School Holiday: ಸೆಪ್ಟೆಂಬರ್ 15 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ರಜೆ.. ರಜೆ.. ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಅಂದಹಾಗೆ ಈ ಸುದ್ದಿ ಕೇಳುತ್ತಿದ್ದಂತೆಯೇ ವಿದ್ಯಾರ್ಥಿಗಳು ಕುಣಿದಾಡುತ್ತಾರೆ. ಅದರಲ್ಲೂ ಭಾನುವಾರ ಕಳೆದು ಸೋಮವಾರ ಬರುವಾಗ ಈ ರೀತಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರೆ ವಿದ್ಯಾರ್ಥಿಗಳ ಖುಷಿ ಮತ್ತಷ್ಟು ಹೆಚ್ಚಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ವಿವಿಧ ಕಾರಣಗಳಿಗೆ ಸಾಲು ಸಾಲು ರಜೆಗಳು ಘೋಷಣೆ ಆಗಿವೆ. ಹಬ್ಬ ಸೇರಿ ಹಲವು ಕಾರಣಗಳಿಗೆ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆಯನ್ನ ಘೋಷಣೆ ಮಾಡಲಾಗಿದೆ. ಹೀಗಿದ್ದಾಗಲೇ, ಸೆಪ್ಟೆಂಬರ್ 15 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಸಿಗುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆ & ತಾಲೂಕುಗಳ ಶಾಲಾ & ಕಾಲೇಜುಗಳಿಗೆ 2025 ಆಗಸ್ಟ್ ತಿಂಗಳಲ್ಲಿ ಭಾರಿ ಭರ್ಜರಿ ರಜೆಗಳೇ ಸಿಕ್ಕಿವೆ. ಈ ರೀತಿ ಒಂದು ಕಡೆ ಶ್ರಾವಣ ಮಾಸ ಶುರುವಾದ ಹಿನ್ನೆಲೆ ಸಾಲು ಸಾಲು ಹಬ್ಬಗಳು & ಪೂಜೆ ಬಂದಿದ್ದ ಹಿನ್ನೆಲೆ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮತ್ತೊಂದು ಕಡೆ ಕರ್ನಾಟಕದಲ್ಲಿ ಭಾರಿ ಮಳೆಯು ಸುರಿಯುತ್ತಿದ್ದ ಕಾರಣಕ್ಕೂ ರಜೆ ಘೋಷಣೆ ಮಾಡಿದ್ದರು. ಹೀಗಿದ್ದಾಗಲೇ, ಸೆಪ್ಟೆಂಬರ್ 15 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಸೆಪ್ಟೆಂಬರ್ 15 ಸೋಮವಾರ ರಜೆ ಘೋಷಣೆ ಬಗ್ಗೆ...
ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಇನ್ನೇನು ದಸರಾ ರಜೆಯು ಸಿಗಲಿದ್ದು, ಸುದೀರ್ಘ ರಜೆ ಕಾರಣಕ್ಕೆ ಭರ್ಜರಿ ಹಬ್ಬ ಆಚರಣೆ ಮಾಡಲು ಮಕ್ಕಳು ಕಾಯುತ್ತಿದ್ದಾರೆ. ಶಾಲಾ & ಕಾಲೇಜು ವಿದ್ಯಾರ್ಥಿಗಳಿಗೆ ಹೀಗೆ ಸಾಲು ಸಾಲು ಸುದೀರ್ಘ ರಜೆ ಸಿಗುತ್ತಿರುವುದು ಮಕ್ಕಳಿಗೆ ಖುಷಿ ನೀಡಿದ್ದರೂ ಅತ್ತ ವಿದ್ಯಾರ್ಥಿಗಳ ಭವಿಷ್ಯ ಬಗ್ಗೆ ಶಿಕ್ಷಕರು & ಪೋಷಕರು ಇದೀಗ ಚಿಂತೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಸೆಪ್ಟೆಂಬರ್ 15 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಕಾರಣ ಏನು? ಮುಂದೆ ಓದಿ.
ರಜೆ.. ರಜೆ.. ರಜೆ ಘೋಷಣೆ?
ಕರ್ನಾಟಕದಲ್ಲಿ ಮತ್ತೆ ಮಳೆರಾಯ ಅಬ್ಬರಿಸಲು ಸಜ್ಜಾಗಿದ್ದು, ಇದೀಗ ಉತ್ತರ ಕನ್ನಡ & ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು & ಹಾಸನ, ಕೊಡಗು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ ಗ್ಯಾರಂಟಿ ಆಗಿದೆ. ಹಾಗೇ ಮೈಸೂರು, ಮಂಡ್ಯ ಸುತ್ತಮುತ್ತ ಕೂಡ ಮಳೆ ಎಂಟ್ರಿ ಬಗ್ಗೆ ಮುನ್ಸೂಚನೆ ಸಿಗುತ್ತಿದೆ. ಹಾಗಾದ್ರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆ ಬರುತ್ತಾ? ಮುಂದೆ ಓದಿ.
ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ಇದೆ. ರಾಯಚೂರು, ವಿಜಯಪುರ ಸೇರಿದಂತೆ ಯಾದಗಿರಿ ಜಿಲ್ಲೆಗಳಲ್ಲೂ ಭಾರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ಇದೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯದಲ್ಲಿ ಹಲವು ಜಿಲ್ಲೆಗಳು & ತಾಲೂಕುಗಳಲ್ಲಿ ಸೆಪ್ಟೆಂಬರ್ 15 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರ ಬೀಳಬೇಕಿದ್ದು, ಭಾನುವಾರ ಸಂಜೆ ತನಕ ಕಾದು ನೋಡಬೇಕಿದೆ.












Click it and Unblock the Notifications