ಕರ್ನಾಟಕ ಬಂದ್.. ನವೆಂಬರ್ 10 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಈ ಶಬ್ಧ ಬಹುಶಃ 2025 ಮುಗಿಯುವ ತನಕ ಕೂಡ ನಿಲ್ಲುವುದಿಲ್ಲ ಅಂತಾ ಕಾಣುತ್ತಿದೆ. ಯಾಕಂದ್ರೆ ಕರ್ನಾಟಕದಲ್ಲಿ ಪದೇ ಪದೇ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಿದೆ. ಅದರಲ್ಲೂ 2025 ಶೈಕ್ಷಣಿಕ ವರ್ಷವು ಶುರುವಾದ ನಂತರ ಶಾಲಾ & ಕಾಲೇಜುಗಳಿಗೆ ಹತ್ತಿರ ಹತ್ತಿರ 2 ತಿಂಗಳು ಅಂದ್ರೆ ಸುಮಾರು 60 ದಿನಗಳ ರಜೆ ಈಗಾಗಲೇ ಸಿಕ್ಕಿಬಿಟ್ಟಿದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್.. ನವೆಂಬರ್ 10 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ.. ರಜೆ.. ರಜೆ.. ಹೀಗೆ ಕರ್ನಾಟಕದಲ್ಲಿ 2025 ಆರಂಭದಲ್ಲೇ ಶಾಲಾ & ಕಾಲೇಜುಗಳಿಗೆ ಭಾರಿ ರಜೆ ಘೋಷಣೆ ಮಾಡಿದ್ರು. ನಂತರ ಶ್ರಾವಣ ಮಾಸ ಶುರುವಾಗಿ ಸಾಲು, ಸಾಲು ಹಬ್ಬಗಳು ಬಂದಿದ್ದ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ಸಿಕ್ಕಾಪಟ್ಟೆ ರಜೆ ಕೂಡ ಸಿಕ್ಕಿವೆ. ಅದರಲ್ಲೂ ದಸರಾ ರಜೆಯನ್ನ, ಸುದೀರ್ಘವಾಗಿ ರ್ಭಜರಿ 1 ತಿಂಗಳಿಗೂ ಹೆಚ್ಚು ಕಾಲ ರಜೆ ಎಂಜಾಯ್ ಮಾಡಿದ್ದ ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಪುಟಾಣಿ ಮಕ್ಕಳಿಗೆ ಇದೀಗ ಮತ್ತೊಂದು ಸುದ್ದಿ ಸಿಗುತ್ತಿದೆ. ಅಂದಹಾಗೆ, ಕರ್ನಾಟಕ ಬಂದ್.. ನವೆಂಬರ್ 10 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಕರ್ನಾಟಕ ಬಂದ್.. ನವೆಂಬರ್ 10 ಸೋಮವಾರ ರಜೆ?
ಹೌದು ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ದಸರಾ ರಜೆ ಭರ್ಜರಿಯಾಗಿತ್ತು, ಸಖತ್ ಎಂಜಾಯ್ ಮಾಡಿ ಅಜ್ಜಿ & ಅಜ್ಜನ ಮನೆಗೆ ಹೋಗಿದ್ದ ಮಕ್ಕಳು ಇದೀಗ ವಾಪಸ್ ಮತ್ತೆ ಶಾಲಾ & ಕಾಲೇಜುಗಳಿಗೆ ಹೋಗುವ ಸಮಯ ಬಂದಿದೆ. ಇಷ್ಟು ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಇತ್ತು, ಹೀಗಾಗಿ ದಿಢೀರ್ ಮತ್ತೆ ಹೇಗೆ ಪಾಠ ಕೇಳಲು ಹೋಗುವುದು? ಅನ್ನೋ ಚಿಂತೆಯಲ್ಲಿ ಮಕ್ಕಳು ಇದ್ದರು. ಆದರೆ ಶಿಕ್ಷಕರು ಮತ್ತು ಪೋಷಕರು ಈಗಷ್ಟೇ ಪಾಠ ಮುಗಿಸಲು ಚಿಂತೆ ಮಾಡುವಾಗ ಮತ್ತೆ ಈಗ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಕರ್ನಾಟಕ ಬಂದ್ ಆಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ.
ಕರ್ನಾಟಕ ಬಂದ್ ಮಾಡಲು ಸಕಲ ಸಿದ್ಧತೆ?
ಅಷ್ಟಕ್ಕೂ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗಿದೆ ಅಂತಾ ಆರೋಪಿಸಿ ಈಗ ದೊಡ್ಡ ಮಟ್ಟದ ಹೋರಾಟ ಶುರುವಾಗಿದೆ. ಇದೇ ಸಮಯದಲ್ಲಿ ಕಬ್ಬು ಬೆಳೆಗಾರರ ಹೋರಾಟವನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಲು ಹೋರಾಟಗಾರರು ಚಿಂತನೆ ಹಾಗೂ ಚರ್ಚೆ ನಡೆಸಿದ್ದಾರೆ. ಈ ಕಾರಣಕ್ಕೆ ಕರ್ನಾಟಕ ಬಂದ್ ಮಾಡುವ ಚಿಂತನೆ ಕೂಡ ನಡೆದಿದೆ. ಅದರಲ್ಲೂ ಗಡಿನಾಡು ಬೆಳಗಾವಿಯಲ್ಲಿ ಈಗ ಕಬ್ಬು ಬೆಳೆಗಾರರ ಹೋರಾಟದ ಕೂಗು ಮುಗಿಲು ಮುಟ್ಟಿದ್ದು, ಪರಿಸ್ಥಿತಿ ಮತ್ತಷ್ಟು ಬಿಸಿ ಬಿಸಿ ಆಗುತ್ತಿದೆ. ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯಾಗಿ ಕಬ್ಬು ಬೆಳೆಗಾರರು ಸಮಸ್ಯೆ ಸುಳಿಗೆ ಸಿಲುಕಿರುವ ಕಾರಣ, ಕರ್ನಾಟಕ ಬಂದ್ ಮಾಡಿ ಹೋರಾಟ ನಡೆಸಿ ಬಿಸಿ ಮುಟ್ಟಿಸೋಕೆ ಈಗ ಚಿಂತನೆ ನಡೆದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ, ಹೀಗಾಗಿ ಕಾದು ನೋಡಬೇಕಿದೆ. ಹೀಗಿದ್ದರೂ ಕಬ್ಬು ಬೆಳೆಗಾರರ ಹೋರಾಟ ರಾಜ್ಯದ ಮೂಲೆ ಮೂಲೆಗೂ ಹಬ್ಬುವುದು ಗ್ಯಾರಂಟಿ ಎಂಬ ಮುನ್ಸೂಚನೆ ದಿಢೀರ್ ಸಿಗುತ್ತಿದೆ.
ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ...
ಮತ್ತೊಂದು ಕಡೆ ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಇದೀಗ ಸರ್ಕಾರ ಕಬ್ಬು ಬೆಳೆಗಾರರ ಜೊತೆಗೆ ಸಂಧಾನ ನಡೆಸಲು ಮಾತುಕತೆಗೆ ಮುಂದಾದರೂ ಅದು ಈ ಸಮಯದಲ್ಲಿ ಸಕ್ಸಸ್ ಆಗಿಲ್ಲ. ಈ ನಡುವೆ ಕಬ್ಬು ಬೆಳೆಗಾರರು ಮತ್ತು ಸಚಿವ ಎಚ್.ಕೆ. ಪಾಟೀಲ್ ಅವರ ನಡುವಿನ ಸಂಧಾನ ಸಭೆ ಕೂಡ ವಿಫಲವಾಗಿದ್ದು, ಸಿಎಂ ಬಳಿಗೆ ನಿಯೋಗ ಬನ್ನಿ ಎಂದು ಸಚಿವರು ಮಾಡಿದ ಮನವಿಯನ್ನು ರೈತರು ತಿರಸ್ಕರಿಸಿದ್ದಾರೆ. ಕಬ್ಬಿಗೆ 3500 ರೂಪಾಯಿ ಬೆಲೆ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಹೋರಾಟ ರಾಜ್ಯದ ಮೂಲೆ ಮೂಲೆಗೂ ಹಬ್ಬುವ ಮುನ್ಸೂಚನೆ ಇದೀಗ ಸಿಗುತ್ತಿದೆ. ರೈತ ಮುಖಂಡರು ನೇರವಾಗಿಯೇ ಕರ್ನಾಟಕ ಬಂದ್ ಮಾಡಿ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದು, ಅದರಲ್ಲೂ ನವೆಂಬರ್ 10 ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ, ಹೀಗಾಗಿ ಕಾದು ನೋಡಬೇಕಿದೆ.
ಕಬ್ಬು ಬೆಳೆಗಾರರ ಹೋರಾಟದಿಂದ ಸಂಚಲನ!
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಹೋರಾಟ ಶುರು ಮಾಡಿದ್ದರೂ ಅದರ ಕಾವು ಇದೀಗ ಇಡೀ ಕರ್ನಾಟಕಕ್ಕೆ ಹಬ್ಬುತ್ತಿದೆ. ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಹೋರಾಟವನ್ನು ಶುರು ಮಾಡಿದ್ದರು. ಅದರಲ್ಲೂ ತಮಗೆ ಕಬ್ಬು ಮಾರಾಟದಲ್ಲಿ ಭಾರಿ ದೊಡ್ಡ ಮೋಸ ಮಾಡಲಾಗುತ್ತಿದೆ ಎಂಬುದು ಕಬ್ಬು ಬೆಳೆಗಾರರ ಆರೋಪ ಆಗಿತ್ತು. ಹಾಗೇ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕೂಡ ಭಾರಿ ಆಕ್ರೋಶ ಹೊರ ಹಾಕುತ್ತಿದ್ದರು ಕಬ್ಬು ಬೆಳೆಗಾರರು. ಹೀಗೆಲ್ಲಾ ಶುರುವಾದ ಕಬ್ಬು ಬೆಳೆಗಾರರ ಹೋರಾಟ ಈಗ ದೊಡ್ಡ ತಿರುವು ಪಡೆಯುವ ನಿರೀಕ್ಷೆ ಇದೆ. ಈ ಸಮಯದಲ್ಲೇ ತಮ್ಮ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸದೇ ಇದ್ದರೆ ನವೆಂಬರ್ 10 ಸೋಮವಾರ ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡುವ ಬಗ್ಗೆ ರೈತರು ಚಿಂತನೆ ನಡೆಸಿದ್ದಾರೆ.
ಸರ್ಕಾರದಿಂದ 3,300 ರೂಪಾಯಿ ಫಿಕ್ಸ್!
ಕಬ್ಬು ಬೆಳೆಗಾರರ ಬೇಡಿಕೆ ಕೊನೆಗೂ ಈಡೇರಿದೆ, ಅಷ್ಟಕ್ಕೂ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಭಾರಿ ಅನ್ಯಾಯ ಆಗಿದೆ ಅಂತಾ ಆರೋಪಿಸಿ ದೊಡ್ಡ ಮಟ್ಟದ ಹೋರಾಟ ಶುರುವಾಗಿತ್ತು. ಇದೇ ಸಮಯದಲ್ಲಿ ಕಬ್ಬು ಬೆಳೆಗಾರರ ಹೋರಾಟವನ್ನ ಇಡೀ ರಾಜ್ಯಾದ್ಯಂತ ವಿಸ್ತರಿಸಲು ಹೋರಾಟಗಾರರು ಚಿಂತನೆ ಹಾಗೂ ಚರ್ಚೆ ನಡೆಸಿದ್ದರು. ಈ ಮಧ್ಯೆ ಇಂದು ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸುವಾಗಲೇ ಕಲ್ಲು ತೂರಾಟ ಕೂಡ ನಡೆದು ಹೋಗಿತ್ತು. ಹೀಗೆ ಕಬ್ಬು ಬೆಳೆಗಾರರ ಹೋರಾಟ ಜೋರಾಗುತ್ತಿದ್ದಂತೆ ಈ ಬಗ್ಗೆ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಸರ್ಕಾರ, 3,300 ರೂಪಾಯಿ ಬೆಂಬಲ ಬೆಲೆ ಫಿಕ್ಸ್ ಮಾಡಿದೆ. ಹೀಗೆ ಸದ್ಯಕ್ಕೆ ಕಬ್ಬು ಬೆಳೆಗಾರರ ಹೋರಾಟ ಸದ್ಯಕ್ಕೆ ನಿಂತಿದ್ದರೂ, ಸಂಪೂರ್ಣವಾಗಿ ಇನ್ನೂ ಒಪ್ಪಿಗೆ ಸಿಕ್ಕ ರೀತಿ ಕಾಣುತ್ತಿಲ್ಲ. ಹೀಗಾಗಿ ಹೋರಾಟದ ಭವಿಷ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು, ಸೋಮವಾರ ಕರ್ನಾಟಕ ಬಂದ್ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications