Rajya Sabha: ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಫೈನಲ್- ಮೈತ್ರಿ ರಾಜಕಾರಣದಲ್ಲಿ ಹೊಸ ಟ್ವಿಸ್ಟ್
ಬೆಂಗಳೂರು, ಫೆಬ್ರವರಿ 15: ಇದೇ ತಿಂಗಳ ಫೆಬ್ರವರಿ 27 ರಂದು ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಭಾರತವಾಗಿ ಅಚ್ಚರಿಯ ಬೆಳವಣಿಗೆ ಎಂಬಂತೆ ಜೆಡಿಎಸ್ ನಾಯಕ ಮತ್ತು ರಾಜ್ಯಸಭಾ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಗುರುವಾರ ರಾಜ್ಯಸಭೆಗೆ NDA ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಅಭ್ಯರ್ಥಿಗಳನ್ನು ಹಸ ರಾಜ್ಯಸಭೆಯ ಚುನಾವಣಾ ಕಣಕ್ಕೆ ಇಳಿಸಲು NDA ನಿರ್ಧರಿಸಿದೆ. ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಸಮಾಲೋಚನೆಯ ನಂತರ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅಂತಿಮವಾಗಿದೆ. ಸದ್ಯ ಕುಪೇಂದ್ರ ರೆಡ್ಡಿ ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಾಲಕ್ಉ ರಾಜ್ಯಸಭೆಯ ಸೀಟುಗಳು ಖಾಲಿ ಇವೆ. ಇದರಲ್ಲಿ ಮೂರನ್ನು ಕಾಂಗ್ರೆಸ್ ಪಕ್ಷ ಹಾಗೂ ಒಂದು ಕ್ಷೇತ್ರವನ್ನು ಬಿಜೆಪಿಯು ಸುಲಭವಾಗಿದೆ ಗೆಲ್ಲುವ ನಿರೀಕ್ಷೆಗಳು ಇವೆ. ಜೆಡಿಎಸ್ ತನ್ನ 19 ಮತಗಳು ಮತ್ತು ಬಿಜೆಪಿಯ ಸುಮಾರು 20 ಮತಗಳನ್ನು ಹೊಂದಿರುವ ನಾಲ್ವರು ಸ್ವತಂತ್ರರ ಬೆಂಬಲ ಇದ್ದು, ಇದು ಕಾಂಗ್ರೆಸ್‌ಗೆ ಅಚ್ಚರಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಬಣದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಕುಪೇಂದ್ರ ರೆಡ್ಡಿ ಜೆಡಿಎಸ್‌ನ ಮಾಜಿ ರಾಜ್ಯಸಭಾ ಸದಸ್ಯರು. ಈ ಬಾರಿಯು ಅವರಿಗೆ ಅದೃಷ್ಟ ಒಲಿದು ಬಂದಿದೆ.
ಇದೇ ಫೆಬ್ರವರಿ 27 ರಂದು ಕರ್ನಾಟಕದಿಂದ ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಸಂಸತ್ತಿನ ಮೇಲ್ಮನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶಾಸಕರು ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್ ಮೂರು ಮಂದಿ ಅಭ್ಯರ್ಥಿಗಳನ್ನು ಬುಧವಾರ ಅಂತಿಮಗೊಳಿಸಿದೆ. ಅಭ್ಯರ್ಥಿಗಳಾಗಿ ಜಿಸಿ ಚಂದ್ರಶೇಖರ್, ಸೈಯದ್ ನಾಸೀರ್ ಹುಸೇನ್ ಮತ್ತು ಅಜಯ್ ಮಾಕನ್ ಅವರ ಸರ್ಧೆಗೆ ಕಾಂಗ್ರೆಸ್ ಹೆಸರಿಸಿದರೆ, ಬಿಜೆಪಿಯು ತನ್ನ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವರ ಹೆಸರು ಘೋಷಿಸಿದೆ.

ಪಕ್ಷೇತರ ಬೆಂಬಲ ಕೇಳಿರುವ ಎನ್‌ಡಿಎ
ಬಿಜೆಪಿ ಜತೆಗಿನ ಕೆಲವು ಚರ್ಚೆಗಳ ಬಳಿಕ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕುಪೇಂದ್ರ ರೆಡ್ಡಿ ಅಭ್ಯರ್ಥಿಯಾಗಿ ಮಾಡಿದ್ದು, ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಎನ್‌ಡಿಎ ನಾಯಕರು ಪಕ್ಷೇತರ ಶಾಸಕರನ್ನು ತಮ್ಮ ಬೆಂಬಲಕ್ಕಾಗಿ ಕೇಳಿದ್ದಾರೆ. ಅವರ ಬೆಂಬಲ ಪಡೆಯುವ ಮೂಲಕ ಎದುರಾಳಿ ಪಕ್ಷ ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಪ್ಲಾನ್ ಮಾಡಲಾಗಿದೆ.
ಅಡ್ಡ ಮತದಾನ ಮಾಡದಂತೆ 'ಕೈ' ಎಚ್ಚರಿಕೆ
ಇದರ ಭಾಗವಾಗಿಯೇ ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇತ್ತ ಕಾಂಗ್ರೆಸ್ ಮಾತ್ರ ಅಡ್ಡಮತದಾನದಿಂದ ದೂರವಿರಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ಎಲ್ಲವು ಚುನಾವಣೆ ಬಳಿಕ ಗೊತ್ತಾಗಲಿದೆ.
ಡಿಸಿಎಂ ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಡ್ಡಮತದಾನ ಆಗದಿರಲು ಹೆಚ್ಚಿನ ಕ್ರಮ ವಹಿಸಿದ್ದು, ಎಚ್ಚರಿಕೆ ಸಹ ನೀಡಿದ್ದಾರೆ. ಏಕೆಂದರೆ ಕಾಂಗ್ರೆಸ್ ಅಸಮಾಧಾನಿತರು ಅಡ್ಡಮತದಾನ ಮಾಡಿದರೆ ಎದುರಾಳಿ ಪಕ್ಷಕ್ಕೆ ಹೆಚ್ಚಿನ ಮತಗಳು ಸಿಗುವ ಸಾಧ್ಯತೆ ಇರುತ್ತದೆ.












Click it and Unblock the Notifications