ಕರ್ನಾಟಕದ ಇಲ್ಲಿ ಹೊಸ EV ಉತ್ಪಾದನಾ ಘಟಕ: ₹600 ಕೋಟಿ ಹೂಡಿಕೆ, ಇದೇ ವರ್ಷವೇ ಕಾರ್ಯಾರಂಭ
ಬೆಂಗಳೂರು, ಜನವರಿ 17: ಆಟೋ ಮೊಬೈಲ್ ವಲಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಭಾರೀ ಸಂಚಲನ ಸೃಷ್ಟಿಸುತ್ತಿವೆ. ಪರಿಸರಕ್ಕೆ ಪೂರಕವಾದ ಮತ್ತು ಇಂಧನ ರಹಿತ ವಾಹನ ಚಾಲನೆಗೆ ಅವಕಾಶ ನೀಡುವ ಈ ಎಲೆಕ್ಟ್ರಿನ್ ವಾಹನಗಳು (EV) ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ನಿರ್ಮಿಸಲು ಜಪಾನ್ ಕಂಪನಿಯು ಸರ್ಕಾರದೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಘಟಕ ಸ್ಥಾಪನೆಯ ಕೆಲಸ ಆರಂಭವಾಗಿದೆ.
ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ವಿಶಾಲ ಪ್ರದೇಶದಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿಗೂ ಅಧಿಕ ಬಂಡವಾಳದಲ್ಲಿ ಎಲೆಕ್ಟ್ರಿಕ್ ವಾಹನಗಳು (EV) Nidec ಉತ್ಪಾದನಾ ಘಟಕ ನಿರ್ಮಿಸಲಾಗುತ್ತಿದೆ. ಈ ಬಗೆಗಿನ ಮಾಹಿತಿಯನ್ನು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಅವಳಿ ನಗರಗಳೆಂದೆ ಪ್ರಸಿದ್ಧವಾದ ಹುಬ್ಬಳ್ಳಿ-ಧಾರವಾಡದಲ್ಲಿನ ಕೋಟೂರ್ ಬೇಲೂರು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ (EMC) ನಲ್ಲಿ ಈ ನಾ ಘಟಕವನ್ನು ಸ್ಥಪಿಸಲಾಗುತ್ತಿದೆ. ಇದೇ ವರ್ಷಾಂತ್ಯದ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯು ಇದೆ ಎಂದು ಅವರು ವಿವರಿಸಿದರು.
ಇವಿ, ಇಂಧನ ವಲಯಕ್ಕೆ ಉತ್ತೇಜನ
ಇಲ್ಲಿನ ಸುಮಾರು 30 ಎಕರೆ ವಿಶಾಲ ಪ್ರದೇಶದಲ್ಲಿ ಈ EV ಉತ್ಪಾದನಾ ಘಟಕ ನಿರ್ಮಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು, ಡೇಟಾ ಕೇಂದ್ರಗಳು ಮತ್ತು ನವೀಕರಿಸಬಹುದಾದ ಇಂಧನದಂತಹ ವಲಯಗಳಿಗೆ ಗಮನಾರ್ಹ ಉತ್ತೇಜನ ಸಿಕ್ಕಂತಾಗುತ್ತದೆ.
ಹೊಸ ಪ್ಲಾಂಟ್‌ನಲ್ಲಿ ಏನೆಲ್ಲ ಇದೆ
ಈ ಘಟಕ ನಿರ್ಮಾಣದಿಂದ ಈ ಭಾಗದಲ್ಲಿ ನೇರವಾಗಿ 800ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಯಾಗಲಿವೆ. 2025 ರ ಮಧ್ಯ ಭಾಗದಲ್ಲಿ ಇಲ್ಲವೇ ಅಂತ್ಯಕ್ಕೆ ಘಟಕದ ಕಾರ್ಯಾಚರಣೆ ಶುರುವಾಗುವ ನಿರೀಕ್ಷೆ ಇವೆ. ಉತ್ಪಾದನಾ ಪ್ಲಾಂಟ್‌ನಲ್ಲಿ ಆಲ್ಟರ್ನೇಟರ್‌ಗಳು, ಮೋಟಾರ್‌ಗಳು, ಸಿಸ್ಟಮ್ ಪರಿಹಾರಗಳು ಮತ್ತು ಡೇಟಾ ಕೇಂದ್ರಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಎಲಿವೇಟರ್‌ಗಳಿಗೆ ಡ್ರೈವ್‌ಗಳು ಇರಲಿವೆ ಎಂದು ಅವರು ಹೇಳಿದರು.

ಈ ಹಿಂದೆ ಸಚಿವರು ಜಪಾನ್ ಪ್ರವಾಸ ಮಾಡಿದ್ದರು. ಅದರ ಭಾಗವಾಗಿ ಗುರುವಾರ ಜಪಾನ್ Nidec ವಾಣಿಜ್ಯ ಕಂಪನಿ ಮುಖ್ಯಸ್ಥರು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದರು. ಈ ಮೊದಲೇ ಮಾತುಕತೆ ನಡೆಸಿದಂತೆ ಕಂಪನಿಯು ಹುಬ್ಬಳ್ಳಿಯಲ್ಲಿ EV ಉತ್ಪಾದನಾ ಸೌಲಭ್ಯ ಕಲ್ಪಿಸಲು ಒಪ್ಪಿಕೊಂಡಿತ್ತು.
ಒಪ್ಪಂದದ ಭಾಗವಾಗಿ ನೈಡೆಕ್ ಕಂಪನಿಯು ಆರಂಭದಲ್ಲಿ 450 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯನ್ನು ಮಾಡಿತ್ತು. ನಂತರದ ಚರ್ಚೆಗಳ ಬಳಿಕ ಮತ್ತೆ ಹೆಚ್ಚುವರಿಯಾಗಿ 150 ಕೋಟಿ ರೂಪಾಯಿ ಹೂಡಿಕೆಗೆ ಒಪ್ಪಿತು. ಹೀಗಾಗಿ ಇಲ್ಲಿನ ಘಟಕ ನಿರ್ಮಾಣದ ಒಟ್ಟ ಬಂಡವಾಳ ಸುಮಾರು 600 ಕೋಟಿ ರೂಪಾಯಿಗೆ ಏರಿತು.
ಇಂತಹ ಯೋಜನೆಗಳು, ಬಂಡವಾಳ ಹೂಡಿಕೆ ಹೆಚ್ಚಾದರೆ ಸ್ಥಳೀಯ ಉದ್ಯೋಗ ಸೃಷ್ಟಿ, ಸಮತೋಲಿತ ಬೆಳವಣಿಗೆ ಜೊತೆಗೆ ಜಾಗತಿಕ ಪಾಲುದಾರಿಕೆ ಮತ್ತು ಕೈಗಾರಿಕಾ ಪ್ರಗತಿಗೆ ಕರ್ನಾಟಕ ಬದ್ಧತೆ ಎತ್ತಿ ತೋರಿಸಲು ಸಾಧ್ಯವಾಗುತ್ತದೆ. ರಾಜ್ಯದ ಆರ್ಥಿಕ, ಕೈಗಾರಿಕಾ ಬೆಳವಣಿಗೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು..












Click it and Unblock the Notifications