karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
ರಾಜ್ಯದಲ್ಲಿ ನಿರೀಕ್ಷೆಯಂತೆ ಈ ಬಾರಿ ಮಳೆಯಾಗುತ್ತಿಲ್ಲ. ಪ್ರತೀ ವರ್ಷ ಬೇಸಿಗೆ ಬಿಸಿಲು ಬೇಸರವಾಗುವ ಹೊತ್ತಿಗೆ ವರುಣ ದೇವ ಜನರ ಪಾಲಿಗೆ ಸ್ವರ್ಗದ ಬಾಗಿಲು ತೆರೆದಂತೆ ಧರೆಗಿಳಿಯುತ್ತಿದ್ದನು. ಆದರೆ ಈ ವರ್ಷ ಅದ್ಯಾಕೋ ಮಳೆಯಾರ ರಾಜ್ಯದ ಜನರ ಮೇಲೆ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಅದಾಗ್ಯೂ ಹವಾಮಾನ ಇಲಾಖೆ ರಾಜ್ಯದಲ್ಲೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ಕಳೆದ ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು ತಂಪಾದ ವಾತಾವರಣವಿದೆ. ಬೆಂಗಳೂರಲ್ಲೂ ಕಳೆದ ದಿನ ಹಲವೆಡೆ ಮಳೆಯಾಗಿದೆ. ಸಂಜೆಯಿಂದ ಕಾರ್ಪೋರೇಷನ್, ಲಾಲ್‌ಬಾಗ್, ಟೌನ್‌ಹಾಲ್, ಮೆಜೆಸ್ಟಿಕ್, ಮಲ್ಲೇಶ್ವರಂ, ಕಬ್ಬನ್ ಸೇರಿದಂತೆ ಹಲವೆಡೆ ದಟ್ಟ್ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ನಗರದ ಹಲವೆಡೆ ಮಳೆಯಾಗಿದೆ. ಕಳೆದ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗಿತ್ತು.
ಗುಲ್ಬರ್ಗದಲ್ಲಿ ಭಾರೀ ಮಳೆ
ಗುಲ್ಬರ್ಗದಲ್ಲಿ ಕಳೆದ ಕೆಲ ಗಂಟೆಗಳಿಂದ ತೀವ್ರ ಗಾಳಿಯೊಂದಿಗೆ ಅಧಿಕ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಹೀಗಾಗಿ ಜನ ಖುಷಿಪಟ್ಟಿದ್ದಾರೆ.
ಸೂರ್ಯನಗರಿಯಲ್ಲಿ ಶನಿವಾರ ಮಧ್ಯಾಹ್ನ ಭಾರಿ ಅಬ್ಬರದೊಂದಿಗೆ ಆಲಿಕಲ್ಲು ಸಹಿತ ಜೋರಾದ ಮಳೆ ಸುರಿದ ಪರಿಣಾಮ ಹಲವಾರು ಕಡೆಗಳಲ್ಲಿ ಮರಗಳು ನೆಲಕ್ಕುರುಳಿವೆ. ವಾಹನಗಳ ಜಖಂಗೊಂಡಿವೆ. ನಗರದ ಬಹುತೇಕ ಕಡೆ ಮಳೆಯಾಗುತ್ತಿದೆ.
ಬೆಳಗಿನಿಂದಲೇ ತುಂಬಾ ಧಗೆ ಮತ್ತು ಬೇಗುದಿ ವಾತಾವರಣವಿತ್ತು. ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಗುಡುಗು-ಮಿಂಚು ಸಹಿತ ಸಿಡಿಲ ಆರ್ಭಟದೊಂದಿಗೆ ಸಣ್ಣಗೆ ಶುರುವಾದ ಮಳೆಯ ಸ್ವಲ್ಪ ಸಮಯದ ಬಳಿಕ ಜೋರಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಬಿರುಗಾಳಿಯೊಂದಿಗೆ ಮಳೆ ಮುಂದುವರೆದಿದೆ. ಈ ಸಂದರ್ಭದಲ್ಲಿ ಜಲ್ಲಿ ಕಲ್ಲಿನ ಗಾತ್ರದಷ್ಟು ಆಲಿಕಲ್ಲುಗಳು (ಗಾರ್) ಬಿದ್ದವು. ಒಮ್ಮೆಲೆ ಆಲಿಕಲ್ಲು ಬಿಳುವುದು ಶುರುವಾಗಿದ್ದರಿಂದ ಕಾರ್ ಇನ್ನಿತರ ವಾಹನಗಳ ಚಾಲಕರು ಕೊಂಚು ಹೊತ್ತು ಗಲಿಬಿಲಿಗೊಂಡರು.

ಬೆಂಗಳೂರಿನಲ್ಲಿ ಏಪ್ರಿಲ್ 23ರವರೆಗೆ ಮಳೆ ಮುನ್ಸೂಚನೆ
150 ದಿನಗಳ ಸುಡುವ ಬಿಸಲು ವಾತಾವರಣವನ್ನು ಸಹಿಸಿಕೊಂಡ ಬೆಂಗಳೂರು ನಿವಾಸಿಗಳಿಗೆ ಅಂತಿಮವಾಗಿ ಸ್ವರ್ಗದ ಬಾಗಿಲು ತೆರೆದುಕೊಂಡಂತೆ ಮಳೆಯಾಗಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೆಂಗೇರಿ ಮತ್ತು ಯಲಹಂಕದಲ್ಲಿ ಕಳೆದ ದಿನ ಮಳೆಯಾಗಿದ್ದು ಬಿಸಿಲಿನಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಇದರಿಂದ ಬೆಂಗಳೂರು ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
Finally raining in Bengaluru kengeri pic.twitter.com/121Quu9asF
— lokesh gowda K R (@lokeshkrgowda) April 19, 2024
ವಿಜಯಪುರ, ಬೀದರ್ ಮತ್ತು ಬಾಗಲಕೋಟೆ ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ಮಳೆಯಾಗುತ್ತಿದೆ. ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿಯಾದ ಬೆಂಗಳೂರು, 62 ವರ್ಷಗಳಲ್ಲಿ ತನ್ನ ಸುದೀರ್ಘ ಶುಷ್ಕತೆಯನ್ನು ಸಹಿಸಿಕೊಂಡಿದೆ. IMD ಅಂಕಿಅಂಶಗಳ ಪ್ರಕಾರ, ನಗರದಲ್ಲಿ 146 ದಿನಗಳಿಂದ ಮಳೆಯಿಲ್ಲ. ಬೆಂಗಳೂರಿನಲ್ಲಿ ನವೆಂಬರ್ 7 ಮತ್ತು 8 ರಂದು ಅನುಕ್ರಮವಾಗಿ 71.2 ಮಿಮೀ ಮತ್ತು 29.3 ಮಿಮೀ ಮಳೆಯಾಗಿದೆ. ನವೆಂಬರ್ 23 ರಂದು, ನಗರದಲ್ಲಿ 1.6 ಮಿಮೀ ಮಳೆಯಾಯಿತು. ಇದು ಬೆಂಗಳೂರಿನಲ್ಲಿ ಆದ ಕೊನೆಯ ಮಳೆಯಾಗಿದೆ. ಅಂದಿನಿಂದ, ಡಿಸೆಂಬರ್ 3 ಮತ್ತು 4 ರಂದು, ನಗರದಲ್ಲಿ ಕ್ರಮವಾಗಿ 0.3mm ಮತ್ತು 0.4mm ಮಳೆಯಾಗಿದೆ.
Kengeri showers 🤩⛈️ #Bengaluru
— Karnataka Weather (@Bnglrweatherman) April 19, 2024
VC: @yadenthira#BengaluruRains pic.twitter.com/UXH14mMi21
ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನ ಮುನ್ಸೂಚನೆ ಪ್ರಕಾರ ಮಂಗಳವಾರ (ಏಪ್ರಿಲ್ 23) ವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹಾಗಾದರೆ ಕಳೆದ ದಿನ ಬೆಂಗಳೂರಿನ ಯಾವ ಭಾಗದಲ್ಲಿ ಮಳೆಯಾಗಿದೆ ಈ ವಿಡಿಯೋ ನೋಡಿ.
@Bnglrweatherman @namma_vjy Rain in Yelahanka!! pic.twitter.com/8gkUNS17Z1
— Mr. Anamadheya (@bhaluvichitra) April 19, 2024
ರಾಜ್ಯದ ಯಾವ ಭಾಗದಲ್ಲಿ ಇಂದು ಮಳೆ
ರಾಜ್ಯದ ಹಲವೆಡೆ ಕಳೆದ ದಿನ ಮಳೆಯಾಗಿದ್ದು ತಂಪಾದ ವಾತಾವರಣವಿದೆ. ಇಂದು ಕೂಡ ಹಲವೆಡೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇಂದು ಸಹ ಹಾವೇರಿ, ಗದಗ, ಮಂಡ್ಯ, ರಾಯಚೂರು, ವಿಜಯನಗರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಬೆಳಗಾವಿ ಜನರಿಗೆ ಕುಂದಾ ನೀಡಿದ ಮಳೆರಾಯ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ರೋಸಿ ಹೋಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಹೀಗಾಗಿ ಬೆಳಗಾವಿ ಮಂದಿಗೆ ಕುಂದಾ ತಿಂದಷ್ಟು ಖುಷಿಯಾಗಿದೆ. ಧಾರವಾಡ ಮಂದಿಗೂ ಇಂದು ಮಳೆರಾಯ ಪೇಡಾ ಕೊಡುವ ನಿರೀಕ್ಷೆ ಇದೆ.












Click it and Unblock the Notifications