ರಕ್ತಸಿಕ್ತ "ಕೈ" ನಿಂದ ಕಾನೂನು ಸುವ್ಯವಸ್ಥೆ ಅಸ್ತವ್ಯಸ್ತ: ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿಯ ಪೋಸ್ಟರ್ ವೈರಲ್
ಬೆಂಗಳೂರು, ಮೇ 18: ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಗೂಂಡಾಗಿರಿ, ಭಯೋತ್ಪಾದನೆಯ ಗ್ಯಾರಂಟಿಯನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಅಡೆತಡೆಗಳಿಲ್ಲದೆ ಜಾರಿ ಮಾಡಿದೆ. ಇದೇ ಆ ದಿನಗಳಲ್ಲಿ ಗೂಂಡಾ ರಾಜ್ಯ! ಎಂದು ಕರ್ನಾಟಕ ಬಿಜೆಪಿಯು ಲೇವಡಿ ಮಾಡಿದೆ. ಬಿಜೆಪಿ ಹಂಚಿಕೊಂಡಿರುವ ಕಾಂಗ್ರೆಸ್ ವಿರುದ್ಧ ಪೋಸ್ಟರ್‌ಗಳು ವೈರಲ್ ಆಗಿವೆ.
ಹುಬ್ಬಳ್ಳಿಯಲ್ಲಿ ನಿರಂತರ ಕೊಲೆಗಳಾಗಿವೆ. ಈ ಕುರಿತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಕೇಳಿ ಬಂದ ಬೆನ್ನಲ್ಲೆ ಇದೀಗ ಕಳೆದ ನಾಲ್ಕೇ ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಅಪರಾಧ ಚಟುವಟಿಕೆಗಳ ಅಂಕಿ ಸಂಖ್ಯೆಗಳು ಹೊರ ಬಿದ್ದಿವೆ.

ಕರ್ನಾಟಕದಲ್ಲಿ ಕಳೆದ ನಾಲ್ಕೇ ನಾಲ್ಕು ತಿಂಗಳಲ್ಲಿ ನೂರಾರು ಕೊಲೆಗಳು, ನೂರಾರು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಅನೇಕ ಅಪರಾಧ ಕೃತ್ಯಗಳು ಜರುಗಿವೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕವು, ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದರು.
ಪರಿಣಾಮ ಕಳೆದ 4 ತಿಂಗಳಲ್ಲೇ 430 ಕೊಲೆಗಳು ನಡೆದಿವೆ. 198 ಅತ್ಯಾಚಾರಗಳು, ಇನ್ನೂ ಸುಲಿಗೆ, ಅತ್ಯಾಚಾರ, ಪೋಕ್ಸೊ, ಗಲಭೆ ಇತ್ಯಾದಿಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ-ಅಂಶಗಳು ಮಾಹಿತಿ ಬಹಿರಂಗಪಡಿಸಿವೆ.
ಇದನ್ನೇ ಆಧಾರವಾಸಿಕೊಂಡ ಕರ್ನಾಟಕ ಬಿಜೆಪಿ, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಬಂದ ಮೇಲೆ ಖುದ್ದು ಒಂದಿಷ್ಟು ಗಲಭೆಗಳನ್ನು ಸೃಷ್ಟಿಸಿದೆ. ಹನುಮ ಧ್ವಜ, ಹಿಂದೂಗಳ ಮೇಲಿನ ಕೇಸ್, ಹಿಂದೂಗಳ ಬಂಧನ, ರಾಮನಗರ ವಕೀಲರ ಪ್ರಕರಣಗಳಲ್ಲಿ ಸರ್ಕಾರವೇ ಕೈ ಮಿಲಾಯಿಸಿದೆ ಎಂದು ದೂರಿದರು.

ರಕ್ತ ಸಿಕ್ತ "ಕೈ" ನಿಂದ ಕಾನೂನು ಸುವ್ಯವಸ್ಥೆ ಅಸ್ತವ್ಯಸ್ತ
ಅಪರಾಧಿಗಳಿಗೆ ಶ್ರೀರಕ್ಷೆ, ಅಮಾಯಕರಿಗೆ ಶಿಕ್ಷೆ ಎಂಬುದೇ ಇಂದಿನ ಕರ್ನಾಟಕ ರಾಜ್ಯ ಸರ್ಕಾರದ ಆಡಳಿತ ಧ್ಯೇಯವಾಗಿದೆ. ರಕ್ತ ಸಿಕ್ತ "ಕೈ" ನಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆದಿವೆ ಎಂದು ಆಕ್ರೋಶ ಹೊರ ಹಾಕಿದೆ.
ಕರುನಾಡಿನ ಶಾಂತಿಗೆ ಬೆಂಕಿ ಬಿದ್ದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಹೊರಬರಲು ಗ್ಯಾರಂಟಿ ಕೊಡುವ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಬಿಜೆಪಿ ಪೋಸ್ಟರ್ ರಿಲೀಸ್ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಗೃಹ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ದಕ್ಷ ಗೃಹ ಸಚಿವರು ಇಲ್ಲ ಎಂದು ಜಿ.ಪರಮೇಶ್ವರ ವಿರುದ್ಧ ಬಿಜೆಪಿ ಕಿಡಿ ಕಾರಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾನಗಲ್ ಹಿಂದು ಯುವಕರ ಹತ್ಯೆ, ವಿದ್ಯಾರ್ಥಿನಿ-ಯುವತಿಯ ಕೊಲೆಗಳು, ಆಸಿಡ್ ದಾಳಿ ಸೇರಿದಂತೆ ಅಪರಾಧ ಕೃತ್ಯಗಳ ಕುರಿತು 'ರಕ್ತ ಸಿಕ್ತ "ಕೈ" ಪೋಸ್ಟರ್ ಬಿಡುಗಡೆ ಮಾಡಿ ಬಿಜೆಪಿ ಕಿಡಿ ಕಾರಿದೆ.












Click it and Unblock the Notifications