ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಹಾಸ್ಯನಟ ಸಾಧುಕೋಕಿಲ ನೇಮಕ
ಬೆಂಗಳೂರು, ಫೆಬ್ರವರಿ, 29: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ಹಾಸ್ಯನಟ ಸಾಧುಕೋಕಿಲ ಅವರನ್ನು ಇಂದು (ಫೆಬ್ರವರಿ 29, ಗುರುವಾರ) ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಟಿಪ್ಪಣಿ ಹೊರಡಿಸಿದ ರಂದೀಪ್.ಡಿ: ಇನ್ನು ಈ ಬಗ್ಗೆ ಸರ್ಕಾರದ ಕಾರ್ಯದರ್ಶಿ ಆಗಿರುವಂತ ರಂದೀಪ್.ಡಿ ಅವರು ಟಿಪ್ಪಣಿ ಹೊರಡಿಸಿದ್ದು, ವಿವಿಧ ನಿಗಮ ಅಥವಾ ಮಂಡಳಿ ಅಥವಾ ಪ್ರಾಧಿಕಾರಗಳ ಅಧ್ಯಕ್ಷರು ಅಥವಾ ಉಪಾಧ್ಯಕ್ಷರ ನೇಮಕಾತಿ ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊರಡಿಸಬೇಕಾಗಿರುತ್ತದೆ.
ಸದರಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಸೂಚನೆ: ಅದರಂತೆಯೇ ಸದರಿಯವರು ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ಕಾರ್ಯನಿರ್ವಹಿಸುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಈ ಮೂಲಕ ಸೂಚನೆ ನೀಡಿದ್ದಾರೆ.
ಆದೇಶ ಹೊರಡಿಸಿದ ರಾಜ್ಯ ಸರ್ಕಾರ: ಈಗ ಬಿಡುಗಡೆ ಆಗಿರುವಂತಹ 44 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಆದೇಶದ ಪಟ್ಟಿಯಲ್ಲಿ, ಹಾಸ್ಯನಟ ಆಗಿರುವ ಸಾಧು ಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.












Click it and Unblock the Notifications