ಭಕ್ತರ ಗಮನಕ್ಕೆ; ಸೋಮವಾರ ದೇವಾಲಯ ಬಾಗಿಲು ತೆರೆಯಲ್ಲ

ಬೆಂಗಳೂರು, ಮೇ 31 : ದೇವಾಲಯ ಸೇರಿದಂತೆ ಪ್ರಾರ್ಥನಾ ಮಂದಿರಗಳು ಸೋಮವಾರ ಕರ್ನಾಟಕದಲ್ಲಿ ಬಾಗಿಲು ತೆರೆಯುವುದಿಲ್ಲ. ಭಕ್ತರು ದೇವರ ದರ್ಶನ ಪಡೆಯಲು ಇನ್ನೂ ಒಂದು ವಾರ ಕಾಯಬೇಕು.

Recommended Video

      ರೈತರಿಗೆ ಯಾವುದೇ ರೀತಿಯ ಮೋಸವಾಗದಂತೆ ನೋಡಿಕೊಳ್ಳಲು ಪಣ ತೊಟ್ಟಿರುವೆ - BC Patil | Farmers

      ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ರಾಜ್ಯದಲ್ಲಿನ ಎಲ್ಲಾ ದೇವಸ್ಥಾನಗಳನ್ನು ತೆರೆದು ಭಕ್ತರಿಗೆ ಪೂಜೆಗೆ ಅವಕಾಶ ನೀಡುವ ದಿನಾಂಕವನ್ನು ಜೂನ್ 8ಕ್ಕೆ ಮುಂದೂಡಲಾಗಿದೆ" ಎಂದು ಹೇಳಿದರು.

      ಕರ್ನಾಟಕ ಸರ್ಕಾರ ಜೂನ್ 1ರಿಂದ ದೇವಾಲಯ ಸೇರಿದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ತೆರೆಯಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಬೀಗ ಹಾಕಲಾಗಿದೆ.

       Religious Places Will Not Reopen From June 1

      ಕೇಂದ್ರ ಗೃಹ ಇಲಾಖೆ ಶುಕ್ರವಾರ 5ನೇ ಹಂತದ ಲಾಕ್ ಡೌನ್ ಮಾರ್ಗಸೂಚಿ ಪ್ರಕಟಿಸಿದಾಗ ಜೂನ್ 8ರಿಂದ ಪ್ರಾರ್ಥನಾ ಮಂದಿರ ತೆರೆಯಬಹುದು. ಆದರೆ, ಧಾರ್ಮಿಕ ಸಭೆ ಮುಂತಾದ ಜನ ಸಂದಣಿ ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು.

      ಇದರಿಂದಾಗಿ ಕರ್ನಾಟಕ ಸರ್ಕಾರವೂ ತನ್ನ ತೀರ್ಮಾನದಲ್ಲಿ ಬದಲಾವಣೆ ಮಾಡಿದೆ. ಜೂನ್ 1ರ ಸೋಮವಾರ ದೇವಾಲಯ ಸೇರಿದಂತೆ ಯಾವುದೇ ಪ್ರಾರ್ಥನಾ ಮಂದಿರ ಬಾಗಿಲು ತೆರೆಯುವುದಿಲ್ಲ. ಜೂನ್ 8ರ ತನಕ ಕಾಯಬೇಕಿದೆ.

      ಪ್ರಾರ್ಥನಾ ಮಂದಿರದಲ್ಲಿ ಪಾಲನೆ ಮಾಡಬೇಕಾದ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಎಲ್ಲಾ ಪ್ರಾರ್ಥನಾ ಮಂದಿರದಲ್ಲಿ ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+