Rain Alert: 48 ಗಂಟೆ ಭಾರಿ ಮಳೆ, ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಅಲರ್ಟ್...
2025 ಇನ್ನೇನು ಮುಗಿಯುತ್ತಾ ಬಂತು, ಆದರೆ ಈ ವರ್ಷ ಮಳೆರಾಯ ಮಾತ್ರ ನಿಲ್ಲುವ ಯಾವುದೇ ರೀತಿ ಲಕ್ಷಣ ಕಾಣಿಸುತ್ತಿಲ್ಲ. ವರ್ಷದ ಆರಂಭದಿಂದಲೂ ಬರೀ ಮಳೆಯ ಆರ್ಭಟಕ್ಕೆ ಸಿಲುಕಿ ಒದ್ದಾಡಿರುವ ಕನ್ನಡ ನಾಡಿಗೆ ಮತ್ತೊಂದು ಸ್ಫೋಟಕ ಸುದ್ದಿ ಸಿಕ್ಕಿದೆ. ಚಂಡಮಾರುತ & ವಾಯುಭಾರ ಕುಸಿತದಿಂದ ಇದೀಗ ಮತ್ತೆ ಭಾರಿ ದೊಡ್ಡ ಮಟ್ಟದಲ್ಲಿ ಮಳೆ ಶುರುವಾಗಿದೆ. ಅದರಲ್ಲೂ 48 ಗಂಟೆ ಭಾರಿ ಮಳೆ & ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಅಲರ್ಟ್...
ಮಳೆ ಈ ರೀತಿಯಾಗಿ ಅಬ್ಬರಿಸುತ್ತಿರುವುದು ನೋಡಿದ ಜನ ಗೊಣಗುತ್ತಿದ್ದು, ಹೀಗೆ ಸುರಿಯುತ್ತಿರುವ ಮಳೆ ನಿಂತು ಹೋಗಲಿ ದೇವರೆ ಅಂತಾ ಬೇಡುತ್ತಿದ್ದಾರೆ. ಯಾಕಂದ್ರೆ ಇಲ್ಲಿ ಮಳೆ ಅಬ್ಬರಕ್ಕೆ ಬ್ರೇಕ್ ಬೀಳುತ್ತಿಲ್ಲ. ಹೀಗಾಗಿ ಜನ ಕೂಡ ಮಳೆಯ ಅಬ್ಬರ ಕಂಡು ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ. ಹೀಗಿದ್ದರೂ ಮತ್ತೆ ಮಳೆ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ದೊಡ್ಡ ಪ್ರಮಾಣದ ಮಳೆಯ ಆಗಮನ ಫಿಕ್ಸ್ ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ?

ಮಳೆ.. ಮಳೆ.. ಈ ಜಿಲ್ಲೆಗಳಿಗೆ...
ಅಕಾಲಿಕ ಮಳೆ ಕಾರಣಕ್ಕೆ ರೈತರು ಇದೀಗ ತಮ್ಮ ಬೆಳೆ ಉಳಿಸಿಕೊಳ್ಳಲು ಪರದಾಡುವಂತೆ ಆಗಿಬಿಟ್ಟಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ & ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿದಂತೆ ಹಳೇ ಮೈಸೂರು ಭಾಗ, ಬೆಂಗಳೂರು ಹಾಗೇ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲೂ ಇದೀಗ ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕದ ಇನ್ನುಳಿದ ಭಾಗದಲ್ಲೂ ಭಾರಿ ಮಳೆ ಸುರಿದು ಅವಾಂತರ ಸೃಷ್ಟಿಯಾಗುವ ಭೀತಿ ಮೂಡಿದೆ.
ಬೆಳೆ ನಷ್ಟದ ಭೀತಿಯಲ್ಲಿ ರೈತರು
ಮಳೆ.. ಮಳೆ.. ಯಾಕಪ್ಪಾ ಈ ರೀತಿ ಮಳೆ ಸುರಿಯುತ್ತಿದೆ? ಅಂತಾನೇ ಕನ್ನಡಿಗರು ಈಗ ಭಾರಿ ಮಳೆಯ ಬಗ್ಗೆ ಬೇಸರ ಹೊರ ಹಾಕುವಂತೆ ಆಗಿದೆ. ಒಂದು ಕಡೆ ಮಳೆ ಬರದೇ ಬರ ಎದುರಾದ ಸಮಯದಲ್ಲಿ ನೀರಿಗೆ ಸಮಸ್ಯೆ ಉಂಟಾಗಿತ್ತು. ಆದರೆ ಈಗ ಭಾರಿ ಮಳೆ ಕಾರಣಕ್ಕೆ ಸಿಕ್ಕಾಪಟ್ಟೆ ಸಮಸ್ಯೆ ಸೃಷ್ಟಿಯಾಗಿ ರೈತರ ಬೆಳೆ ನಷ್ಟವಾಗುತ್ತಿದೆ. ಮುಂಗಾರು ಮಳೆ ಸಮಯ ಮುಗಿದು ಹೋಗುತ್ತಿದ್ದರೂ ಮಳೆ ಅಬ್ಬರವು ಕಡಿಮೆ ಆಗಿಲ್ಲ. ಮುಂದಿನ ಒಂದು ವಾರ ಅಂದ್ರೆ 7 ದಿನಗಳ ಕಾಲ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಗ್ಯಾರಂಟಿ ಆಗಿದೆ. ಅದರಲ್ಲೂ ಮಳೆರಾಯ ಈ ರೀತಿ ಸುರಿಯುತ್ತಿರುವ ರೀತಿ ನೋಡಿದರೆ ಸಿಕ್ಕಾಪಟ್ಟೆ ಟೆನ್ಷನ್ ಆಗಿದ್ದಾರೆ ಕನ್ನಡ ನಾಡಿನ ಜನರು.












Click it and Unblock the Notifications