ಚುನಾವಣಾ ಅಖಾಡಕ್ಕೆ ರಮ್ಯಾ ತಾಯಿ ರಂಜಿತಾ?
Recommended Video

ಮಂಡ್ಯ, ಮಾರ್ಚ್ 20: ಚುನಾವಣೆ ಹತ್ತಿರವಾಗುತ್ತಲೂ ಮಂಡ್ಯ ರಾಜಕೀಯ ಕ್ಷಿಪ್ರಗತಿಯಲ್ಲಿ ಗರಿಗೆದರುತ್ತಿದೆ. ಟಿಕೆಟ್‌ಗಾಗಿ ಅರ್ಜಿಯೇ ಹಾಕದ ಮಂಡ್ಯದ ಗಂಡು ಅಂಬರೀಶ್ ನಡೆ ಕುತೂಹಲ ಮೂಡಿಸಿರುವ ಬೆನ್ನಲ್ಲೇ ಈಗ ಮಂಡ್ಯದ ರಾಜಕೀಯ ಮೊಗಸಾಲೆಯಿಂದ ಹೊಸ ಸುದ್ದಿಯೊಂದು ಬಂದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸ್ಯಾಂಡಲ್‌ವುಡ್ ಕ್ವೀನ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ಹೊತ್ತಿರುವ ರಮ್ಯ ಅವರ ತಾಯಿ ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರಂತೆ. ಹೌದು, ಈ ಬಗ್ಗೆ ಅವರು ತಮ್ಮ ಆಪ್ತೇಷ್ಟರ ವಲಯದಲ್ಲಿ ಚರ್ಚೆ ಮಾಡಿದ್ದು, ಎರಡು ದಶಕದಿಂದಲೂ ರಾಜಕೀಯದಿಂದ ದೂರ ಉಳಿದಿದ್ದ ರಮ್ಯಾ ಅವರ ತಾಯಿ ರಂಜಿತ ಅವರು ಈಗ ದಿಢೀರನೆ ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ದಾರೆ.
ರಂಜಿತ ಅವರು ಈ ಹಿಂದೆ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎರಡು ದಶಕದ ಹಿಂದೆ ಗುರುತಿಸಿಕೊಂಡಿದ್ದರು, ಅದಾದ ನಂತರ ಅವರು ತೆರೆ ಮರೆಗೆ ಸರಿದ್ದರು. ಇದೀಗ ಮತ್ತೆ ಮುನ್ನೆಲೆಗೆ ಬರುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಕಾರಣ ತಮ್ಮ ಮಗಳಿಗೆ ರಾಜ್ಯ ರಾಜಕಾರಣದಲ್ಲಿ ನೀಡಲಾಗಿರುವ ಕನಿಷ್ಟ ಆದ್ಯತೆಯೇ ಎನ್ನಲಾಗಿದೆ.

ರಮ್ಯಾ ಅವರು ದೆಹಲಿ ರಾಜಕಾರಣದಲ್ಲಿ ಕಾಂಗ್ರೆಸ್‌ನ ಎ ದರ್ಜೆ ನಾಯಕರೊಟ್ಟಿಗೆ ಗುರುತಿಸಿಕೊಂಡಿದ್ದಾರೆ, ಆದರೆ ರಾಜ್ಯ ರಾಜಕಾರಣದಲ್ಲಿ ಅವರಿಗೆ ಸಿಗುತ್ತಿರುವ ಆದ್ಯತೆ ಕಡಿಮೆಯೇ ಇದು ಅವರ ತಾಯಿ ರಂಜಿತರನ್ನು ಬಾಧಿಸಿದೆಯಂತೆ ಹಾಗಾಗಿ ಅವರು ಪಕ್ಷೇತರವಾಗಿ ಕಣಕ್ಕಿಳಿದು ಕಾಂಗ್ರೆಸ್ ಎದುರೇ ಸ್ಪರ್ಧಿಸುವ ಇಚ್ಛೆವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications