ಜನವರಿ 1; ಕರ್ನಾಟಕದಲ್ಲಿ 877 ಕೊರೊನಾ ಪ್ರಕರಣಗಳು ದಾಖಲು
ಬೆಂಗಳೂರು, ಜನವರಿ 01: ಕರ್ನಾಟಕದಲ್ಲಿ ಜ.01ರ ಶುಕ್ರವಾರ 877 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 920373ಕ್ಕೆ ಏರಿಕೆಯಾಗಿದೆ.
ಇಂದು 1084 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ ಒಟ್ಟು 897200 ಮಂದಿ ಗುಣಮುಖರಾಗಿರುವುದಾಗಿ ತಿಳಿದುಬಂದಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ, 464 ಪ್ರಕರಣಗಳು ಕಂಡುಬಂದಿವೆ. ಕೊಪ್ಪಳ ಹಾಗೂ ರಾಮನಗರ ಶೂನ್ಯ ಪ್ರಕರಣ ದಾಖಲಿಸಿದೆ.
ಕಳೆದ 24 ಗಂಟೆಯಲ್ಲಿ ಆರು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪ್ರಸ್ತುತ 11058 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ ಕೊರೊನಾದಿಂದ ಒಟ್ಟು 12096 ಮಂದಿ ಮೃತಪಟ್ಟಿದ್ದಾರೆ. 189 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾವಾರು ಕೊರೊನಾ ವರದಿ: ಬಾಗಲಕೋಟೆ 16, ಬಳ್ಳಾರಿ 4, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 28, ಬೆಂಗಳೂರು ನಗರ 464, ಬೀದರ್ 6, ಚಾಮರಾಜನಗರ 12, ಚಿಕ್ಕಬಳ್ಳಾಪುರ 29, ಚಿಕ್ಕಮಗಳೂರು 8, ಚಿತ್ರದುರ್ಗ 39, ದಕ್ಷಿಣ ಕನ್ನಡ ಜಿಲ್ಲೆ 27, ದಾವಣಗೆರೆ 10, ಧಾರವಾಡ 5, ಗದಗ 12, ಹಾಸನ 20, ಹಾವೇರಿ 2, ಕಲಬುರಗಿ 11, ಕೊಡಗು 7, ಕೋಲಾರ 14, ಕೊಪ್ಪಳ 0, ಮಂಡ್ಯ 13, ಮೈಸೂರು 26, ರಾಯಚೂರು 3, ರಾಮನಗರ 0, ಶಿವಮೊಗ್ಗ 20, ತುಮಕೂರು 32, ಉಡುಪಿ 14, ಉತ್ತರ ಕನ್ನಡ 16, ವಿಜಯಪುರ 19, ಯಾದಗರಿಯಲ್ಲಿ 6 ಪ್ರಕರಣಗಳು ದಾಖಲಾಗಿವೆ.












Click it and Unblock the Notifications