ಬೀದರ್ ಪಶು ವಿವಿಯಲ್ಲಿ ಭರ್ಜರಿ ಉದ್ಯೋಗಭಾಗ್ಯ
ಬೀದರ್, ಏ. 23: ಇಲ್ಲಿನ ನಂದಿನಗರದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಭಾರಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನ.
ನಾನಾ ಹುದ್ದೆಗಳ ನೇಮಕಾತಿ ಆದೇಶ ಹೊರಬಿದ್ದಿದ್ದು, ಮೆಡಿಕಲ್ ಆಫೀಸರ್, ಸಹಾಯಕ ಆಡಳಿತಾಧಿಕಾರಿ, ಗ್ರಂಥಾಲಯ ಸಹಾಯಕರು, ಕಿರಿಯ ಇಂಜಿನಿಯರ್, ಟೆಕ್ನೀಷಿಯನ್, ಫಾರ್ಮ್ ಸೂಪರ್ ವೈಸರ್, ಫಾರ್ಮಾಸಿಸ್ಟ್, ಕಾಂಪೌಂಡರ್ ಸೇರಿದಂತೆ ಸುಮಾರು 153 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
18 ರಿಂದ 40 ವರ್ಷ ವಯಸ್ಸಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ನಿಗದಿಪಡಿಸಲಾಗಿದೆ. ರಿಟನ್ ಟೆಸ್ಟ್, ಸ್ಕಿಲ್ ಟೆಸ್ಟ್, ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿ ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟಿನಲ್ಲಿ ಲಭ್ಯವಿದೆ. http://www.kvafsu.kar.nic.in/













Click it and Unblock the Notifications