ರಮ್ಯಾ ಟ್ವೀಟ್ ಗೆ ಉತ್ತರಿಸದೆ ಮೌನಕ್ಕೆ ಜಾರಿದ ರಾಜೀವ್ ಚಂದ್ರಶೇಖರ್
ಬೆಂಗಳೂರು, ಫೆಬ್ರವರಿ 6: 'ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಮ್ಯುನಿಕೇಶನ್' ಮುಖ್ಯಸ್ಥೆ ರಮ್ಯಾ (ದಿವ್ಯ ಸ್ಪಂದನ) ಟ್ವೀಟ್ ನಲ್ಲೇ ಎನ್.ಡಿ.ಎ ನಾಯಕ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಾಯಿ ಮುಚ್ಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಲೆಳೆಯಲು ಹೋಗಿದ್ದ ಉದ್ಯಮಿ ರಾಜೀವ್ ಚಂದ್ರಶೇಖರ್ ಇದೀಗ ರಮ್ಯಾ ಸರಣಿ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಪೇಚಿಗೆ ಸಿಲುಕಿದ್ದಾರೆ. ರಮ್ಯಾ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ರಾಜೀವ್ ಚಂದ್ರಶೇಖರ್ ಮುಗುಮ್ಮಾಗಿ ಕುಳಿತಿದ್ದಾರೆ. ಸಿಎಂ, ರಾಜೀವ್ ಮತ್ತು ರಮ್ಯಾ ನಡುವೆ ನಡೆದ ಟ್ಟೀಟ್ ಸಮರದ ವಿವರಗಳು ಇಲ್ಲಿವೆ.
| Array |
ಪ್ರಧಾನಿಗೆ ಪಂಥಾಹ್ವಾನ
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿ ಮರಳಿದ ನಂತರ ಸಿದ್ದರಾಮಯ್ಯ ಟ್ಟೀಟ್ ಒಂದನ್ನು ಮಾಡಿದ್ದರು.
"ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಈಗ ನಾನು ಅವರನ್ನು ನೇರಾ ನೇರ ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ. ಇದರ ಆರಂಭವಾಗಿ, ನೀವು,
1. ಲೋಕಪಾಲರನ್ನು ನೇಮಿಸಿ
2. ನ್ಯಾಯಧೀಶ ಲೋಯಾ ಸಾವಿನ ಪ್ರಕರಣವನ್ನು ತನಿಖೆ ಮಾಡಿ
3. ಜಯ್ ಶಾ ಭಾರೀ ಆಸ್ತಿ ಏರಿಕೆ ಬಗ್ಗೆ ತನಿಖೆ ಮಾಡಿ
4. ಕಳಂಕರಹಿತ ವ್ಯಕ್ತಿಯನ್ನು ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೇಮಿಸಿ,"
ಎಂದು ಟ್ಟೀಟ್ ಮಾಡಿದ್ದರು.
|
ಸಿಎಂ ಕಾಲೆಳೆದ ರಾಜೀವ್
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟ್ಟೀಟ್ ಗೆ ಕಾಮೆಂಟ್ ಮಾಡಿದ್ದ ರಾಜೀವ್ ಚಂದ್ರಶೇಖರ್ "ಯಸ್ ಸಿದ್ದರಾಮಯ್ಯನವರೇ ಸಂಪೂರ್ಣ ಪಟ್ಟಿಯ ಬಗ್ಗೆ ಮಾತನಾಡೋಣ," ಎಂದು ಅವರೂ ಆಹ್ವಾನ ನೀಡಿದ್ದರು.
|
ಪೇಚಿಗೆ ಸಿಲುಕಿಸಿದ ಟ್ಟೀಟ್
ರಾಜೀವ್ ಚಂದ್ರಶೇಖರ್ ಟ್ಟೀಟ್ ಗೆ ಪ್ರತಿಕ್ರಿಯೆ ನೀಡಿದ್ದ ರಮ್ಯಾ, "ಇಲ್ಲಿ ಸಂಪೂರ್ಣ ಪಟ್ಟಿ ಇದೆ. ಇದಕ್ಕೆ ನಿಮ್ಮಿಂದ ಉತ್ತರ ಬೇಕಾಗಿದೆ," ಎಂದು ಟ್ಟೀಟ್ ಮಾಡಿದ್ದರು. ಇದರಲ್ಲಿ ಅವರು ನಾಲ್ಕು ಅಂಶಗಳನ್ನು ಉಲ್ಲೇಖಿಸಿದ್ದರು.
"1. ಕೆಎಂಎಫ್ ಗೆ ಕೋರಮಂಗಲದಲ್ಲಿ ಹಂಚಿಕೆ ಮಾಡಿದ ಭೂಮಿ
2. ಹಾಸನದಲ್ಲಿ ಹಂಚಿಕೆ ಮಾಡಿದ ಎಸ್ಇಝಡ್ ಜಮೀನು
3. ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಹಂಚಿಕೆಯಾದ 75 ಎಕರೆ ಭೂಮಿ
4. ದಾಬಸ್ ಪೇಟೆಯಲ್ಲಿ ಘಟಕ ಸ್ಥಾಪಿಸಲು ಕೆಐಎಡಿಬಿಯಿಂದ ವಶಕ್ಕೆ ಪಡೆದುಕೊಂಡ ಜಾಗ," ಎಂದು ರಮ್ಯಾ ಟ್ಟೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಮೌನಂ ಸಮ್ಮತಿ ಲಕ್ಷಣಂ?
ಇದಾದ ಬಳಿಕ ರಾಜೀವ್ ಚಂದ್ರಶೇಖರ್ ಹಲವಾರು ಟ್ಟೀಟ್ ಗಳನ್ನು ಮಾಡಿದ್ದು ಯಾವುದರಲ್ಲೂ ರಮ್ಯಾ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮೌನ ಸಮ್ಮತಿಯ ಲಕ್ಷಣವೋ ಗೊತ್ತಿಲ್ಲ.












Click it and Unblock the Notifications