Breaking: ಬೆಂಗಳೂರಿನಲ್ಲಿ ಮತ್ತೆ ಮಳೆ: ಹಬ್ಬದ ತಯಾರಿಯಲ್ಲಿರುವವರು ಹೈರಾಣ
ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುತ್ತಿದೆ. ಹಬ್ಬದ ತಯಾರಿಯಲ್ಲಿರುವ ಸಿಲಿಕಾನ್ ಸಿಟಿ ಜನರಿಗೆ ಮಳೆರಾಯನ ಕಾಟ ಮತ್ತೆ ಆರಂಭವಾಗಿದೆ. ಕಳೆದ ಹಲವು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ ಜೋರಾಗುತ್ತಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು ಸಂಜೆ ಮಳೆ ಜನರನ್ನು ಹಿಂಡಿ ಹಿಪ್ಪೆಯಾಗಿಸುತ್ತಿದೆ. ಜನಯನಗರ, ಗಾಂಧಿ ಬಜಾರ್, ಕೆ ಆರ್ ಮಾರ್ಕೇಟ್, ಜೆಪಿ ನಗರದಲ್ಲಿ ಮಳೆ ಜೋರಾಗಿದೆ. ಕೆಲಸ ಮುಗಿಸಿ ಮನೆಗೆ ತರಳುವ ಜನರಿಗೆ ಮಳೆ ಕಿರಿಕಿರಿಯನ್ನುಂಟು ಮಾಡಿದೆ. ಅಷ್ಟು ಮಾತ್ರವಲ್ಲದೆ ರಸ್ತೆಗಳಲ್ಲಿ ಗುಂಡಿಗಳು ತುಂಬಿ ವಾಹನ ಸವಾರರು ಪರದಾಡುವಂತಾಗಿದೆ.
ಕೆಲಸ ಮುಗಿಸಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಮಾಡಲು ಯೋಜಿಸಿದ ಜನರಿಗೆ ಮಳೆ ದೊಡ್ಡ ಸಮಸ್ಯೆಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಶಾಪಿಂಗ್ ಮಾಲ್‌ಗಳಿಗೆ ಜನ ಕಿಕ್ಕಿರಿದು ಜಮಾಯಿಸುತ್ತಿದ್ದಾರೆ. ಆದರೆ ಸಂಜೆಯಾದರೆ ಸಾಕು ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಬೇಸರಗೊಂಡಿದ್ದಾರೆ. ಇದು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ತಯಾರಿಯಲ್ಲಿರುವ ಜನರಿಗೆ ನಿರಾಶೆಯನ್ನು ತಂದಿದೆ.

ಬೆಂಗಳೂರು ನಗರದಲ್ಲಿ ಪ್ರತಿದಿನ ಸುರಿಯುತ್ತಿರುವ ಮಳೆ ಎಲ್ಲಾ ವರ್ಷದ ದಾಖಲೆಳನ್ನು ಅಳಿಸಿ ಹಾಕಿದೆ. ಈ ವರ್ಷದಲ್ಲಿ ಇಲ್ಲಿಯ ತನಕ ನಗರದಲ್ಲಿ 170.6 ಸೆಂಟಿಮೀಟರ್ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ನಗರದಲ್ಲಿ ಇಷ್ಟು ವರ್ಷದ ಎಲ್ಲಾ ದಾಖಲೆಗಳನ್ನು ಈ ವರ್ಷದ ಮಳೆ ಹಿಂದಿಕ್ಕಿದೆ. ಪ್ರತಿ ದಿನ ನಗರದಲ್ಲಿ ಮಳೆಯಾಗುತ್ತಲೇ ಇದೆ.












Click it and Unblock the Notifications