ಕನ್ನಡದ ಖ್ಯಾತ ವಿಮರ್ಶಕ ಜಿಎಚ್ ನಾಯಕ ನಿಧನ
ಮೈಸೂರು, ಮೇ 26: ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ನಿಷ್ಠುರ ಮಾತು, ವಿಮರ್ಶೆಯಿಂದ ಪ್ರಸಿದ್ದರಾಗಿದ್ದ ಹಿರಿಯ ಸಾಹಿತಿ ಪ್ರೊ.ಜಿ.ಎಚ್.ನಾಯಕ ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.
ಜಿ.ಎಚ್. ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ ಅವರು 1935 ಸೆಪ್ಟಂಬರ್ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಇವರು ಬಳಿಕ ಮೈಸೂರಿನಲ್ಲೇ ನೆಲೆಸಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ನಾಯಕರಿಗೆ ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾನಾಯಕ. ಪುತ್ರಿ ಕೀರ್ತಿ ಇದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದ ಅವರ ಅಂತ್ಯಕ್ರಿಯೆ ಮೊಮ್ಮಗಳು ಇಂಗ್ಲೆಂಡ್‌ನಿಂದ ಶನಿವಾರ ಬಂದ ನಂತರ ಮೈಸೂರಿನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಅವರ ಕೃತಿಗಳು
1. ಸಮಕಾಲೀನ (1973)
2. ಅನಿವಾರ್ಯ (1980)
3 ನಿರಪೇಕ್ಷೆ (1984)
4. ನಿಜದನಿ (1988)
5. ವಿನಯ ವಿಮರ್ಶೆ (1991)
6. ಸಕಾಲಿಕ (1995)
7. ಗುಣ ಗೌರವ (2002)
8. ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002)
9. ಕೃತಿ ಸಾಕ್ಷಿ (2006)
10. ಸ್ಥಿತಿ ಪ್ರಜ್ಞೆ (2007)
11. ಮತ್ತೆ ಮತ್ತೆ ಪಂಪ (2008)
12. ಸಾಹಿತ್ಯ ಸಮೀಕ್ಷೆ (2009)
13. ಉತ್ತರಾರ್ಧ (2011)

ಸಂಪಾದನಾ ಗ್ರಂಥಗಳು
1. ಕನ್ನಡ ಸಣ್ಣಕಥೆಗಳು
2. ಹೊಸಗನ್ನಡ ಕವಿತೆಗಳು
3. ಸಂವೇದನೆ (ಅಡಿಗರ ಗೌರವ ಗ್ರಂಥ)
4. ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
5. ಶತಮಾನದ ಕನ್ನಡ ಸಾಹಿತ್ಯ (ಸಂಪುಟ - 1.2)
6. ಆತ್ಮಕಥನ- ಬಾಳು
ಸಂದ ಪ್ರಶಸ್ತಿಗಳು
1. ಉತ್ತರಾರ್ಧ ಕೃತಿಗೆ 2014 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
2. ನಿರಪೇಕ್ಷ ವಿಮರ್ಶಾ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ.
3. ನಿಜದನಿ ವಿಮರ್ಶಾ ಕೃತಿಗೆ 'ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ' ಲಭಿಸಿವೆ.
4. ಪಂಪ ಪ್ರಶಸ್ತಿ











Click it and Unblock the Notifications