ಒಂದೇ ತಿಂಗಳಲ್ಲಿ ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಯಿತಾ? ಮುಂದೆ ಕಾದಿದೆ ದೊಡ್ಡ ಗಂಡಾಂತರ!

ಬೆಂಗಳೂರು, ಮಾರ್ಚ್‌ 02: ದಕ್ಷಿಣ ಭಾರತದ ರುಚಿ ರುಚಿಯಾದ ಖಾದ್ಯಗಳನ್ನ ಸವಿಯಲು ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಬಾಂಬ್ ಬ್ಲಾಸ್ಟ್ ಇದೀಗ ದೇಶದ್ಯಾಂತ ಸುದ್ದಿಯಾಗುತ್ತಿದೆ. ಈ ಸ್ಪೋಟದಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ಬೆಚ್ಚಿ ಬೀದಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದಿಂದ ಅನೇಕರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಲದೇ ನಾಲ್ಕು ಶಂಕಿತರನ್ನ ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಇದರ ನಡುವೆ ಒಂದು ವಾರಗಳು ಹಿಂದೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ ನುಡಿದಿದ್ದು, ಇದೀಗ ಕೋಡಿಮಠದ ಶ್ರೀಗಳ ಭವಿಷ್ಯ ನಿಜವಾಯಿತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

Rameswaram Cafe Bomb Blast Did The Kodishree Blast Prediction Come True

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ವರ್ಷದ ಆರಂಭದಲ್ಲಿ ಅಂದರೆ, 2024 ಅತ್ಯಂತ ಅಪಾಯಕಾರಿ ವರ್ಷ, ಈ ಕಾಲದಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತದೆ. ಶ್ರೀಗಳು ಭವಿಷ್ಯ ನುಡಿದ ತಿಂಗಳೊಳಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿ ಹತ್ತಾರು ಮಂದಿ ಗಂಭೀರ ಗಾಯಗೊಂಡಿರುವುದು. ಬಾಂಬ್ ಸ್ಫೋಟ, ಭೂಕಂಪ, ಧಾರ್ಮಿಕ ಮುಖಂಡನ ಸಾವು ಸಂಭವಿಸಲಿದೆ ಎಂಬ ಭವಿಷ್ಯವನ್ನು ನುಡಿದ್ದಿದರು. ಇದೀಗ ಕೋಡಿಮಠ ಶ್ರೀ ಹೇಳಿದ ಬಾಂಬ್​​​​​ ಸ್ಫೋಟ ಇದೇನಾ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

2024ರ ವರ್ಷದಲ್ಲಿ ಹಲವು ಕಂಟಕಗಳು ಎದುರಾಗುತ್ತವೆ. ಜಾಗತಿಕ ಮಟ್ಟದಲ್ಲಿ ಮತಾಂಧತೆ ಹೆಚ್ಚಾಗಲಿದ್ದು, ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಹೊಸವರ್ಷ ಭಯಾನಕ ಅನುಭವ ನೀಡಲಿದೆ. ರಾಜ್ಯ ರಾಜಕೀಯದಲ್ಲಿ ಈ ವರ್ಷ ಏನು ನಡೆಯಲಿದೆ ಎಂಬ ಬಗ್ಗೆ ಈಗಲೇ ಸ್ಪಷ್ಟಪಡಿಸಿಲ್ಲ. ಆದರೆ ಯುಗಾದಿ ಕಳೆದ ನಂತರ ಹೇಳುವೆ ಎಂದು ಸ್ವಾಮೀಜಿ ಹೇಳಿದ್ದು, ದೊಡ್ಡ ಗಂಡಾಂತರ ಸಂಭವಿಸುವುದೇ ಎನ್ನುವ ಆತಂಕ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+