Get Updates
Get notified of breaking news, exclusive insights, and must-see stories!

ಎಂಕೆ ಗಣಪತಿ ಆತ್ಮಹತ್ಯೆ, ಮೌನ ಮುರಿದ ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಜುಲೈ 12 : ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಮೌನ ಮುರಿದಿದ್ದಾರೆ. 'ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳು ದಾಖಲೆ ಇದ್ದರೆ ತರಲಿ' ಎಂದು ಸವಾಲು ಹಾಕಿರುವ ಅವರು, 'ಮುಖ್ಯಮಂತ್ರಿಗಳು ಕೇಳಿದರೆ ಒಂದು ನಿಮಿಷದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಘೋಷಿಸಿದ್ದಾರೆ.

ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಳಿಕ ಟಿವಿ9ಗೆ ನೀಡಿದ Exclusive ಸಂದರ್ಶನದಲ್ಲಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು, 'ನಾನು ಒಂದು ಸಲ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರನ್ನು ಭೇಟಿ ಮಾಡಿರಬಹುದು. ಅಷ್ಟಾಗಿ ಅವರ ಪರಿಚಯ ನನಗೆ ಇಲ್ಲ. ಯಾವ ಐಪಿಎಸ್ ಅಧಿಕಾರಿಗಳ ಜೊತೆಯೂ ನಾನು ಗಣಪತಿ ಅವರ ಕುರಿತು ಮಾತನಾಡಿಲ್ಲ' ಎಂದು ಸ್ಪಷ್ಟ ಪಡಿಸಿದರು. [ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ಕೊಡಿ]

kj george

ಸಂದರ್ಶನದಲ್ಲಿ ಕೆ.ಜೆ.ಜಾರ್ಜ್ ಹೇಳಿದ್ದಿಷ್ಟು..... [ಎಂಕೆ ಗಣಪತಿ ಆತ್ಮಹತ್ಯೆ : ಸದನದಲ್ಲಿ ಯಾರು, ಏನು ಹೇಳಿದರು?]

* ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಪ್ರತಿಪಕ್ಷಗಳು ಈ ವಿಚಾರದಲ್ಲಿ ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡುತ್ತಿವೆ. ನಾನು ಅಧಿಕಾರಕ್ಕೆ ಅಂಟಿ ಕೂತವನಲ್ಲ, ಮುಖ್ಯಮಂತ್ರಿಗಳು ಬಯಸಿದರೆ ಒಂದು ನಿಮಿಷದಲ್ಲಿ ರಾಜೀನಾಮೆ ನೀಡುತ್ತೇನೆ. [ಜಾರ್ಜ್ ವಿರುದ್ಧ FIR ದಾಖಲಿಸಿ : ಓದುಗರ ಒಕ್ಕೊರಲ ಕೂಗು]

* 2008 ಚರ್ಚ್ ದಾಳಿಯ ಸಂದರ್ಭದಲ್ಲಿ ನಾನು ಮಂಗಳೂರಿಗೆ ಭೇಟಿ ನೀಡಿದ್ದೆ. ಆದರೆ, ಗಣಪತಿ ಅವರನ್ನು ಭೇಟಿ ಮಾಡಿರಲಿಲ್ಲ. ಬಿಷಪ್ ಜೊತೆ ಮಾತನಾಡಿದ್ದೆ, ದೇವಾಲಯಕ್ಕೆ ಹೋಗಿದ್ದೆ. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದೆ. ಜನರೊಂದಿಗೆ ಮಾತುಕತೆ ನಡೆಸಿದ್ದೆ. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

* ಗಣಪತಿ ಅವರಿಗೆ ಚರ್ಚ್ ದಾಳಿಯ ನಂತರ ಒಳ್ಳೆಯ ಹುದ್ದೆಗಳು ಸಿಕ್ಕಿವೆ. ಒಂದು ವೇಳೆ ನಾನು ಹಸ್ತಕ್ಷೇಪ ಮಾಡಿದ್ದರೆ ಅವರಿಗೆ ಪ್ರಮೋಷನ್ ಸಿಗುತ್ತಿರಲಿಲ್ಲ. ನಾನು ಯಾವತ್ತೂ ಇಲಾಖೆಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಚೆನ್ನಾಗಿ ಕೆಲಸ ಮಾಡುವವರಿಗೆ ಬೆಂಬಲ ನೀಡಿದ್ದೇನೆ, ತಪ್ಪು ಮಾಡಿದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡಿದ್ದೇನೆ. [ಸಚಿವ ಜಾರ್ಜ್ ವಿರುದ್ಧ ಗಣಪತಿ ಪತ್ನಿ, ಪುತ್ರರಿಂದ ದೂರು]

* ಎಂ.ಕೆ.ಗಣಪತಿ ಅವರು ರಾಜಗೋಪಾಲನಗರ ಠಾಣೆಯಲ್ಲಿ ಕೆಲಸ ಮಾಡುವಾಗ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು. ಅಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ರಾಘವೇಂದ್ರ ಔರಾದ್ಕರ್ ಅವರು ಗಣಪತಿ ಅವರನ್ನು ಅಮಾನತು ಮಾಡಿದ್ದರು.

* ಅಮಾನತುಗೊಂಡ ಬಳಿಕ ಎಂ.ಕೆ.ಗಣಪತಿ ಅವರು ನನ್ನನ್ನು ಭೇಟಿ ಮಾಡಿದ್ದರು. ಅಮಾನತು ರದ್ದು ಮಾಡುವಂತೆ ಮನವಿ ಮಾಡಿದ್ದರು. ಆದರೆ, ನಿಮ್ಮ ಬಳಿ ದಾಖಲೆಗಳಿದ್ದರೆ ತನಿಖಾಧಿಕಾರಿಗಳ ಬಳಿ ಹೋಗಿ ದಾಖಲೆ ಕೊಡಿ, ನಾನು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

* ನನ್ನನ್ನು ಭೇಟಿ ಮಾಡಿದ ಒಂದು ತಿಂಗಳ ನಂತರ ಗಣಪತಿ ಅವರ ಅಮಾನತು ರದ್ದಾಯಿತು. ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಅವರಿಗೆ ಪೋಸ್ಟಿಂಗ್ ಆಯಿತು. ನನಗೆ ಅವರ ಮೇಲೆ ದ್ವೇಷ ವಿದ್ದರೆ, ಅವರ ಅಮಾನತು ರದ್ದಾಗುವುದನ್ನು ತಡೆಯಬಹುದಿತ್ತು.

* ನನ್ನ ಜೊತೆ ಇಬ್ಬರು ಐಪಿಎಸ್ ಅಧಿಕಾರಿಗಳ ಹೆಸರನ್ನು ಗಣಪತಿ ಅವರು ಹೇಳಿದ್ದಾರೆ. ಆದರೆ, ಗಣಪತಿ ಅವರು ನನಗೆ ಅಷ್ಟಾಗಿ ಪರಿಚಯವಿರಲಿಲ್ಲ. ನಾನು ಯಾವ ಐಪಿಎಸ್ ಅಧಿಕಾರಿಗಳ ಬಳಿಯೂ ಗಣಪತಿ ಅವರ ಕುರಿತಂತೆ ಮಾತನಾಡಿಲ್ಲ.

* ನಾನು ಗಣಪತಿ ಅವರಿಗೆ ಕಿರುಕುಳ ಕೊಟ್ಟಿದ್ದರೆ ಸಾಕ್ಷಿಗಳು ಇರಬೇಕಲ್ಲ. ವಿರೋಧ ಪಕ್ಷದವರು, ಮಾಧ್ಯಮದವರು, ಗಣಪತಿ ಅವರ ಕುಟುಂಬದವರು ಸಾಕ್ಷಿಗಳಿದ್ದರೆ ಅದನ್ನು ನೀಡಲಿ. ಸುಮ್ಮನೆ ನನ್ನ ಮೇಲೆ ಆರೋಪಗಳನ್ನು ಮಾಡುವುದು ಸರಿಯಲ್ಲ.

* ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣವಾದ ನಂಬಿಕೆ ಇದೆ. ತನಿಖೆಯ ಹಂತದಲ್ಲಿರುವ ಪ್ರಕರಣದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ಗಣಪತಿ ಅವರ ಕುಟುಂಬಕ್ಕೆ ಸಾವಿನ ದುಃಖವನ್ನು ತಡೆಯುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

* ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಅಧಿಕಾರಕ್ಕೆ ಅಂಟಿಕೊಂಡವನಲ್ಲ. ನನ್ನ ಕ್ಷೇತ್ರದ ಮತದಾರರಿಗಾಗಿ ನಾನು ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಗಳು ಕೇಳಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.

* ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ವಿಪಕ್ಷಗಳು ನನ್ನ ರಾಜೀನಾಮೆ ಕೇಳುತ್ತಿವೆ. ನಾನು ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ತನಿಖೆಯ ವರದಿ ಬಂದ ಬಳಿಕ ಎಲ್ಲವೂ ತಿಳಿಯುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+