Karnataka Railway: ರಾಜ್ಯದ ರೈಲ್ವೆ ಹಂಚಿಕೆ 9 ಪಟ್ಟು ಹೆಚ್ಚಳ, ಸದ್ಯದ ಹೂಡಿಕೆ ₹54,000 ಕೋಟಿ: ಅಶ್ವಿನಿ ವೈಷ್ಣವ್
ಬೆಂಗಳೂರು, ಆಗಸ್ಟ್ 10: ಕರ್ನಾಟಕದಾದ್ಯಂತ ಅನೇಕ ರೈಲ್ವೆ ಯೋಜನೆಗಳು ಅನುಷ್ಠಾನದಲ್ಲಿವೆ. ರೈಲ್ವೆ ಜಾಲ ವಿಸ್ತರಣೆಯಾಗಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ರೈಲ್ವೆ ಮೂಲಸೌಕರ್ಯ ವೃದ್ಧಿಗೆ ಅಪಾರ ಪ್ರಮಾಣದಲ್ಲಿ ಬಂಡವಾಳ ಹರಿದು ಬಂದಿದೆ. ಪ್ರಸಕ್ತ 2025-26 ರ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಶೇಕಡಾ 09ರಷ್ಟು ಅಧಿಕ ಹೂಡಿಕೆ ಹೆಚ್ಚಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಹೊಸ ರೈಲ್ವೆ ಯೋಜನೆಗಳಿಗೆ ಭರ್ಜರಿ ಅನುದಾನ ಮಂಜೂರಾತಿ ಘೋಷಣೆ ಆಗಿತ್ತು. ಅದರ ಬೆನ್ನಲ್ಲೆ ಕರ್ನಾಟಕದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸೇರಿದಂತೆ ದೇಶದಲ್ಲಿ ಮೂರು ವಂದೇ ಭಾರತ್ ರೈಲುಗಳಿಗೆ ಇಂದು (ಆಗಸ್ಟ್ 10) ಪ್ರಧಾನಿ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ರೈಲ್ವೆ ವಲಯದಲ್ಲಿ ಅಭೂತಪೂರ್ವ ಬದಲಾವಣೆ, ಪರಿವರ್ತನೆ ಆಗಿದೆ ಎಂದು ಅವರು ಪ್ರಧಾನಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 2014 ರ ಮುನ್ನ ಕೇವಲ ರೈಲ್ವೆಗಾಗಿ ಹಂಚಿಕೆ ಕೇವಲ 835 ಕೋಟಿ ರೂಪಾಯಿ ಯಷ್ಟಿತ್ತು. ಆದರೆ 2025-26ರ ಆರ್ಥಿಕ ವರ್ಷದಲ್ಲಿ ಅದು 7,564 ಕೋಟಿ ರೂಪಾಯಿಗಳಷ್ಟಾಗಿದೆ. ಸದ್ಯ ಕರ್ನಾಟಕದ ರೈಲ್ವೆ ವ್ಯಾಪ್ತಿಯಲ್ಲಿ 54,000 ಕೋಟಿ ರೂಪಾಯಿ ಹೂಡಿಕೆ ಇದೆ ಎಂದು ಅವರು ಅಂಕಿ ಸಂಖ್ಯೆಗಳನ್ನು ನೀಡಿ ರಾಜ್ಯದ ರೈಲ್ವೆ ಸಾರಿಗೆ ಸುಧಾರಣೆ ಬಗ್ಗೆ ವಿವರಿಸಿದರು.
ಅಷ್ಟೇ ಅಲ್ಲದೇ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 61 ನಿಲ್ದಾಣಗಳನ್ನು ನವೀಕರಣ ಮಾಡಲಾಗುತ್ತಿದೆ. 123 ಫ್ಲೈಓವರ್‌ಗಳು ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ. ರೈಲ್ವೆ ದ್ವಿಪಥ, ಹೊಸ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ರಾಜ್ಯಕ್ಕೆ ಕೇಂದ್ರದ ಕೊಡುಗೆ ತಿಳಿಸಿದರು.
ರೈಲ್ವೆ ಸಾರಿಗೆ ಸುಧಾರಣೆ
ಇದೀಗ ದಕ್ಷಿಣ ಕರ್ನಾಟಕದ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಐಶಾರಾಮಿ ರೈಲು ಸೇವೆ ನೀಡಲಾಗಿದೆ. ರೈಲು ಸಾರಿಗೆ ಸುಧಾರಿಸಲಾಗಿದೆ. ಇದರೊಂದಿಗೆ ಅಮೃತಸರ-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ಮತ್ತು ನಾಗ್ಪುರ (ಅಜ್ನಿ)-ಪುಣೆ ಮಾರ್ಗಗಳ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ಸಹ ಆರಂಭಿಸಲಾಗಿದೆ.
ರಫ್ತು, ಉತ್ಪಾದನೆಯಲ್ಲಿ ಪ್ರಗತಿ
ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ದಶಕದಿಂದ (11 ವರ್ಷ) ಎಲೆಕ್ಟ್ರಾನಿಕ್ ಉತ್ಪಾದನೆ ಶೇಕಡಾ ಆರು ಪಟ್ಟು ವೃದ್ಧಿಯಾಗಿದೆ. ಅದರ ಉತ್ಪಾದನೆಯಲ್ಲಿ 12 ಲಕ್ಷ ಕೋಟಿ ರೂಪಾಯಿ ತಲುಪಿದ್ದು, ಇಲ್ಲಿಂದ ರಫ್ತು ಪ್ರಕ್ರಿಯೆಯಲ್ಲಿ 8 ಪಟ್ಟು ಪ್ರಗತಿ ಸಾಧಿಸಿದ್ದೇವೆ. ಭಾರತವು ಪ್ರಪಂಚದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ ಎಂದು ಹೇಳಿದರು.












Click it and Unblock the Notifications