Rain Alert: ಮುಂದಿನ 12 ಗಂಟೆ ಕಾಲ ಈ ಜಿಲ್ಲೆಗಳಿಗೆ ಭರ್ಜರಿ ಮಳೆ!

ಮಳೆ.. ಮಳೆ.. ಹೀಗೆ ಶುಕ್ರವಾರ ರಾತ್ರಿ & ಶನಿವಾರ ಬೆಳಗಿನ ಜಾವ ಕೂಡ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಹೀಗಿದ್ದಾಗಲೇ ಮತ್ತೆ ಮುಂದಿನ 12 ಗಂಟೆ ಕಾಲ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಬಗ್ಗೆ ಈಗ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಭಾರಿ ಮಳೆ ಬೀಳಲಿರುವ ಜಿಲ್ಲೆಗಳು ಯಾವುವು? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಮಳೆ ಬರಲಿ.. ಮಂಜು ಇರಲಿ.. ಅಂತಾ ಕನ್ನಡ ನಾಡಿನ ಜನರು ಬೇಸಿಗೆ ಸಮಯದಲ್ಲಿ, ಸಖತ್ ಸಖತ್ ಡೈಲಾಗ್ ಹೊಡೆದಿದ್ದರು. ಯಾಕಂದ್ರೆ ಈ ಬಾರಿ ಅಂದ್ರೆ 2024ರ ಬೇಸಿಗೆಯ ಸಮಯದಲ್ಲಿ ಬಿಸಿಲು ಹೇಗೆ ಇತ್ತು ಅಂದ್ರೆ ಮನುಷ್ಯ ಹೊರಗೆ ಒಂದು ಗಂಟೆ ನಿಂತಿದ್ದ ಅಂದ್ರೆ ಅಲ್ಲೇ ಸುಟ್ಟು ಭಸ್ಮ ಆಗಿ ಹೋಗುತ್ತಿದ್ದ. ಅಷ್ಟು ಬಿಸಿಲು ಕಾಡುತ್ತಿತ್ತು ಹೊರಗಡೆ. ಹೀಗಾಗಿ ಮಳೆ ಬರಲಿ ದೇವರೆ ಅಂತಾ ಕಾಯುತ್ತಿದ್ದರು ಜನ. ಹೀಗೆ ಜನರ ಮನವಿಗೆ ಒಪ್ಪಿಕೊಂಡಿದ್ದ ವರುಣ ದೇವ, ಭರ್ಜರಿಯಾಗಿ ಮಳೆ ಸುರಿಸಿದ್ದಾನೆ. ಆದರೆ ಬರು ಬರುತ್ತಾ ಅತಿಯಾದ ಮಳೆ ಕೂಡ ಭಯ ಹುಟ್ಟಿಸಿದೆ. ಅದ್ರಲ್ಲೂ ಮುಂದಿನ 12 ಗಂಟೆ ಕಾಲ ಈ ಜಿಲ್ಲೆಗಳಿಗೆ ಭರ್ಜರಿ ಮಳೆಯ ಎಂಟ್ರಿ ಆಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಲವೆಡೆ ಅಲರ್ಟ್ ಕೂಡ ಘೋಷಿಸಲಾಗಿದೆ.

Rain Alert Given To Several Districts Of The Karnataka Include Bengaluru For Next 12 Hours

12 ಗಂಟೆ ಕಾಲ ಭಾರಿ ಮಳೆ!

ಕಳೆದ ಒಂದೂವರೆ ತಿಂಗಳಿಂದ ಕೂಡ ಮಳೆರಾಯ ಬ್ರೇಕ್ ಪಡೆಯದೆ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಸುತ್ತಿದ್ದಾನೆ. ಹೀಗಾಗಿ ಜನರು ಕೂಡ ಮಳೆ ಕಂಡು ಹೆದರುವ ಸ್ಥಿತಿ ಎದುರಾಗಿದೆ. ಈ ರೀತಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆಗೆ ಹಾನಿ ಆಗುತ್ತಿದೆ. ಹೀಗಾಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಇಂತಹ ಸೂಕ್ಷ್ಮ ಸ್ಥಿತಿ ತಲುಪಿದ ಸಮಯದಲ್ಲೇ ಮತ್ತೆ ಮುಂದಿನ 12 ಗಂಟೆ ಭಾರಿ ಮಳೆ ಎಚ್ಚರಿಕೆಯನ್ನು ನೀಡಲಾಗಿದೆ.

ಅದರಲ್ಲೂ ಮಲೆನಾಡು & ಕರಾವಳಿ ಪ್ರದೇಶ ಸೇರಿದಂತೆ ಬೆಂಗಳೂರಿನಲ್ಲೂ ಮಳೆ ಆರ್ಭಟ ಪಕ್ಕಾ ಆಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆ & ತಾಲೂಕುಗಳಿಗೆ ಕೂಡ ಭಾರಿ ಮಳೆ ಬೀಳಲಿದ್ದು, ಇಂದು ಸಂಜೆಯ ನಂತರ ಒಂದಷ್ಟು ರಿಲೀಫ್ ಸಿಗಲಿದ್ದು ಮತ್ತೆ ಮಳೆ ಆರಂಭ ಆಗುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಮುಂಗಾರು ಮಳೆ ಚುರುಕಾಗಿದೆ. ಇದು ಕೂಡ ಭಯ ಹೆಚ್ಚಾಗುವಂತೆ ಮಾಡುತ್ತಿದೆ.

ಮಳೆ.. ಮಳೆ.. ಅಬ್ಬರ ಜೋರು!

ಕಾವೇರಿ ನದಿಯ ತವರು ಕೊಡಗು & ಮೈಸೂರು ಸುತ್ತಮುತ್ತಲ ಭಾಗದಲ್ಲಿ ಇನ್ನು ಕೆಲವೇ ಗಂಟೆಗಳಲ್ಲಿ ಭರ್ಜರಿಯಾಗಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆಯನ್ನ ಈಗ ನೀಡಲಾಗಿದ್ದು. ಇಂದು ಮಧ್ಯಾಹ್ನದ ಬಳಿಕ ಮಳೆ ಅಬ್ಬರ ಜೋರಾಗಲಿದ್ದು, ಕನ್ನಡಿಗರ ರಾಜಧಾನಿಯಾದ ಬೆಂಗಳೂರಿನಲ್ಲಿ ಸಂಜೆ ಸಮಯದಲ್ಲಿ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಮಧ್ಯೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಕೂಡ ಅದೇ ರೀತಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಾಸನ ಜಿಲ್ಲೆಗಳಲ್ಲಿ ಇಂದು ಕೂಡ ಮಳೆ ಆರ್ಭಟಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+