ಯೋಗೇಶ್ವರ್‌ಗೆ ಮಂತ್ರಿಸ್ಥಾನ: ರುದ್ರೆಶ್ ಯು ಟರ್ನ್?
ಬೆಂಗಳೂರು, ಜ. 04: ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ಕೊಡುವ ವಿಚಾರದಲ್ಲಿ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ 'ಯೂಟರ್ನ್' ಹೊಡೆದಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ಮಾತನಾಡಿರುವ ರುದ್ರೇಶ್ ಅವರು ಸಿ.ಪಿ. ಯೋಗೇಶ್ವರ್ ಅವರನ್ನ ಮಂತ್ರಿ ಮಾಡೋಕೆ ನನ್ನ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಶಕ್ತಭವನದಲ್ಲಿ ಸಿಎಂ ಬಿಎಸ್ ಯಡಿಯೂಪ್ಪ ಭೇಟಿ ಬಳಿಕ ಮಾತನಾಡಿದ್ದಾರೆ.
'ಯೋಗೇಶ್ವರ್ ಮಂತ್ರಿ ಮಾಡುವುದರಿಂದ ನಮ್ಮ ಜಿಲ್ಲೆಯ ಅಭಿವೃದ್ಧಿ ಆಗುತ್ತದೆ. ಯೋಗೇಶ್ವರ್ ಮಂತ್ರಿ ಮಾಡೋಕೆ ನನ್ನ ವಿರೋಧ ಇಲ್ಲ. ನಿನ್ನೆ ಹೈದರಾಬಾದ್ ಕರ್ನಾಟಕ ಭಾಗದ ಶಾಸಕ ಸಭೆಗೆ ಹೋಗಿದ್ದೆ.
ನಮ್ಮ ಕ್ಷೇತ್ರದಿಂದ ಯೋಗೇಶ್ವರ್ ಮಂತ್ರಿ ಆಗುತ್ತಿದ್ದಾರೆ. ಅದಕ್ಕೆ ಯಾರೂ ವಿರೋಧ ಮಾಡಬೇಡಿ ಅಂತ ಮನವಿ ಮಾಡೋದಕ್ಕೆ ಹೋಗಿದ್ದೆ. ಅವರು ಒಪ್ಪಿಲ್ಲ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡುವುದಕ್ಕೆ ನಾವೆಲ್ಲರೂ ವಿರೋಧ ಮಾಡಿದ್ದೇವೆ. ಆದರೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಬಿಟ್ಟಿದ್ದೇವೆಂದು ಅವರು ಹೇಳಿದ್ದಾರೆ.

ನಾನು ವಿರೋಧ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ. ಆದರೆ ಯೋಗೇಶ್ವರ್ ಅವರಿಗೆ ಸಚಿವಸ್ಥಾನ ಕೊಡುವುದು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ' ಎಂದು ರುದ್ರೇಶ್ ಹೇಳಿದ್ದಾರೆ.
ನಿನ್ನೆ ಹೈದರಾಬಾದ್-ಕರ್ನಾಟಕ ಸಭೆಯಲ್ಲಿ ರುದ್ರೇಶ್ ಭಾಗಿ: ನಿನ್ನೆ ಶಾಸಕರ ಭವನದಲ್ಲಿ ನಡೆದಿದ್ದ ಹೈ-ಕ ಭಾಗದ ಶಾಸಕರ ಸಭೆಯಲ್ಲಿ ರುದ್ರೇಶ್ ಭಾಗಿಯಾಗಿದ್ದರು. ಸಭೆಯಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವಸ್ಥಾನ ಕೊಡುವುದನ್ನು ವಿರೋಧಿಸಲಾಗುತ್ತು.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರೊಂದಿಗೆ ರುದ್ರೇಶ್ ಸಭೆಯಲ್ಲಿ ಭಾಗಿಯಾಗಿದ್ದರು. ಸೋತವರಿಗೆ ಸಚಿವಸ್ಥಾನ ಕೊಡುವುದಕ್ಕೆ ವಿರೋಧವಿದೆ ಎಂದು ರೇಣುಕಾಚಾರ್ಯ ಹಳಿಕೆ ಕೊಟ್ಟಿದ್ದರು. ಆಗ ರಾಮನಗರ ಜಿಲ್ಲಾ ಅಧ್ಯಕ್ಷ ರುದ್ರೇಶ್ ಅವರೂ ಕೂಡ ರೇಣುಕಾಚಾರ್ಯ ಅವರೊಂದಿಗೆ ಇದ್ದರು.
ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೆಶ್ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು.












Click it and Unblock the Notifications