ್‌ ನಂದಿನಿ ಇಲ್ಲದಿರುವಾಗ ಅಮುಲ್ ಖರೀದಿಸುವುದು ಕರ್ನಾಟಕದ ವಿರುದ್ಧದ ಕೃತ್ಯವಲ್ಲ ಎಂದು ರಾಜ್ಯದಿಂದಲೆ ಸಂಸದರಾಗಿರುವ ಸಚಿವೆ ನಿರ್ಮಲ ಸೀತಾರಾಮನ್‌ ಹೇಳಿದ್ದಾರೆ. ಆದರೆ ನಂದಿನಿ ಇಲ್ಲದಾಗುವಂತೆ ಮಾಡಲು ಹವಣಿಸುತ್ತಿರುವವರು ಯಾರು ಎಂದು ಅವರು ಹೇಳಿಲ್ಲ. ಯಾಕೆಂದರೆ ಇದು 'ಗುಜರಾತಿ ಕುತಂತ್ರಿ'ಗಳ ಕೃತ್ಯ ಎಂದು ಅವರಿಗೂ ತಿಳಿದಿದೆ ಎಂದು ಹೇಳಿದೆ.

Shame on Gujarati slavery: JDS hits out at Nirmala Sitharaman

ರಾಜ್ಯದಿಂದಲೆ ಆಯ್ಕೆಯಾಗಿರುವ ನಿರ್ಮಲ ಸೀತಾರಾಮನ್‌ ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡುವಷ್ಟಾದರೂ ನಿಯತ್ತು ತೋರಬೇಕಿತ್ತು. ಕನ್ನಡ ನೆಲದಲ್ಲೆ ನಿಂತು ಕನ್ನಡಿಗರ ವಿರುದ್ಧವೇ ಮಾತನಾಡುವ ಕರ್ನಾಟಕದಿಂದಲೇ ಆಯ್ಕೆಯಾದ ಬಿಜೆಪಿಯ ಸಂಸದೆಯ 'ಗುಜರಾತಿ ಗುಲಾಮಿ'ತನಕ್ಕೆ ನಾಚಿಕೆಯಾಗಬೇಕು. ಯಾವುದೆ ಕಾರಣಕ್ಕೂ ಗುಜರಾತಿ ಉದ್ಯಮಿಗಳಿಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

'ಲಿಂಪಿ ವೈರಸ್‌'ನಿಂದಾಗಿ ಜಾನುವಾರುಗಳು ಅಸುನೀಗಿ ರೈತರು ಕಣ್ಣೀರು ಸುರಿಸುತ್ತಿರುವಾಗ, ಗೋವಿನ ಹೆಸರು ಹೇಳಿ ರಾಜಕೀಯ ಮಾಡುವ ಬಿಜೆಪಿ ಸರ್ಕಾರವಾಗಲಿ, ನಿರ್ಮಲ ಸೀತಾರಾಮನ್‌ ಆಗಲಿ ಅನುಕಂಪ ಕೂಡಾ ವ್ಯಕ್ತಪಡಿಸಿರಲಿಲ್ಲ. ಆದರೆ ಗುಜರಾತಿ ವ್ಯಾಪಾರಿಗಳ ಹಿತಾಸಕ್ತಿಗೆ ಧಕ್ಕೆಯಾದಾಗ ರಾಜ್ಯಕ್ಕೆ ಓಡೋಡಿ ಬರುತ್ತಾರೆ. ಹಾಗಾದರೆ ಇವರು ಯಾರ ಪರ? ಎಂದು ಪ್ರಶ್ನಿಸಿದೆ.

Shame on Gujarati slavery: JDS hits out at Nirmala Sitharaman

ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಟ್ವೀಟ್‌ ಮಾಡಿ ನಿರ್ಮಲ ಸೀತಾರಾಮನ್‌ ಅವರ ತರಾಟೆಗೆ ತೆಗೆದುಕೊಂಡಿದ್ದರು. ಈಗಾಗಲೇ ನಿರ್ಮಲಾ ಸೀತಾರಾಮನ್ ಅವರಿಗೆ ಹತ್ತಾರು ಬಾರಿ ಪ್ರಶ್ನೆಗಳನ್ನು ಕೇಳಿದ್ದೇನೆ ಆದರೂ ಅವರು ಹೇಳಿದ ಸುಳ್ಳುಗಳನ್ನೆ ಹೇಳಿಕೊಂಡು ಓಡಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದು, ರಾಜ್ಯಕ್ಕೆ ಕೇಂದ್ರದ ಕೊಡುಗೆಗಳೇನು? ಎಂದು ಪ್ರಶ್ನಿಸಿದ್ದರು.

ಆರ್ಥಿಕತೆ, ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕದ ಬೆನ್ನಿಗೆ ಎಷ್ಟು ಸಾರಿ ಮೋದಿ ಅಮಿತ್ ಶಾ ಸರ್ಕಾರ ಇರಿದಿದೆ ಎಂಬುದರ ಗಾಯದ ಗುರುತುಗಳು ಹೇಳುತ್ತಿವೆ ಎಂದು ಹೇಳಿದ್ದಾರೆ. ಅಲ್ಲದೇ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಂತರ ನಮ್ಮ ನಂದಿನಿಯ ಬಗ್ಗೆ ಮಾತನಾಡಲಿ ಸಿದ್ದರಾಮಯ್ಯ ಗರಂ ಆಗಿದ್ದರು. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹೈಕಮಾಂಡ್‌ ನಾಯಕರ ಅಬ್ಬರದ ಪ್ರಚಾರದ ನಡುವೆ ರೈತರ ಜೀವನಾಡಿ ನಂದಿನಿ ಹಾಗೂ ಅಮುಲ್‌ ವಿವಾದ ಜೋರಾಗಿ ಸದ್ದು ಮಾಡುತ್ತಿದೆ. ಈ ಕುರಿತು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+