ಜಮಖಂಡಿಯ ಅತ್ಯಾಚಾರಿ ಕೊಲೆಗಡುಕನಿಗೆ ಜೀವಾವಧಿ

By: ಜಮಖಂಡಿ ಪ್ರತಿನಿಧಿ
Subscribe to Oneindia Kannada

ಜಮಖಂಡಿ, ಡಿಸೆಂಬರ್ 11 : ಅಪ್ರಾಪ್ತ ಬಾಲಕಿ ಮೇಲೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆಸಂಗಿ ಗ್ರಾಮದ ಯಮನಪ್ಪ ಸತ್ಯಪ ಮಾಂಗ (40) ಎಂಬ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 35 ಸಾವಿರ ರು. ದಂಡ ವಿಧಿಸಲಾಗಿದೆ.

ನಗರದ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಅವರು ಗುರುವಾರ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. 35 ಸಾವಿರ ರು. ದಂಡ ಕಟ್ಟಲು ಅಪರಾಧಿ ವಿಫಲನಾದರೆ ಹೆಚ್ಚುವರಿ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರು. ದಂಡ, ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಲಾಗಿದೆ. [ಹಾಸನದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ]

Rapist murderer sentenced to life imprisonment in Jamakhandi

ಮೂರು ವರ್ಷಗಳ ಹಿಂದೆ ಬನಹಟ್ಟಿ ಡೆಂಪು ಡೇರಿ ಹತ್ತಿರದ ನಿರ್ಜನ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಈ ಕುರಿತು ಬಾಲಕಿಯ ತಂದೆ ಕುಮಾರ ಮಾಂಗ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅಂದಿನ ಪಿಎಸ್‌ಐ ಡಿ.ಎಚ್. ದೋತ್ರೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಸಿಪಿಐ ಎಂ.ಬಿ. ಸಂಕದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಎಸ್.ಕೂಗನವರ ವಕಾಲತ್ತು ವಹಿಸಿದ್ದರು. ಆರೋಪಿ ಪರ ಈಶ್ವರಚಂದ್ರ ಭೂತಿ ವಾದ ಮಂಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rapist and murderer has been sentenced to life imprisonment by 1st additional sessions court in Jamakhandi in Bagalkot district on 10th December. The accused had raped and murdered minor girl in a secluded place 3 years ago.
Please Wait while comments are loading...