ಮಾಜಿ ಶಾಸಕ ರಘುಪತಿ ಭಟ್ ಶೀಘ್ರದಲ್ಲಿ ಬಿಜೆಪಿಗೆ?
ಹುಬ್ಬಳ್ಳೀ, ಅಕ್ಟೋಬರ್ 01: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ಬಿಜೆಪಿಯಿಂದ ಉಚ್ಛಾಟನೆಗೊಂಡ ಮಾಜಿ ಶಾಸಕ ಕೆ ರಘುಪತಿ ಭಟ್ ಅವರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ಸೇರ್ಪಡೆ ಕುರಿತು ಬಿಜೆಪಿ ಹಿರಿಯ ನಾಯಕರ ಜೊತೆಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಜಿ ಶಾಸಕ ಕೆ ರಘುಪತಿ ಭಟ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಮತ್ತೇ ನನಗೆ ಭಾರತೀಯ ಜನತಾ ಪಕ್ಷಕ್ಕೆ ಮರಳಿ ಸೇರ್ಪಡೆಗೆ ಆಹ್ವಾನ ನೀಡಿದರೆ ಮರು ಸೇರ್ಪಡೆಗೆ ಸಿದ್ಧ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನರನ್ನ ಮರಳಿ ಬಿಜೆಪಿಗೆ ಸೇರ್ಪಡೆಗೆ ಚಿಂತನೆ ನಡೆದಿದ್ದು ನನ್ನ ಕರೆದರೂ ಹೋಗುವೆ ನನಗೆ ಯಾವುದೇ ಸಮಸ್ಯೆ ಇಲ್ಲ. ಖಂಡಿತವಾಗಿಯೂ ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಆಗಿದ್ದೇನೆ. ಚುನಾವಣೆಯಲ್ಲಿ ಸೋಲಿಲಿ ಬಿಡಲಿ ಬಿಜೆಪಿ ಕಾರ್ಯಕರ್ತನಾಗಿ ಇರುವೆ ಎಂದು ಆವಾಗಲೇ ಹೇಳಿದ್ದೆಈಗಲೂ ಹಾಗೇ ಇದ್ದೇನೆ ಎಂದರು.
ಬಿಜೆಪಿಯಲ್ಲಿ ಅತೃಪ್ತಿ ನಾಯಕರ ಸಭೆ, ಗಂಗಾ ಜಲದಿಂದ ಬಿಜೆಪಿ ಶುದ್ಧೀಕರಣ ಮಾಡಬೇಕು ಎಂಬ ವಿಚಾರ ಈ ವಿಚಾರವಾಗಿ ಒಬ್ಬಬ್ಬರದು ಒಂದು ಅಭಿಪ್ರಾಯ ಇರುತ್ತದೆನಾನು ಚುನಾವಣಗೆ ಸ್ಪರ್ಧೆ ಮಾಡುವಾಗ ಬಿಜೆಪಿ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇ ಆದರೆ ನಾನು ರಾಷ್ಟ್ರೀಯ ವಿಚಾರ ಇರಿಸಿಕೊಂಡು ರಾಜಕಾರಣ ಮಾಡಿದವನುನನಗೆ ಪಕ್ಷದಿಂದ ಉಚ್ಚಾಟನೆ ಆಗಿದ್ದುಮರಳಿ ಕರೆದರೆ ಖಂಡಿತವಾಗಿಯೂ ಹೋಗುವೆ ನೋಡಿ ಈಗ ನಾನುಈಗ ರಾಜಕಾರಣಕ್ಕೆ ಸ್ವಲ್ಪ ವಿರಾಮ ಹೇಳಿ ಧಾರ್ಮಿಕ ಕಾರ್ಯಕ್ರಮ ಮಾಡಿಕೊಂಡು ಇದ್ದೇನೆ ಹೆಚ್ಚು ನೆಮ್ಮದಿಯಲ್ಲಿ ಈಗ ಇದ್ದೇನೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯಾ ರಾಜೀನಾಮೆ ನೀಡಬೇಕು ಎಂಬ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡಿದ ಅವರು, ರಾಜಕಾರಣದಲ್ಲಿ ಇದೊಂದು ಸ್ವಾಭಾವಿಕ ವಿಚಾರ ಪ್ರಕ್ರಿಯೆ ಆಗಿದೆ. ಯಾರಾದರೂ ಮೇಲೆ ಎಫ್ ಐ ಆರ್ ಆದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತಹದು ಇದೊಂದು ಇದುವರೆಗೆ ನಡೆದುಕೊಂಡು ಬಂದಿರುವ ಸಾಂಪ್ರದಾಯ ಆಗಿದೆ.
ಬಿಜೆಪಿ ಹಿರಿಯ ನಾಯಕರಾಗಿದ್ದಅಡ್ವಾಣಿ ಅವರು ಹವಾಲ್ ಹಗರಣದಲ್ಲಿ ಡೈರಿಯಲ್ಲಿ ಹೆಸರು ಬಂದಾಗ ರಾಜೀನಾಮೆ ಕೊಟ್ಟರುನಂತರ ಕ್ಲೀನ್ ಚೀಟಾಗಿ ಮತ್ತೇ ಒಳಗೆ ಬಂದರು ಅದೇ ರೀತಿ ಆಗಿ ಸಿದ್ಧರಾಮಯ್ಯಾ ನವರು ಕಪ್ಪು ಚುಕ್ಕೆ ಇಲ್ಲದವನು ಅಂತಾ ಹೇಳಿಕೊಂಡು ಬರತಾ ಇದ್ದವರು. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಕ್ಲೀನ್ ಚೀಟ್ ಆಗಿ ಹೊರಗೆ ಬರುವುದು ಒಳ್ಳೆಯದುಮುಖ್ಯಮಂತ್ರಿಯಾಗಿ ಅವರ ಅಡಿಯಲ್ಲಿ ಬರುವ ರಾಜ್ಯ ಸರ್ಕಾರದ ಸಂಸ್ಥೆಗಳಿಂದ ಯಾವುದೇ ತನಿಖೆ ಸರಿಯಲ್ಲ. ರಾಜ್ಯ ಸರ್ಕಾರದ ಹಸ್ತಕ್ಷೇಪ ಇಲ್ಲದೇ ತನಿಖೆ ಅಸಾಧ್ಯ. ಹೀಗಾಗಿ ಸಿದ್ಧರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.
ನಿರ್ಮಲಾ ಸಿತಾರಾಮನ್, ಕುಮಾರಸ್ವಾಮಿ, ನಳೀನ್ ಕುಮಾರ ಕಟೀಲ್ ಮೇಲೆ ಸಹ ಎಫ್ ಐಆರ್ ಆಗಿದ್ದು ಅವರು ರಾಜೀನಾಮೆ ಕೊಡಲಿ ಎಂಬ ವಿಚಾರವಾಗಿ ಮಾತನಾಡಿ, ನಿರ್ಮಲಾ ಸಿತಾರಾಮನ್ ವೈಯಕ್ತಿಕವಾದ ವಿಷಯದಲ್ಲಿ ಆಗಿಲ್ಲ. ಪಕ್ಷಕ್ಕಾಗಿ ಚುನಾವಣಾ ಬಾಂಡ್ ತೆಗೆದುಕೊಂಡಿದ್ದಾರೆ ಎಂದ ಅವರು ನಿರ್ಮಲಾ ಸಿತಾರಾಮನ್ ಮುಡಾ ಹಗರಣದಂತ ಹಗರಣ ಸಿಕ್ಕಿಲ್ಲ ಎಂದು ಹೇಳಿದರು.
ಯಾವುದೇ ವೈಯಕ್ತಿಕವಾಗಿ ಹಗರಣ ಮಾಡಿಲ್ಲಚುನಾವಣಾ ಬಾಂಡ್ ಕೇಂದ್ರ ಸರ್ಕಾರದ ಅನುಮತಿ ಇರುವ ಬಾಂಡ್ ಇದೊಂದು ಅಧಿಕೃತವಾದ ಬಾಂಡ್ ತೆಗೆದುಕೊಂಡಿದ್ದಾರೆ ಅಷ್ಟೇ ಈ ಪ್ರಕರಣಕ್ಕೋ ಈಗ ಕೋರ್ಟ್ ನಲ್ಲಿ ತಡೆಯಾಜ್ಞೆ ಸಿಕ್ಕಿದೆ. ಮುಡಾ ಹಗರಣಕ್ಕೋ ಚುನಾವಣಾ ಬಾಂಡ್ ಖರೀದಿ ವಿಚಾರಕ್ಕೋ ಸಂಬಂಧ ಬರಲ್ಲ ಎಂದು ಹೇಳಿದರು.
ಸಿಎಂ ಸಿದ್ಧರಾಮಯ್ಯನವರಿಂದ ನಾಡಹಬ್ಬ ಉದ್ಘಾಟನೆ ಮಾಡಲು ವಿರೋಧ ಬಂದ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಮುಡಾ ಹಗರಣದಲ್ಲಿ ಸಿಎಂ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವ ವಿಚಾರದಲ್ಲಿ ಸಾಕಷ್ಟು ಚರ್ಚೆ ಆಯಿತು ಸುದೀರ್ಘವಾದ ವಾದ ವಿವಾದಗಳು ಆದವುಆದರೆ ಈಗ ಅವರ ಮೇಲೆ ಎಫ್ ಐ ಆರ್ ಆಗಿದೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications