School Holiday: ಶಾಲೆ ವಿದ್ಯಾರ್ಥಿಗಳಿಗೆ 18 ದಿನ ರಜೆ ಘೋಷಣೆ, ಕಾಲೇಜುಗಳ ಕಥೆ ಏನು?
ರಜೆ.. ರಜೆ.. ರಜೆ.. ಹೀಗೆ ಶಾಲೆ ವಿದ್ಯಾರ್ಥಿಗಳಿಗೆ ದಿಢೀರ್ ಅಂತಾ ಭರ್ಜರಿ ರಜೆ ಘೋಷಣೆ ಆಗಿದೆ. ಅದರಲ್ಲೂ ಈ ವರ್ಷ ಅಂದ್ರೆ 2025 ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದ ಶಾಲಾ & ಕಾಲೇಜುಗಳ ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ಪದೇ ಪದೇ ರಜೆಗಳು ಸಿಕ್ಕಿವೆ. ಮಳೆ ಸೇರಿದಂತೆ ಹಲವು ಕಾರಣಗಳಿಗೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗೆ 60 ದಿನಗಳ ಬೇಸಿಗೆ ರಜೆ ಮುಗಿಸಿಕೊಂಡು ಬಂದ ವಿದ್ಯಾರ್ಥಿಗಳಿಗೆ ಬಂಪರ್ ರಜೆ ಸಿಕ್ಕಿತ್ತು. ಹೀಗಿದ್ದಾಗಲೇ, ಶಾಲೆ ವಿದ್ಯಾರ್ಥಿಗಳಿಗೆ 18 ದಿನ ರಜೆ ಘೋಷಣೆ, ಕಾಲೇಜುಗಳ ಕಥೆ ಏನು?
ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾನೇ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆಯನ್ನ ಘೋಷಣೆ ಮಾಡಲಾಗಿತ್ತು. ಬರೋಬ್ಬರಿ 60 ದಿನ ರಜೆ ಎಂಜಾಯ್ ಮಾಡಿ ಮತ್ತೆ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಆದರೆ ಜೂನ್, ಜುಲೈ & ಆಗಸ್ಟ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಭಾರಿ ಭರ್ಜರಿ ರಜೆಗಳು ಸಿಕ್ಕಿದ್ದವು. ಹೀಗಾಗಿ ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದರು. ಇಂತಹ ಸಮಯದಲ್ಲೇ ಮತ್ತೆ ರಜೆ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 20 ಶನಿವಾರದಿಂದ ಅಕ್ಟೋಬರ್ 7 ಮಂಗಳವಾರ ತನಕ ಒಟ್ಟು 18 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಅರೆ ಹಾಗಿದ್ರೆ ಲಕ್ಷ ಲಕ್ಷ ಕಾಲೇಜು ವಿದ್ಯಾರ್ಥಿಗಳ ಕಥೆ ಏನು?

ಶಾಲೆ ವಿದ್ಯಾರ್ಥಿಗಳಿಗೆ 18 ದಿನ ರಜೆ ಘೋಷಣೆ!
ಅಂದಹಾಗೆ ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡಿದ್ದು ಒಂದು ಕಡೆ ಮಕ್ಕಳಿಗೆ ಅಂದ್ರೆ ವಿದ್ಯಾರ್ಥಿಗಳಿಗೆ ಖುಷಿ ನೀಡಿದೆ. ಆದರೆ ಹೀಗೆಲ್ಲ ಪದೇ ಪದೇ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು ವಿದ್ಯಾರ್ಥಿಗಳ ತಂದೆ ಮತ್ತು ತಾಯಿ ಸೇರಿದಂತೆ ಪೋಷಕರಿಗೆ ಒಂದಷ್ಟು ಟೆನ್ಷನ್ ಕೊಡುತ್ತಿದೆ. ಹಾಗೇ ಇದರ ಜೊತೆಗೆ ಶಿಕ್ಷಕರು ಕೂಡ ಸರಿಯಾಗಿ ಪಾಠ ಆಗಿಲ್ಲ ಅಂತಾ ಬೇಜಾರು ಮಾಡಿಕೊಂಡು, ಮಕ್ಕಳ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿದ್ದಾರೆ. ಹೀಗಿದ್ದಾಗಲೇ, ಶಾಲೆ ವಿದ್ಯಾರ್ಥಿಗಳಿಗೆ 18 ದಿನ ರಜೆ ಘೋಷಣೆ, ಕಾಲೇಜುಗಳ ಕಥೆ ಏನು?
ಕಾಲೇಜಗಳಿಗೆ ಕೂಡ ರಜೆ ಸಿಗುತ್ತಾ?
ಹೌದು, ವಿಶ್ವ ವಿಖ್ಯಾತ ದಸರಾ ಹಿನ್ನೆಲೆ ಸೆಪ್ಟೆಂಬರ್ 20 ಶನಿವಾರದಿಂದ ಅಕ್ಟೋಬರ್ 7 ಮಂಗಳವಾರ ತನಕ ಒಟ್ಟು 18 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 2 ಗಾಂಧಿ ಜಯಂತಿ & ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗಲು ಸೂಚನೆ ನೀಡಿದ್ದು, ಇದನ್ನ ಹೊರತುಪಡಿಸಿ ಸತತ ರಜೆ ಸಿಗಲಿದೆ. ಹೀಗೆಯೇ ಕರ್ನಾಟಕದ ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಈ ರಜೆಯ ಮಜ ಸಿಕ್ಕರೂ ಪೂರ್ತಿಯಾಗಿ ಸಿಗುವುದು ಅನುಮಾನ. ಯಾಕಂದ್ರೆ ಒಂದು ಕಡೆ ಪರೀಕ್ಷೆಯ ದೃಷ್ಟಿಯಿಂದ ಸ್ಪೆಷಲ್ ಕ್ಲಾಸ್ ಶುರುವಾಗಲಿದ್ದು, ಇನ್ನೊಂದು ಕಡೆ ಪದವಿ ಕಾಲೇಜುಗಳಿಗೆ ಕೂಡ ಈ ರೀತಿ ಕಡಿಮೆ ರಜೆ ಸಿಗುವ ಸಾಧ್ಯತೆ ಇದೆ. ಆದರೆ ದಸರಾ ಹಬ್ಬದ ದಿನದಂದು ಮಾತ್ರ ಭರ್ಜರಿಯಾಗಿ ರಜೆ ಜೊತೆಗೆ ಸೆಲೆಬ್ರೇಷನ್ ನಡೆಯುವುದು ಗ್ಯಾರಂಟಿ.












Click it and Unblock the Notifications