Darshan: ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ; ಕಾರಣವೇನು?
ಬೆಂಗಳೂರು, ಜೂನ್ 25: ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಇದೀಗ ಅಕ್ಷರಶಃ ವಿಲವಿಲ ಎನ್ನುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದು, ದರ್ಶನ್ ಸ್ನೇಹಿತರ ಸಾಕಷ್ಟು ಅಂತರವನ್ನ ಕಾಯ್ದುಕೊಂಡಿದ್ದಾರೆ.
ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂಬ ವಿಚಾರವಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದಂದುಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿದ್ದು, ದರ್ಶನ್ ಜೈಲು ಸೇರಿ ಮೂರು ದಿನಗಳ ಬಳಿಕ ನಟ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ದರ್ಶನ್ ಭೇಟಿ ಮಾಡಿದ್ದರು. ಇದೀಗ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ ಎಂದು ಹೇಳಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸೆಂಟ್ರಲ್ ಜೈಲು ಪರಪ್ಪನ ಅಗ್ರಹಾರದಲ್ಲಿರೋ ಸ್ಯಾಂಡಲ್‍ವುಡ್ ನಟ ದರ್ಶನ್‍ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಬ್ಯಾರಕ್ ನಂ.3 ರ ಭದ್ರತಾ ಕೊಠಡಿಯಲ್ಲಿರೋ ದರ್ಶನ್ ಗೆ ಜೈಲಿನ ಇನ್ಸ್ ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ದರ್ಶನ್ ನೋಡಲು ಜೈಲಿನ ಕೈದಿಗಳು ಬರವ ಸಾಧ್ಯತೆಗಳಿವೆ. ಹೀಗಾಗಿ ಬ್ಯಾರಕ್ 3 ಬಳಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ಹಾಗೂ ಮಗನ ಜೊತೆ 15 ನಿಮಿಷ ಭೇಟಿಗೆ ಅವಕಾಶ ನೀಡಲಾಗಿತ್ತು. ಇದೀಗ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ. ದರ್ಶನ್ ಯಾರ ಸಂಪರ್ಕಕ್ಕೂ ಸಿಗದಂತೆ ಜೈಲಾಧಿಕಾರಿಗಳು ಭದ್ರತೆ ವಹಿಸಿದ್ದಾರೆ. ಊಟ, ತಿಂಡಿ ಅಂತಾ ಯಾವುದೇ ಸಮಯದಲ್ಲೂ ಜೈಲಿನ ಕೈದಿಗಳು ದರ್ಶನ್ ಬ್ಯಾರಕ್ ಬಳಿ ಬರದಂತೆ ತಡೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ, ನಟ ಪ್ರದೂಶ್ ಸೇರಿ ಒಟ್ಟು 16 ಜನರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ಬ್ಯಾರಕ್ ನಲ್ಲಿ ತನ್ನ ಜೊತೆಗಿದ್ದವರ ಜೊತೆಯೇ ದರ್ಶನ್ ಸರಿಯಾಗಿ ಮಾತನಾಡುತ್ತಿಲ್ಲ. ಮಾನಸಿಕವಾಗಿ ಕುಗ್ಗಿರೋ ನಟ ಭದ್ರತಾ ಕೊಠಡಿಯಲ್ಲಿ ಮೌನಕ್ಕೆ ಜಾರಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.












Click it and Unblock the Notifications