ಚುನಾವಣೆ ಕಣದಿಂದ ಹಿಂದೆ ಸರಿದ ಡಿವಿ ಸದಾನಂದ ಗೌಡ?

ಬೆಂಗಳೂರು, ಫೆ.26 : ಮಾಜಿ ಸಿಎಂ ಮತ್ತು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿವಿ ಸದಾನಂದ ಗೌಡ ಲೋಕಸಭೆ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಹೌದು ಸದಾನಂದ ಗೌಡರ ಆಪ್ತರು ಹೇಳುವ ಪ್ರಕಾರ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಂದ ಬೇಸರಗೊಂಡಿರುವ ಅವರು, ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.

ಡಿವಿ ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇದೇ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಆರ್ ಅಶೋಕ್ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸಹ ಆಕಾಂಕ್ಷಿಗಳಾಗಿದ್ದರು. ಕೆಲವು ದಿನಗಳ ಹಿಂದೆ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಅಶೋಕ್ ಅವರಿಗೆ ಉತ್ತರ ಕ್ಷೇತ್ರದ ಟಿಕೆಟ್ ನೀಡಲು ನಿರ್ಧರಿಸಲಾಗಿದ್ದು, ಗೌಡರನ್ನು ಮೈಸೂರು ಕ್ಷೇತ್ರದ ಅಭ್ಯರ್ಥಿಯಾಗಿಸಲು ತೀರ್ಮಾನ ಕೈಗೊಳ್ಳಲಾಗಿದೆ. [ಬಿಜೆಪಿ ಪಟ್ಟಿ ಹೀಗಿದೆ]

Sadananda Gowda not to contest for polls

ಆದರೆ, ಆರ್ ಅಶೋಕ್ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ತಮ್ಮ ಆಪ್ತ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವಥ ನಾರಾಯಣ ಅವರಿಗೆ ಟಿಕೆಟ್ ನೀಡಲಿದ್ದಾರೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಆದ್ದರಿಂದ ಪಕ್ಷದ ಆಂತರಿಕ ಚಟುವಟಿಕೆಗಳಿಂದ ಬೇಸರಗೊಂಡಿರುವ ಸದಾನಂದ ಗೌಡರು ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. [ಮಾಜಿ ಸಿಎಂ, ಮಾಜಿ ಡಿಸಿಎಂ ಯಾರು ದೊಡ್ಡವರು]

ವರಿಷ್ಠರಿಗೆ ದೂರು : ಪಕ್ಷದ ಆಂತರಿಕ ಚಟುವಟಿಕೆಗಳ ಕುರಿತು ಡಿವಿ ಸದಾನಂದ ಗೌಡ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆರ್ ಎಸ್ಎಸ್ ನಾಯಕರಿಗೆ ಈ ಕುರಿತು ಈಗಾಗಲೇ ಸದಾನಂದ ಗೌಡರು ಮಾಹಿತಿ ನೀಡಿದ್ದು, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. [ಉತ್ತರದಿಂದ ಸ್ಪರ್ಧಿಸುತ್ತೇನೆ : ಶೋಭಾ ಕರಂದ್ಲಾಜೆ]

ಸದ್ಯ ಬಿಜೆಪಿ ನಾಯಕರು ಕೈಗೊಂಡಿರುವ ನಿರ್ಧಾರದ ಪ್ರಕಾರ ಆರ್ ಅಶೋಕ್ ಬೆಂಗಳೂರು ಉತ್ತರದಿಂದ, ಡಿವಿ ಸದಾನಂದ ಗೌಡರು ಮೈಸೂರಿನಿಂದ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆದರೆ, ಗೌಡರು ಚುನಾವಣೆಯಿಂದ ಹಿಂದೆ ಸರಿದರೆ, ಮೈಸೂರಿಗೆ ಹೊಸ ಅಭ್ಯರ್ಥಿಯನ್ನು ಹುಡುಕುವ ಅನಿವಾರ್ಯತೆ ಉಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+