ಅಪಘಾತದ ಗಾಯಾಳುವಿಗೆ ಆರೈಕೆ ನೀಡಿದ ಸದಾನಂದ ಗೌಡ
ಸೋಮವಾರ ಪೇಟೆಯಲ್ಲಿ ನಡೆಯಲಿದ್ದ ಆದಿ ಚುಂಚನಗಿರಿ ಮಠದ ಕಾರ್ಯಕ್ರಮವೊದರಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಆಗಮಿಸುತ್ತಿದ್ದ ಕೇಂದ್ರ ಸಚಿವ.
ಸೋಮವಾರ ಪೇಟೆ (ಕೊಡಗು), ಫೆಬ್ರವರಿ 27: ಕೇಂದ್ರ ಅಂಕಿ ಅಂಶ ಹಾಗೂ ಯೋಜನಾ ಅನುಷ್ಠಾನ ಇಲಾಖೆ ಸಚಿವ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು, ಕೊಡಗಿನ ಶನಿವಾರ ಸಂತೆಯಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಆರೈಕೆ ಮಾಡಿ ಗಮನ ಸೆಳೆದರು.
ಸೋಮವಾರ ಪೇಟೆಯಲ್ಲಿರುವ ಆದಿ ಚುಂಚನಗಿರಿ ಮಠದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದ ಸದಾನಂದ ಗೌಡರು, ಶನಿವಾರ ಸಂತೆಗೆ ಬರುವಷ್ಟರಲ್ಲಿ ಅಲ್ಲೊಂದು ಪುಟ್ಟ ಅಪಘಾತವಾಗಿತ್ತು. ಸಚಿವರು ಬರಬೇಕಿದ್ದ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಕಾರೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಬಿದ್ದ ಬೈಕ್ ಸವಾರನೊಬ್ಬ ಗಾಯಗೊಂಡಿದ್ದ.[ಮೈತ್ರಿಯಾ- ಕಾರ್ತೀಕ್ ಗೌಡಗೆ ಸಂಧಾನ ಪಾಠ ಹೇಳಿದ ಹೈಕೋರ್ಟ್]

ಅಪಘಾತ ನಡೆದು ಕೆಲವೇ ನಿಮಿಷಗಳಲ್ಲಿ ಸಚಿವರ ಕಾರು ಅದೇ ಮಾರ್ಗವಾಗಿ ಎದುರು ದಿಕ್ಕಿನಿಂದ ಆಗಮಿಸಿತು. ಜನ ಜಮಾಯಿಸಿದ್ದನ್ನು ಗಮನಿಸಿದ ಗೌಡರು, ಏನೆಂದು ವಿಚಾರಿಸಿದರು. ಆಗ, ಬೈಕ್ ಸವಾರನು ಗಾಯಗೊಂಡಿದ್ದ ವಿಚಾರ ತಿಳಿಯಿತು.[ಮಡಿಕೇರಿ ರಾಜಾಸೀಟಿನಲ್ಲಿ ಅಭಿವೃದ್ಧಿ ಮರೀಚಿಕೆ!]
ತಕ್ಷಣ ಕಾರಿಳಿದು ಬಂದ ಅವರು, ಬೈಕ್ ಸವಾರನ್ನು ಸಂತೈಸಿದರಲ್ಲದೆ, ತಮ್ಮ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸೆ ಕಿಟ್ ತರಿಸಿ ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿದರು. ಆನಂತರ, ಆತನಿಗೆ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು.[ಇಷ್ಟಾರ್ಥ ನೆರವೇರಲು ಶಿವರಾತ್ರಿ ಮರುದಿನ ಇರ್ಪು ಜಲಧಾರೆಯಲ್ಲಿ ಸ್ನಾನ!]
ಸಚಿವರ ಈ ಮಾನವೀಯತೆ ಹಾಗೂ ಔದಾರ್ಯ ಜನರ ಮೆಚ್ಚುಗೆ ಗಳಿಸಿತು.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications