ರಾಜ್ಯಸಭೆ ಟಿಕೆಟ್: ಜೆಡಿಎಸ್ ಆಫರ್ ತಿರಸ್ಕರಿಸಿದ ಸುಧಾಮೂರ್ತಿ

Posted By:
Subscribe to Oneindia Kannada

ಬೆಂಗಳೂರು, ಮೇ 24: ಈ ಬಾರಿ ರಾಜ್ಯಸಭೆಗೆ ಉದ್ಯಮಿಯೊಬ್ಬರನ್ನು ಕಳಿಸಲು ಶತಪ್ರಯತ್ನ ಪಡುತ್ತಿರುವ ಜೆಡಿಎಸ್ ಗೆ ಆರಂಭದಲ್ಲೇ ಹಿನ್ನಡೆಯುಂಟಾಗಿದೆ. ಜಾತ್ಯಾತೀತ ಜನತಾದಳ ನೀಡಿದ ಆಫರ್ ಅನ್ನು ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ ಸುಧಾಮೂರ್ತಿ ತಿರಸ್ಕರಿಸಿದ್ದಾರೆ.

ಕಳೆದ ಹಲವು ದಶಕಗಳಿಂದ ಉದ್ಯಮಿಗಳಿಗೆ ಬೆಂಬಲ ನೀಡಿ ರಾಜ್ಯಸಭೆಗೆ ಕಳಿಸುವ ಸಂಪ್ರದಾಯ ಹೊಂದಿರುವ ಜೆಡಿಎಸ್ ಈ ಬಾರಿ ಕೂಡಾ ಉದ್ಯಮಿಗಳಿಗೆ ಮಣೆ ಹಾಕಿದೆ.[ಕರ್ನಾಟಕದಿಂದ ರಾಜ್ಯಸಭೆಗೆ ಮತ್ತೆ ಎಂ ವೆಂಕಯ್ಯನಾಯ್ಡು]

Rajya Sabha Race : Sudha Murthy Infosys rejects JDS offer

ಸ್ಥಳೀಯ ಮತ್ತು ಪ್ರಭಾವಿ ಅಭ್ಯರ್ಥಿಯೊಬ್ಬರನ್ನು ರಾಜ್ಯಸಭೆಗೆ ಕಳಿಸಲು ಇಚ್ಛಿಸಿದ್ದ ಜೆಡಿಎಸ್, ಸುಧಾಮೂರ್ತಿಗೆ ಅಭ್ಯರ್ಥಿಯಾಗುವಂತೆ ಕೇಳಿಕೊಂಡಿತ್ತು. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಸುಧಾಮೂರ್ತಿ ಪ್ರತಿಕ್ರಿಯಿಸಿದ್ದಾರೆ. [ರಾಜ್ಯಸಭೆ ಚುನಾವಣೆ ದಿನಾಂಕ ಘೋಷಣೆ]

ಕರ್ನಾಟಕದ ಒಟ್ಟು 4 ರಾಜ್ಯಸಭಾ ಸ್ಥಾನಗಳಿಗೆ ಜೂನ್ 11ರಂದು ಮತದಾನ ನಡೆಯಲಿದೆ. ಪ್ರತಿಯೊಬ್ಬ ಅಭ್ಯರ್ಥಿ ಕೂಡ 45 ಪ್ರಥಮ ಆಧ್ಯತೆಯ ಮತ ಪಡೆಯಬೇಕಿದೆ. ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್(40) ತನ್ನ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸುವ ತಂತ್ರ ಕೂಡಾ ಆರಂಭಿಸಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವ ಬಿಜೆಪಿಯ ಎಂ.ವೆಂಕಯ್ಯನಾಯ್ಡು, ಆಯನೂರು ಮಂಜುನಾಥ್, ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡೀಸ್ ಹಾಗೂ ಉದ್ಯಮಿ ವಿಜಯಮಲ್ಯ ಅವರ ಅವಧಿ ಜೂನ್ 30ಕ್ಕೆ ಮುಗಿಯುವುದರಿಂದ ಮತ್ತೆ ಚುನಾವಣೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajya Sabha Race: The JD(S) had indicated that it would send a businessman to the Rajya Sabha. Sudha Murthy, wife of IT gaint N R Narayana Murthy, declined the offer to be JD(S) candidate.
Please Wait while comments are loading...