SM Krishna: ಎಸ್.ಎಂ. ಕೃಷ್ಣ ಅಳಿಯನ ನಿಗೂಢ ಸಾವು ತಂದಿತ್ತು ನೋವು...
ಎಸ್.ಎಂ. ಕೃಷ್ಣ ಇಂದು ಅಗಲಿದ್ದಾರೆ, ಕನ್ನಡ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದ ನಾಯಕ ಎಂಬ ಬಿರುದು ಪಡೆದಿದ್ದರು ಎಸ್.ಎಂ. ಕೃಷ್ಣ ಅವರು. ಆದರೆ, ವಿಧಿಯಾಟ ಎಸ್.ಎಂ. ಕೃಷ್ಣ ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಹೀಗಿದ್ದಾಗಲೇ ಎಸ್.ಎಂ. ಕೃಷ್ಣ ಅವರು ಬದುಕಿದ್ದ ಸಮಯದಲ್ಲಿ ಅವರ ಜೀವ ಹಿಂಡಿದ್ದ & ಎಸ್.ಎಂ. ಕೃಷ್ಣ ಅವರ ಕಣ್ಣಲ್ಲಿ ನೀರು ಹಾಕಿಸಿದ್ದ ಒಂದು ಘಟನೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಈ ದಿನವೇ ವೈರಲ್ ಆಗುತ್ತಿದೆ. ಅಷ್ಟಕ್ಕೂ, ಎಸ್.ಎಂ. ಕೃಷ್ಣರ ಅಳಿಯನ ನಿಗೂಢ ಸಾವು ತಂದಿತ್ತು ನೋವು...
ಎಸ್.ಎಂ. ಕೃಷ್ಣ ಅವರ ಜೀವನದ ಕೊನೆ ಕೊನೆಗೆ ಸಾಕಷ್ಟು ನೋವುಗಳು ಎದುರಾಗಿದ್ದವು. ಅದರಲ್ಲೂ ಎಸ್.ಎಂ. ಕೃಷ್ಣ ಅವರ ಮಗಳ ಗಂಡ ಅಂದ್ರೆ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಅವರ ಅಳಿಯ & 'ಕಾಫಿ ಡೇ' ಸಂಸ್ಥೆ ಓನರ್ ಆಗಿದ್ದ ವಿಜಿ ಸಿದ್ಧಾರ್ಥ ಅವರ ನಿಗೂಢ ಸಾವು ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಸುಂಟರಗಾಳಿ ಎಬ್ಬಿಸಿತ್ತು. ಈ ಎಲ್ಲಾ ಘಟನೆ ಬೆನ್ನಲ್ಲೇ, ಎಸ್.ಎಂ. ಕೃಷ್ಣ ಅವರ ಅಳಿಯ 'ಕಾಫಿ ಡೇ' ಸಿದ್ಧಾರ್ಥ ಸಾವಿನ ಬಗ್ಗೆ ವದಂತಿ & ನಿಗೂಢತೆ ಜೋರಾಗಿತ್ತು....

'ಕಾಫಿ ಡೇ' ಸಿದ್ಧಾರ್ಥ ಸಾವಿನ....
ಹೌದು, ಎಸ್.ಎಂ. ಕೃಷ್ಣ ಅವರ ಅಳಿಯ ಎನ್ನುವುದಕ್ಕಿಂತ ಹೆಚ್ಚಾಗಿ, 'ಕಾಫಿ ಡೇ' ಸಂಸ್ಥೆ ಓನರ್ ಆಗಿಯೇ ವಿಜಿ ಸಿದ್ಧಾರ್ಥ ಅವರು ದೊಡ್ಡ ಹೆಸರು ಮಾಡಿದ್ದರು. ಹೀಗಿದ್ದಾಗಲೇ ವಿಜಿ ಸಿದ್ಧಾರ್ಥ ಅವರ ನಿಗೂಢ ಸಾವು ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ನೇತ್ರಾವತಿ ನದಿಯ ಹಿನ್ನೀರಿನಲ್ಲಿ ವಿ.ಜಿ. ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಕೊನೆಗೆ ಪೊಲೀಸರ ತನಿಖೆ ಕೂಡ ನಡೆದಿತ್ತು.
ಹೀಗೆ, ಎಸ್.ಎಂ. ಕೃಷ್ಣ ಅವರ ಅಳಿಯ & 'ಕಾಫಿ ಡೇ' ಓನರ್ ವಿಜಿ ಸಿದ್ಧಾರ್ಥ ಅವರ ಸಾವಿಗೆ ಆತ್ಮಹತ್ಯೆ ಕಾರಣ ಎಂಬುದು ತನಿಖೆ ನಂತರ ಗೊತ್ತಾಗಿತ್ತು. ಹೀಗೆ ಎಸ್.ಎಂ. ಕೃಷ್ಣ ಅವರು ತಮ್ಮ ಅಳಿಯ ವಿಜಿ ಸಿದ್ಧಾರ್ಥ ಅವರ ಆತ್ಮಹತ್ಯೆಯ ನಂತರ ಮಾನಸಿಕವಾಗಿ, ಮತ್ತಷ್ಟು ಕುಗ್ಗಿ ಹೋಗಿದ್ದರು ಎಂಬ ವದಂತಿ ಹಬ್ಬಿತ್ತು. ಹೀಗೆ ಇಷ್ಟೆಲ್ಲದರ ನಡುವೆ ಇದೀಗ ಕರ್ನಾಟಕ ರಾಜ್ಯದ ಅತ್ಯುತ್ತಮ ರಾಜಕಾರಣಿ & ನಾಯಕನನ್ನು ಕನ್ನಡಿಗರು ಕಳೆದುಕೊಂಡು ನೋವಿನಲ್ಲಿದ್ದಾರೆ.
92ರ ಇಳಿ ವಯಸ್ಸಿನಲ್ಲಿ ಆರೋಗ್ಯ...
ಕರ್ನಾಟಕದ ಸಿಎಂ ಆಗಿ, ಕರ್ನಾಟಕ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜಾಗತಿಕ ಮಟ್ಟದಲ್ಲಿ, ಕನ್ನಡ ನಾಡು ಗುರುತಿಸಿಕೊಳ್ಳಲು ಕೊಡುಗೆ ನೀಡಿದ್ರು ಎಸ್.ಎಂ. ಕೃಷ್ಣ ಅವರು. ಹೀಗಿದ್ದಾಗಲೇ, 92ರ ಇಳಿ ವಯಸ್ಸಿನಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆ ಎಸ್.ಎಂ. ಕೃಷ್ಣ ಅವರನ್ನು ಕಾಡಿದವು. ಅದರಲ್ಲೂ, ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ, ತುರ್ತು ನಿಗಾ ಘಟಕ ಅಂದ್ರೆ ಐಸಿಯು ಸೇರಿ ಚಿಕಿತ್ಸೆ ಪಡೆದರು.
ಹೀಗೆ ಎಸ್.ಎಂ. ಕೃಷ್ಣ ಅವರು ಚಿಕಿತ್ಸೆ ಫಲಿಸದೆ ಇದೀಗ ಇಹಲೋಕ ತ್ಯಜಿಸಿದ್ದು, ಕನ್ನಡ ನಾಡಿನ ಕೋಟಿ ಕೋಟಿ ಅಭಿಮಾನಿಗಳನ್ನ ಕೂಡ ಅಗಲಿ ಹೋಗಿದ್ದಾರೆ. ಹೀಗಿದ್ದಾಗ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾ ಸೇರಿ & ಇಡೀ ಇಂಟರ್‌ನೆಟ್ ಪೂರ್ತಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications