ಕರ್ನಾಟಕ: ಹೆಚ್ಚುವರಿ ಅಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ
ಬೆಂಗಳೂರು, ಜನವರಿ 04: ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಸಹಿ ಸುದ್ದಿಯೊಂದನ್ನು ನೀಡಿದೆ. ಪಡಿತರಿಗೆ ನೀಡುತ್ತಿರುವ ಹಾಲಿ 5 ಕೆ.ಜಿ. ಅಕ್ಕಿ ಜೊತೆಗೆ 1 ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಿಸಲು ಆದೇಶಿಸಲಾಗಿದೆ.
ರಾಜ್ಯ ಸರ್ಕಾರದ ಆದೇಶದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದೇ ತಿಂಗಳಿನಿಂದ ಅನ್ವಯವಾಗುವಂತೆ ರಾಜ್ಯ ಪಡಿತರ ಚೀಟಿದಾರರು ಐದು ಅಕ್ಕಿ ಜೊತೆಗೆ ಹೆಚ್ಚುವರಿ ಒಂದು ಕೆ.ಜಿ.ಅಕ್ಕಿಯನ್ನು ಹತ್ತಿರದ ನ್ಯಾಯಬೆಲೆ ಅಂಗಡಿಯಿಂದ ಪಡೆಯಲಿದ್ದಾರೆ. ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.
2022-23 ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಅರ್ಹ ಫಲಾನುಭವಿಗಳಿಗೆ ಇದುವರೆಗೆ ಐದು ಕೆ.ಜಿ.ಅಕ್ಕಿ ನೀಡಲಾಗುತ್ತಿದೆ. ಈ ಧಾನ್ಯಗಳ ಜೊತೆಗೆ ಒಂದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ.

ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್‌ನ ಭರವಸೆಯನ್ನು ಸಾಕಾರ ಮಾಡಿ ಗುದ್ದು ನೀಡಿದೆ. ಏಕೆಂದರೆ ಅನ್ನಭಾಗ್ಯ ಯೋಜನೆ ಕಾಂಗ್ರೆಸ್‌ನ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಇದೇ ಅನ್ನಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ ಸಹ ಚುನಾವಣೆ ಅಸ್ತವಾಗಿಟ್ಟುಕೊಂಡಿತ್ತು ಎನ್ನಲಾಗುವ ಕಾಂಗ್ರೆಸ್, ಹೆಚ್ಚುವರಿ 1ಕೆ.ಜಿ. ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್‌ಗೂ ಮೊದಲ ಬಿಜೆಪಿ ಹೆಚ್ಚುವರಿ ಒಂದು ಕೆ.ಜಿ. ಅಕ್ಕಿಯನ್ನು ಇದೇ ತಿಂಗಳಿನಿಂದ ನೀಡುವುದಾಗಿ ಆದೇಶಿಸಿದೆ.
ಅನ್ನಭಾಗ್ಯ ಯೋಜನೆ ಮಾಹಿತಿ
ಅನ್ನಭಾಗ್ಯ ಯೋಜನೆ 2013ರಲ್ಲಿ ಜಾರಿಯಾಯಿತು. ಮೊದಲು ಬಿಪಿಎಲ ಫಲಾನುಭವಿ ಒಬ್ಬ ಸದಸ್ಯನಿಗೆ 4ಕೆ.ಜಿ. ಅಕ್ಕಿ ಮತ್ತು 1 ಕೆ.ಜಿ.ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಠ 20 ಕೆ.ಜಿ. ಅಕ್ಕಿ ಹಾಗೂ 3ಕೆ.ಜಿ. ಗೋಧಿ ನೀಡಲಾಗುತ್ತಿತ್ತು. ನಂತರ ಹೊಸ ಯೋಜನೆಯಡಿ ಒಬ್ಬ ಸದಸ್ಯನಿರುವ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಅದಕ್ಕು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರಧಾನ್ಯವನ್ನು ಪ್ರತಿ ಕೆ.ಜಿ.ಗೆ ರೂ.1ರಂತೆ ನೀಡಲಾಗುತ್ತಿತ್ತು.

7 ಮತ್ತು ಹೆಚ್ಚಿನ ಸದಸ್ಯರಿರುವ ಕುಟುಂಬಗಳಿಗೆ ಅನ್ವಯವಾಗುವಂತೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ತಲಾ 5 ಕೆ.ಜಿ ಆಹಾರಧಾನ್ಯ ಹಂಚಿಕೆ ಆಗುತ್ತಿದೆ. ಅಂತೋದಯ ಪಡಿತರ ಕುಟುಂಬಗಳಿಗೆ ಮಾಸಿಕ ತಲಾ 35ಕೆ.ಜಿ. ಅಕ್ಕಿ ನೀಡಲಾಗುತ್ತಿದೆ.












Click it and Unblock the Notifications