ರಕ್ಷಾ ಬಂಧನ; ಸ್ಪೀಡ್ ಪೋಸ್ಟ್‌, ಆನ್‌ಲೈನ್ ಮೂಲಕವೂ ರಾಖಿ ಕಳುಹಿಸಿ

ಬೆಂಗಳೂರು, ಜುಲೈ 30 : ಕೋವಿಡ್ -19 ಪರಿಸ್ಥಿತಿ ಹಿನ್ನಲೆಯಲ್ಲಿ ಸಹೋದರನಿಗೆ ಮನೆಯಲ್ಲಿ ಕುಳಿತುಕೊಂಡೇ ರಾಖಿಯನ್ನು ಕಳಿಸಬಹುದಾಗಿದೆ. ಇದಕ್ಕಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಸೇವೆಯನ್ನು ಆರಂಭಿಸಿದೆ.

Recommended Video

      North Korea claims to be 'totally free' of Coronavirus | Oneindia Kannada

      ಕರ್ನಾಟಕದಲ್ಲಿನ ಜನರು ಭಾರತದ ಯಾವುದೇ ಪ್ರದೇಶಕ್ಕೇ ಬೇಕಾದರೂ ರಾಖಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಸುಲಭವಾಗಿ ಕಳಿಸಬಹುದಾಗಿದೆ. ಇದಕ್ಕಾಗಿ ಕೇವಲ 100 ರೂ. ವೆಚ್ಚವಾಗಲಿದೆ. ಈ ಸೇವೆಗೆ ಕರ್ನಾಟಕ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ.

      ಕಳೆದ ಕೆಲವು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುತ್ತಿದ್ದ ರಾಖಿ ಲಕೋಟೆಗಳಿಗೆ ಈಗ ಹೊಸ ಆಯಾಮ ನೀಡಲಾಗಿದೆ. ಸಹೋದರರಿಗೆ ಮಾತ್ರವಲ್ಲ ಲಡಾಖ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶವಿದೆ.

      Rakshabandhan Send Rakhis Through Online

      ಯೋಧರಿಗಾಗಿಯೇ ಮುದ್ರಿತ ಸಂದೇಶವನ್ನು ಆಯ್ಕೆ ಮಾಡಿ ರವಾನಿಸಬಹುದಾಗಿದೆ. ಬಲು ಸರಳವಾದ ಪ್ರಕ್ರಿಯೆ ಇದಾಗಿದೆ. ಜನರು www.karnatakapost.gov.in/Rakhi_Postಗೆ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಬೇಕು.

      ಇಲ್ಲಿ ಸುಮಾರು 11 ವಿವಿಧ ಆಕರ್ಷಕ ವಿನ್ಯಾಸವುಳ್ಳ ರಾಖಿಗಳು ಲಭ್ಯವಿದೆ. ಪ್ರತಿಯೊಂದು ವಿನ್ಯಾಸದ ಎದುರು ವಿನ್ಯಾಸದ ಅಂಕಿ ನಮೂದಿಸಿದ್ದು, ನಮಗೆ ಬೇಕಾದ ವಿನ್ಯಾಸವನ್ನು ಆರಿಸಿ ಮುಂದುವರೆದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣ ಸಿಗುತ್ತದೆ.

      ರಾಖಿಗಳ ಸೀಮಿತ ದಾಸ್ತಾನು ಲಭ್ಯವಿದೆ. ಈ ಸೇವಾ ವಿಧಾನದ ಮೂಲಕ ರಾಖಿ ಕಳುಹಿಸಲು ಜುಲೈ 31ರ ತನಕ ಅವಕಾಶ ನೀಡಲಾಗಿದೆ. ರಾಖಿ ಕಳುಹಿಸಲು 100 ರೂ. ಶುಲ್ಕವಿದ್ದು, ಅದನ್ನು ಇಂಟರ್ ನೆಟ್ ಬ್ಯಾಂಕಿಂಗ್, ಐಪಿಪಿಬಿ, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ ಮೂಲಕ ಪಾವತಿ ಮಾಡಬಹುದು.

      ಮನೆಯೊಳಗೇ ಕುಳಿತು ಭಾರತದ ಯಾವುದೇ ಮೂಲೆಗೂ ರಾಖಿ ಕಳುಹಿಸಬಹುದಾದ ಈ ಸೇವೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರಿಗೆ ಇದು ಅನುಕೂಲಕರವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+