'ಸಂವೇದಾ ತರಗತಿ'ಗಳ ಸಮಯದಲ್ಲಿ ಬದಲಾವಣೆ

ಬೆಂಗಳೂರು, ಡಿಸೆಂಬರ್ 6: ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಪ್ರೌಢಶಾಲಾ ತರಗತಿಗಳ ಸಮಯದಲ್ಲಿ ಮಾತ್ರ ಪರಿಷ್ಕರಣೆಯಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯಲ್ಲಿ ಸಂವೇದಾ ಕಾರ್ಯಕ್ರಮ ಪ್ರಸಾರವಾಗುತ್ತದೆ. ಡಿಸೆಂಬರ್ 7ರಿಂದಲೇ ಅನ್ವಯವಾಗುವಂತೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

"ತಗರತಿಗಳ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ವಿದ್ಯಾರ್ಥಿಗಳು ಈ ಬದಲಾವಣೆಯನ್ನು ಗಮನಿಸಿ ತರಗತಿಗಳ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

Samveda E Class Timings Revised

ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬಿಡುಗಡೆ ಮಾಡಿದೆ. ತರಗತಿಗಳು ಬೆಳಗ್ಗೆ 7 ರಿಂದ 10.30 ಮತ್ತು ಸಂಜೆ 5 ರಿಂದ 6.30ರ ತನಕ ನಡೆಯಲಿವೆ.

ಕನ್ನಡ, ಇಂಗ್ಲಿಶ್, ಗಣಿತ, ವಿಜ್ಞಾನ, ಸಮಾಜ, ಸಂಸ್ಕತ, ಹಿಂದಿ, ಉರ್ದು ಭಾಷಾ ತರಗತಿಗಳು ಚಂದನಾ ವಾಹಿನಿಯಲ್ಲಿ ಪ್ರಸಾರವಾಗುತ್ತವೆ. ಡಿಸೆಂಬರ್ 7 ರಿಂದ 17ರ ತನಕ ಪ್ರಸಾರವಾಗುವ ವಿಷಯವಾರು ವೇಳಾಪಟ್ಟಿಯನ್ನು ಡಿ.ಎಸ್.ಇ.ಆರ್‌.ಟಿ ಬಿಡುಗಡೆ ಮಾಡಿದೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಶಾಲೆಗಳನ್ನು ಆರಂಭ ಮಾಡುವುದು ವಿಳಂಬವಾಗುತ್ತಿದೆ. ಆದ್ದರಿಂದ, ಶಿಕ್ಷಣ ಇಲಾಖೆ ಆಗಸ್ಟ್ ತಿಂಗಳಿನಿಂದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಡಿಯೋ ಪಾಠ ಹೇಳುವ ಸಂವೇದಾ ತರಗತಿಗಳನ್ನು ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+