Gram Panchayat; ಬಾಪೂಜಿ ಸೇವಾ ಕೇಂದ್ರದಲ್ಲಿ ಸಿಗುವ ಸೇವೆಗಳ ಮಾಹಿತಿ

ಬೆಂಗಳೂರು, ನವೆಂಬರ್ 07; ಕರ್ನಾಟಕ ಸರ್ಕಾರ ಜನರು ಕಛೇರಿಗಳಿಗೆ ವಿವಿಧ ದಾಖಲೆಗಳನ್ನು ಪಡೆಯಲು ಅಲೆದಾಟ ನಡೆಸುವುದನ್ನು ತಪ್ಪಿಸಲು ಮುಂದಾಗಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಯಲ್ಲಿಯೇ ಹಲವು ಸೇವೆಗಳನ್ನು ಜನರ ಕೈಗೆ ಸಿಗುವಂತೆ ಮಾಡಿದೆ.

ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 'ಬಾಪೂಜಿ ಸೇವಾ ಕೇಂದ್ರ' ಸ್ಥಾಪನೆ ಮಾಡಲಾಗಿದೆ.

Service Availability At Gram Panchayat Know Details

ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಸಮ್ಮಿಲನಗೊಳಿಸಿ ಗ್ರಾಮ ಪಂಚಾಯಿತಿಗಳಲ್ಲಿ ಹಲವಾರು ಸೇವೆಯನ್ನು ನೀಡಲಾಗುತ್ತಿದೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ.

ಇದರಿಂದ ಜನರು ತಮ್ಮ ದಾಖಲೆಗಳಗಾಗಿ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 'ಬಾಪೂಜಿ ಸೇವಾ ಕೇಂದ್ರ' ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 19 ಸೇವೆಗಳು ದೊರೆಯಲಿವೆ, ಅವುಗಳ ವಿವರ ಇಲ್ಲಿದೆ...

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇವೆಗಳು

1. ಕಟ್ಟಡಪರವಾನಗಿ
2. ತೆರಿಗೆ ನಿರ್ಧರಣಾ ಪಟ್ಟಿ ವಿತರಣೆ
3. ಕಟ್ಟಡ ಸ್ವಾಧೀನ ಪತ್ರ
4. ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ
5. ವ್ಯಾಪಾರ ಪರವಾನಗಿ ವಿತರಣೆ (ಹೊಟೇಲ್‌ ಮತ್ತು ಅಂಗಡಿ)
6. ಕಾರ್ಖಾನೆಗೆ ಅನುಮತಿ ಪತ್ರ
7. ಜಾಹೀರಾತು ಪರವಾನಗಿ
8. ನೀರಿನ ಸಂಪರ್ಕ ಕಡಿತ
9. ಕುಡಿಯುವ ನೀರಿನ ನಿರ್ವಹಣೆ (ಸಣ್ಣ ರಿಪೇರಿ)
10, ಬೀದಿ ದೀಪಗಳ ನಿರ್ವಹಣೆ
11. ಗ್ರಾಮ ನೈರ್ಮಲ್ಯ ನಿರ್ವಹಣೆ
12. ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ)
13. ESCOMS ನಿರಾಕ್ಷೇಪಣೆ ಪತ್ರ
14. ಮನರಂಜನಾ ಪರವಾನಗಿ ನೀಡಿಕೆ ( ಹೊಸ/ ಹೆಚ್ಚುವರಿ/ ಬದಲಾವಣೆ)
15. ನಮೂನೆ 9/11 Form 9/11A
16. ನಮೂನೆ 9/11 B-Form 9/11B
17. ರಸ್ತೆ ಅಗೆಯುವುದಕ್ಕಾಗಿ ಅನುಮತಿ
18, ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು (ಎಂ.ಜಿ.ಎನ್‌.ಆರ್‌.ಇ.ಜಿ.ಎಸ್) 11. ಗ್ರಾಮ ನೈರ್ಮಲ್ಯ ನಿರ್ವಹಣೆ
19. ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)

ಕಂದಾಯ ಇಲಾಖೆಯ ಸೇವೆಗಳು

1. ಜನಸಂಖ್ಯೆ ದೃಢೀಕರಣ ಪತ್ರ
2. ಜಾತಿ ಮತ್ತು ಆದಾಯ ದೃಢೀಕರಣ ಪತ್ರ
3. ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1)
4. ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)
5. ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)
6. ವಾಸಸ್ಥಳ ದೃಢೀಕರಣ ಪತ್ರ
7. ಆದಾಯ ದೃಢೀಕರಣ ಪತ್ರ
8. ಗೇಣಿ ರಹಿತ ದೃಢೀಕರಣ ಪತ್ರ
9. ವಿಧವಾ ದೃಢೀಕರಣ ಪತ್ರ
10. ಜೀವಂತ ದೃಢೀಕರಣ ಪತ್ರ
11. ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
12. ಮರು ವಿವಾಹವಾಗದಿರುವ ದೃಢೀಕರಣ ಪತ್ರ
13. ಜಮೀನು ಇಲ್ಲದಿರುವ ದೃಢೀಕರಣ ಪತ್ರ
14. ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
15. ನಿರುದ್ಯೋಗಿ ದೃಢೀಕರಣ ಪತ್ರ
16. ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
17. ವ್ಯವಸಾಯಗಾರರ ದೃಢೀಕರಣ ಪತ್ರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+