1,000 ಮಕ್ಕಳಿಂದ 1 ಕೋಟಿ ಮಕ್ಕಳ ವರೆಗೆ ಸಾಯಿ ಶ್ಯೂರ್ ಯಶೋಗಾಥೆ
ದೇಶದ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಕಡಿಮೆ ಮಾಡಲು ಸಾಯಿ ಶ್ಯೂರ್ ಯೋಜನೆ ಮಹತ್ವದ ಪಾತ್ರವಹಿಸುತ್ತಿದೆ. 2018ರಲ್ಲಿ ಕೇವಲ 1,000 ಮಕ್ಕಳೊಂದಿಗೆ ಆರಂಭವಾದ ಈ ಯೋಜನೆ ಈಗ ಸುಮಾರು ಒಂದು ಕೋಟಿ ಮಕ್ಕಳಿಗೆ ಈ ಪೌಷ್ಟಿಕ ಮಾಲ್ಟ್ ತಲುಪುವಂತೆ ಮಾಡಿದೆ.
ಈ ಯೋಜನೆಯನ್ನು ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಜೂತೆಗೆ ಕೆಲವು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಹಾಲಿನೊಂದಿಗೆ ನೀಡಲಾದ ಸಾಯಿ ಶ್ಯೂರ್ ಮಾಲ್ಟ್ ಮಕ್ಕಳಿಗೆ ಇಷ್ಟವಾಗಿದ್ದು ಬಳಿಕ ಯೋಜನೆಯನ್ನು ವಿಸ್ತರಿಸಲಾಯಿತು.

ಈ ಯೋಜನೆಯ ಯಶಸ್ಸು
ಸರ್ಕಾರದ 'ಕ್ಷೀರಭಾಗ್ಯ' ಯೋಜನೆಗೆ ಪೂರಕವಾಗಿ 2018ರಲ್ಲಿ ಹತ್ತು ಶಾಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿತ್ತು. ಕ್ಷೀರಭಾಗ್ಯ ಹಾಲಿನ ಜೊತೆಗೆ ಸಾಯಿ ಶ್ಯೂರ್ ಮಾಲ್ಟ್ ಅನ್ನು ನೀಡಲು ಆರಂಭಿಸಿದಾಗ ಮಕ್ಕಳು ಅದನ್ನು ಅತ್ಯಂತ ಇಷ್ಟಪಟ್ಟು ಕುಡಿಯಲು ಆರಂಭಿಸಿದರು. ಇಂದು ಈ ಪೌಷ್ಟಿಕ ಪಾನೀಯ ಒಂದು ಕೋಟಿ ಮಕ್ಕಳ ಆರೋಗ್ಯದ ಕವಚವಾಗಿದೆ.
ಈ ಯೋಜನೆಯ ವಿಶೇಷತೆಯೆಂದರೆ ಇದು ರೈತನನ್ನು ನೇರವಾಗಿ ಮಗುವಿನ ಪೌಷ್ಟಿಕತೆ ಆರೋಗ್ಯಕ್ಕೆ ಕೈ ಜೋಡಿಸಿದಂತಾಗಿದೆ. ಸಾಯಿ ಶ್ಯೂರ್ ಮಾಲ್ಟ್ ಯೋಜನೆಯ ವಿಶೇಷತೆ ಎಂದರೆ ರೈತರು ಸಹ ಈ ಯೋಜನೆಯ ಭಾಗವಾಗಿದ್ದಾರೆ. ತಿಪಟೂರು ಭಾಗದ ಸಾವಿರಾರು ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲಾಗುತ್ತಿದೆ. ಸರ್ಕಾರದ ಬೆಂಬಲ ಬೆಲೆಗೆ ಹೆಚ್ಚುವರಿ ಹಣ ನೀಡಿ ರಾಗಿ ಖರೀದಿಸುವ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತಿದೆ.
ರಾಗಿ ಖರೀದಿ: ತಿಪಟೂರು ತಾಲ್ಲೂಕಿನ ಸುಮಾರು 3,000 ರೈತರಿಂದ ನೇರವಾಗಿ ರಾಗಿಯನ್ನು ಖರೀದಿ ಮಾಡಲಾಗುತ್ತಿದೆ.
ಉತ್ತಮ ಬೆಲೆ: ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತಲೂ ಒಂದು ರೂಪಾಯಿ ಅಧಿಕ ನೀಡಿ ರೈತರಿಂದ ರಾಗಿ ಪಡೆಯಲಾಗುತ್ತಿದೆ.
ನೇರವಾಗಿ ರೈತರಿಗೆ: ಕಳೆದ ವರ್ಷ ಸುಮಾರು 20 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.
ಈ ಪೌಷ್ಟಿಕ ಮಾಲ್ಟ್‌ನಲ್ಲಿ ಮಕ್ಕಳಿಗೆ ಅಗತ್ಯವಾದ ವಿಟಮಿನ್ ಸಿ, ಐರನ್, ವಿಟಮಿನ್ ಡಿ ಮತ್ತು ಬಿ12 ನಂತಹ ಖನಿಜಾಂಶಗಳನ್ನು ಸೇರಿಸಲಾಗಿದ್ದು ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ನೆರವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ತಲುಪಿರುವ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಎಂಟು ಕೋಟಿ ಮಕ್ಕಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಸಾಯಿ ಶ್ಯೂರ್ ಯೋಜನೆ ಮಕ್ಕಳ ಆರೋಗ್ಯ ಸುಧಾರಣೆಯ ಜೊತೆಗೆ ರೈತರಿಗೂ ನೆರವಾಗುತ್ತಿರುವುದು ವಿಶೇಷವಾಗಿದೆ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications