Rain In Karnataka: ಜುಲೈನಲ್ಲಿ ಸುರಿದ ಭಾರೀ ಮಳೆ- ಶೇ.56ರಿಂದ ಶೇ 3ಕ್ಕೆ ಕುಸಿದ ಕೊರತೆ ಪ್ರಮಾಣ, ಅಂಕಿಅಂಶ, ಮಾಹಿತಿ, ವಿವರ
ಬೆಂಗಳೂರು, ಆಗಸ್ಟ್ 02: ಕರ್ನಾಟಕದಲ್ಲಿ ಜೂನ್‌ನಲ್ಲಿ ಸುರಿದ ಮಳೆ ಪ್ರಮಾಣ ವಾಡಿಕೆಗಿಂತ ಅರ್ಧದಷ್ಟು ಕಡಿಮೆಯಾಗಿತ್ತು. ಆದರೆ, ಜುಲೈನಲ್ಲಿ ರಾಜ್ಯದಾದ್ಯಂತ ಭಾರೀ ಮಳೆ ಸುರಿಯಿತು. ಈ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಶೇ 56 ರಷ್ಟಿದ್ದ ಮಳೆ ಕೊರತೆ ಪ್ರಮಾಣ ಜುಲೈನಲ್ಲಿ ಶೇ 3ಕ್ಕೆ ಕುಸಿದಿದೆ. ಇದರಿಂದ ರಾಜ್ಯದ ಮೇಲೆ ಆವರಿಸಲು ಆರಂಭವಿಸಿದ್ದ ಬರದ ಛಾಯೆ ಈಗ ಮಾಯವಾಗಿದೆ.
ಜುಲೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಡ್ಯಾಮ್‌ಗಳ ಒಳಹರಿವು ಅಧಿಕವಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ತುಂಬುತ್ತಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬರದ ಚಿಂತೆ ಮಾಯವಾಗಿ ಮಳೆಗಾಲ ಸಹಜ ಸ್ಥಿತಿಗೆ ಮರಳಿದೆ ಎಂದು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ. ಜೂನ್‌ನಲ್ಲಿ ರಾಜ್ಯದಾದ್ಯಂತ ಶೇ.56ರಷ್ಟು ಕೊರತೆಯಿದ್ದ ಮಳೆ ಪ್ರಮಾಣ ಶೇ.3ರಷ್ಟು ಹೆಚ್ಚು ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಅಂಕಿಅಂಶಗಳ ಪ್ರಕಾರ, ಜೂನ್ 1 ರಿಂದ ಜುಲೈ 31 ರ ವರೆಗೆ ಕರ್ನಾಟಕದಲ್ಲಿ ಸರಾಸರಿ ಮಳೆ 453 ಮಿಮೀ ಆಗಿದೆ. ಈ ವರ್ಷ ಜುಲೈ 31ರ ವೇಳೆಗೆ ರಾಜ್ಯದಲ್ಲಿ 468.7 ಮಿಮೀ ಆಗಿದೆ.
ಕೆಎಸ್‌ಎನ್‌ಡಿಎಂಸಿ ಡೇಟಾ ಪ್ರಕಾರ, ಕರ್ನಾಟಕದಲ್ಲಿ ಶೇ 7ರಷ್ಟು ಕೊರತೆಯನ್ನು ತೋರಿಸಿದೆ. ಸರಾಸರಿ ಶೇ 19 ವರೆಗಿನ ಕೊರತೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಸರಾಸರಿ ಮಳೆಯಲ್ಲಿ ಶೇ 24 ರಷ್ಟು ಕೊರತೆಯನ್ನು ಮಲೆನಾಡು ಜಿಲ್ಲೆಗಳು ಹೊಂದಿದೆ. ಈ ಪ್ರದೇಶವು ದೊಡ್ಡ ಪ್ರಮಾಣದ ಕೊರತೆಯನ್ನು ಎದುರಿಸುತ್ತಿವೆ. ಜೂನ್ ಅಂತ್ಯದ ವೇಳೆಗೆ ಈ ಜಿಲ್ಲೆಗಳಲ್ಲಿ ಶೇ 74 ರಷ್ಟಿದೆ.
ರಾಜ್ಯದಲ್ಲಿ 52.5 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಕಳೆದ ವರ್ಷದ ಜುಲೈ ಅಂತ್ಯದ ವೇಳೆಗೆ 60 ಲಕ್ಷ ಹೆಕ್ಟೇರ್ ಬಿತ್ತನೆ ಆಗಿತ್ತು ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುನ್ ಮಳೆ ಪ್ರಮಾಣ ಕಡಿಮೆ ಆಗಿತ್ತು. ಜುಲೈನಲ್ಲಿ ಹೆಚ್ಚು ಮಳೆ ಸುರಿದಿದೆ. ಇದು ರಾಜ್ಯಕ್ಕೆ ಉತ್ತಮ ಸುದ್ದಿಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈಶಾನ್ಯ ಮಾನ್ಸೂನ್‌ನಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ರಾಜ್ಯವು ಸುಮಾರು 200 ಮಿಮೀ ಮಳೆಯನ್ನು ಪಡೆಯುವುದರಿಂದ ಭರವಸೆಯನ್ನು ಅಧಿಕಾರಿ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಜಲಾಶಯಗಳಲ್ಲೂ ನೀರಿನ ಮಟ್ಟ ಸಹಜ ಸ್ಥಿತಿಗೆ ತಲುಪಿದ್ದು, ಸರಾಸರಿ ಶೇ.65ರಷ್ಟು ಸಾಮರ್ಥ್ಯ ಭರ್ತಿಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಶೇ.80 ರಷ್ಟು ಅಣೆಕಟ್ಟುಗಳು ಭರ್ತಿಯಾಗಿದ್ದರೆ, ಕೃಷ್ಣಾ ಜಲಾನಯನದಲ್ಲಿ ಶೇ.73 ರಷ್ಟು ಭರ್ತಿಯಾಗಿವೆ.
ಕಳೆದ ವರ್ಷಕ್ಕೆ ಹೋಲಿಸಿದೆ ಕೆಆರ್‌ಎಸ್ ಡ್ಯಾಮ್‌ನಲ್ಲಿ ಈ ವರ್ಷ ಕಡಿಮೆ ನೀರಿ ಭರ್ತಿಯಾಗಿದೆ ಎಂದು ವರದಿಯಾಗಿದೆ.

ಆದರೆ ಬರಗಾಲದಂತಹ ಪರಿಸ್ಥಿತಿ ಎದುರಿಸುತ್ತಿರುವ 85 ತಾಲ್ಲೂಕುಗಳಿಗೆ ಸರ್ಕಾರ ಇನ್ನೂ ಪರಿಹಾರವನ್ನು ಘೋಷಿಸಿಲ್ಲ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ವರದಿ ಸಿದ್ದಪಡಿಸಲು ಅಧಿಕಾರಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಅದರ ಆಧಾರದ ಮೇಲೆ ಬರವನ್ನು ಘೋಷಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.












Click it and Unblock the Notifications