ಓದಿದ್ದು 10ನೇ ತರಗತಿ, ಕಟ್ಟಿದ್ದು 10,00,00,00,000 ರೂಪಾಯಿ ಮೀರಿದ ಸಾಮ್ರಾಜ್ಯ... Shamanuru Shivashankarappa
ಕನ್ನಡ ನಾಡಿನ ರಾಜಕೀಯದಲ್ಲಿ ಹಾಗೂ ಉದ್ದಿಮೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಹೆಸರು ಕೇಳದೆ ಇರುವ ವ್ಯಕ್ತಿ ಇಲ್ಲ ಎನ್ನಬಹುದು. ಒಂದು ಕಡೆ ತಮ್ಮ ರಾಜಕೀಯ ಸಾಧನೆಗಳ ಜೊತೆಗೆ ಮತ್ತೊಂದು ಕಡೆ ಉದ್ದಿಮೆಗಳನ್ನೂ ಬೆಳೆಸಿ ಹೆಸರು ಮಾಡಿದ್ದು ಶಾಮನೂರು ಶಿವಶಂಕರಪ್ಪ ಅವರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ಪ್ರಬಲವಾಗಿ ಬೆಳೆದು ನಿಲ್ಲಲು & ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ನಿಷ್ಠರಾಗಿ ನಿಂತ ನಾಯಕರಲ್ಲಿ ಶಾಮನೂರು ಶಿವಶಂಕರಪ್ಪ ಮುಂಚೂಣಿಯಲ್ಲಿ ಇರುವ ನಾಯಕರು. ಅದರಲ್ಲೂ ಇವರು ಓದಿದ್ದು 10ನೇ ತರಗತಿ, ಕಟ್ಟಿದ್ದು 10,00,00,00,000 ರೂಪಾಯಿ ಮೀರಿದ ಸಾಮ್ರಾಜ್ಯ...
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಆಗಿದ್ದ ಕಾಂಗ್ರೆಸ್ ಹಿರಿಯ ನಾಯಕ & ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯ ಹಿನ್ನೆಲೆ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕನ್ನಡಿಗರ ರಾಜಧಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು, ಶಾಮನೂರು ಶಿವಶಂಕರಪ್ಪ ವಿಧಿವಶರಾಗಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ದೊಡ್ಡ ಹೆಸರು ಮಾಡಿದ್ದ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಕೋಟಿ ಕೋಟಿ ಜನರಿಗೆ ನೋವು ತಂದಿದೆ. ಹಾಗಾದರೆ ಶಾಮನೂರು ಶಿವಶಂಕರಪ್ಪ ಅವರ ಜೀವನ ಹೇಗಿತ್ತು? ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.

ಸೋಲೇ ಇಲ್ಲದ ಸರದಾರ ಶಾಮನೂರು ಸಾಧನೆಗಳು...
1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿ ಭರ್ಜರಿ ಗೆಲುವಿನೊಂದಿಗೆ ಎಂಟ್ರಿ ಕೊಟ್ಟಿದ್ದ ಶಾಮನೂರು ಶಿವಶಂಕರಪ್ಪ ಅವರು ಕೇವಲ 2 ವರ್ಷ ಅಂದ್ರೆ 1971 ಸಮಯದಲ್ಲಿ ದಾವಣಗೆರೆ ಪುರಸಭೆ ಅಧ್ಯಕ್ಷರೂ ಆದರು. 1994ರ ಸಮಯದಲ್ಲಿ ಮೊದಲ ಬಾರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು ಶಾಮನೂರು ಶಿವಶಂಕರಪ್ಪ. ಅಲ್ಲಿಂದ ಮುಂದಕ್ಕೆ ಹಿಂದೆ ತಿರುಗಿ ನೋಡದ ಶಾಮನೂರು ಶಿವಶಂಕರಪ್ಪ ಅವರು, ಸಾಲು ಸಾಲು ಗೆಲುವು ಕಂಡು ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದರು.
ಭದ್ರಕೋಟೆ ಆಗಿತ್ತು ದಾವಣಗೆರೆ ದಕ್ಷಿಣ ಕ್ಷೇತ್ರ
ದಾವಣಗೆರೆ ದಕ್ಷಿಣ ಕ್ಷೇತ್ರವು ಶಾಮನೂರು ಶಿವಶಂಕರಪ್ಪ ಅವರ ಪಾಲಿಗೆ ಸದಾ ಭದ್ರಕೋಟೆಯೇ ಎನಿಸಿಕೊಂಡಿತ್ತು. ಹಾಗೂ 2008, 2013, 2018 & 2023ರ ವಿಧಾನಸಭೆ ಚುನಾವಣೆಗಳಲ್ಲಿ ಸತತ ಗೆಲುವು ದಾಖಲಿಸಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ್ದರು. ಹಾಗೇ ಕರ್ನಾಟಕ ಸರ್ಕಾರದಲ್ಲಿ, ವಿವಿಧ ಉನ್ನತ ಹುದ್ದೆಗಳನ್ನು ಶಾಮನೂರು ಶಿವಶಂಕರಪ್ಪ ಅವರು ಅಲಂಕರಿಸಿದ್ದರು. ಆದರೆ ಇದೀಗ ಅವರ ಅಗಲಿಕೆ ಅಭಿಮಾನಿಗಳಿಗೆ ತೀವ್ರ ಆಘಾತ ಹಾಗೂ ನೋವು ತರಿಸಿದೆ. ಮತ್ತೊಂದು ಕಡೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.












Click it and Unblock the Notifications