ಮತ್ತೆ ಶುರುವಾಯ್ತು ಕಸ ಗಲಾಟೆ, ಎಲ್ಲಿ ಹೋಯ್ತು ಸ್ವಚ್ಛಭಾರತ?

ಬೆಂಗಳೂರು, ಜೂ. 17 : ಟೆರ್ರಾ ಫಾರ್ಮ್‌ಗೆ ಕಸ ವಿಲೇವಾರಿ ಮಾಡದಂತೆ ಒತ್ತಾಯಿಸಿ ಗುಂಡ್ಲಹಳ್ಳಿ ನಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿದೆ. ಬೆಂಗಳೂರಿನಿಂದ ಹೋದ 200ಕ್ಕೂ ಹೆಚ್ಚು ಕಸದ ಲಾರಿಗಳು 3 ಕಿ.ಮೀ.ವರೆಗೆ ಸಾಲುಗಟ್ಟಿ ನಿಂತಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಲಕ್ಷ್ಮೀ ನರಸಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ನಿಗದಿಪಡಿಸಿದಷ್ಟು ಕಸವನ್ನು ಮಾತ್ರ ಫಾರ್ಮ್‌ಗೆ ಕಳುಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. [ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]

garbage

ಗುಂಡ್ಲಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮೀ ನರಸಯ್ಯ ಅವರು, ಗ್ರಾಮದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಹೇಳಿದರು. [ಟೆರ್ರಾ ಫಾರ್ಮ್ ಕಸಕ್ಕೆ ಬೆಂಕಿ, ಜನರಿಗೆ ಸಂಕಷ್ಟ]

ಗುಂಡ್ಲಹಳ್ಳಿ ಗ್ರಾಮಕ್ಕೆ ಮಧ್ಯಾಹ್ನ ಭೇಟಿ ನೀಡುತ್ತೇನೆ, ಬಿಬಿಎಂಪಿ ಫಾರ್ಮ್‌ನಲ್ಲಿ ಕಸ ವಿಲೇವಾರಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಹೇಳಿದ್ದಾರೆ. ಲಕ್ಷ್ಮೀ ನರಸಯ್ಯ ಅವರ ಭರವಸೆಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ಮುಂದುವರೆಸಿದ್ದಾರೆ. [ಇದು ಕಸದ ಮಾರ್ಕೆಟ್, ಒಣ ಕಸ ಮಾರಿ ಹಣ ಪಡೆಯಿರಿ]

ಎಲ್ಲಿದೆ ಟೆರ್ರಾ ಫಾರ್ಮ್‌ : ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಬಳಿ ಟೆರ್ರಾ ಫಾರ್ಮ್ ಕಸ ವಿಲವೇವಾರಿ ಘಟಕವಿದೆ. ಕಸ ವಿಲೇವಾರಿ ಘಟಕದ ಸುತ್ತಮುತ್ತ ಗುಂಡ್ಲಹಳ್ಳಿ, ಕಾಮನ ಅಗ್ರಹಾರ, ಚಿಕ್ಕಮಂಕಲಾಳ ಮುಂತಾದ ಗ್ರಾಮಗಳಿವೆ.

ಗ್ರಾಮಸ್ಥರ ಬೇಡಿಕೆಗಳು

* ಕಸ ವಿಲೇವಾರಿ ಘಟಕದ ಸುತ್ತ-ಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು
* ನಿಗದಿ ಪಡಿಸಿದಷ್ಟು ಕಸವನ್ನು ಮಾತ್ರ ಫಾರ್ಮ್‌ಗೆ ಕಳುಹಿಸಬೇಕು
* ಶುದ್ಧ ಕುಡಿಯುವ ನೀರು ಒದಗಿಸಬೇಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+