ಪುನೀತ್ ರಾಜ್‌ಕುಮಾರ್‌ರನ್ನು ಭೇಟಿಯಾದ ಕೆ.ಮುರಳೀಧರ್ ರಾವ್
Recommended Video

ಬೆಂಗಳೂರು, ಜೂನ್ 18 : ಕರ್ನಾಟಕ ಬಿಜೆಪಿ ಉಸ್ತುವಾರಿ ಕೆ.ಮುರಳೀಧರ್ ರಾವ್ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಅಂಗವಾಗಿ ಭೇಟಿ ಮಾಡಿದ್ದಾರೆ.
ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದಡಿ ವಿವಿಧ ಬಿಜೆಪಿ ನಾಯಕರು ಹಲವಾರು ಗಣ್ಯರನ್ನು ಭೇಟಿ ಮಾಡುತ್ತಿದ್ದಾರೆ. ಮುರಳೀಧರ್ ರಾವ್ ಅವರು ಸಹ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.

ಕೆ.ಮುರಳೀಧರ್ ರಾವ್, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಕೆ.ಅಶ್ವಥ್ ನಾರಾಯಣ ಮುಂತಾದ ನಾಯಕರು ಪುನೀತ್ ರಾಜ್‌ಕುಮಾರ್ ಭೇಟಿ ಮಾಡಿದರು. 35 ಪುಟದ ಬುಕ್‌ಲೆಟ್ ನೀಡಿದರು.

2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಸಂಪರ್ಕ್ ಫಾರ್ ಸಮರ್ಥನ್ ಎಂಬ ಅಭಿಯಾನವನ್ನು ಆರಂಭಿಸಿದೆ. 4000 ಬಿಜೆಪಿ ನಾಯಕರು ಸುಮಾರು 1 ಲಕ್ಷ ಗಣ್ಯರನ್ನು ಭೇಟಿ ಮಾಡಲಿದ್ದಾರೆ.
ಕಳೆದ ವಾರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಬೆಂಗಳೂರಿಗೆ ಆಗಮಿಸಿದ್ದರು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರನ್ನು ಭೇಟಿ ಮಾಡಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಲಿದ್ದು, ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಅಂಗವಾಗಿ ರಾಜ್ಯದ 20 ಗಣ್ಯರನ್ನು ಭೇಟಿಯಾಗಲಿದ್ದಾರೆ.











Click it and Unblock the Notifications