ರೈಲು ನಿಲ್ದಾಣಗಳ ಆಹಾರ ತಪಾಸಣೆಯಲ್ಲಿ ಶಾಕಿಂಗ್‌ ಸಂಗತಿಗಳು; ಎಕ್ಸ್‌ಪೈರಿ ಪದಾರ್ಥ, ಅನೈರ್ಮಲ್ಯ, ಪ್ಲಾಸ್ಟಿಕ್ ಬಳಕೆ!

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ನಡೆದಿದ್ದ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿಯು ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಏಕೆಂದರೆ ರೈಲು ನಿಲ್ದಾಣ, ಕ್ಯಾಂಟಿನ್, ವಂದೇ ಭಾರತ್ ರೈಲಿನ ಒಳಗೆ ಸೇರಿದಂತೆ ವಿವಿಧ ಜಿಲ್ಲೆಗಳ ಹಲವೆಡೆ ಗುರುವಾರ ದಾಳಿ ನಡೆಸಲಾಗಿದೆ. ಈ ವೇಳೆ ಅವಧಿ ಮೀರಿದ ಪದಾರ್ಥಗಳ ಪತ್ತೆಯಾಗಿವೆ.

ಆರೋಗ್ಯ ಅಧಿಕಾರಿಗಳು ಬೆಂಗಳೂರು (ಕೆಎಸ್‌ಆರ್), ಯಶವಂತಪುರ, ಕೆ.ಆರ್. ಪುರಂ, ಯಲಹಂಕ, ಕೋಲಾರ, ಮೈಸೂರು, ಹಾವೇರಿ, ಉಡುಪಿ, ಕೊಪ್ಪಳ, ಗದಗ, ದಾವಣಗೆರೆ, ಬಾಗಲಕೋಟೆ, ಕಾರವಾರ, ಯಾದಗಿರಿ, ಬೇರೂರು ಮತ್ತು ಕಡೂರು ಜಂಕ್ಷನ್, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಒಟ್ಟು 36 ರೈಲು ನಿಲ್ದಾಣಗಳು ಮತ್ತು 112 ಆಹಾರ ಸಂಸ್ಥೆಗಳಲ್ಲಿ (ರೈಲ್ವೇ ಪ್ಯಾಂಟ್ರಿಲ್, ರೈಲ್ವೆ canteen, ರೈಲ್ವೆ ನಿಲ್ದಾಣದಲ್ಲಿ ಹೋಟೆಲ್ ಸೇರಿ) ಪರಿಶೀಲಿಸಲಾಯಿತು.

Railway Food Safety

ಈ ಅಭಿಯಾನದಲ್ಲಿ ರೈಲ್ವೆ ಆವರಣದಲ್ಲಿರುವ ಹೋಟೆಲ್‌ಗಳು ಮತ್ತು ಇತರ ಆಹಾರ ಸಂಸ್ಥೆಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ, ಆಹಾರ ಸಂಗ್ರಹಣೆ ಪದ್ಧತಿಗಳು, ಲೇಬಲಿಂಗ್ ಮತ್ತು ಆಹಾರ ನಿರ್ವಹಣಾ ಪದ್ಧತಿಗಳನ್ನು ಖುದ್ದು ಅಧಿಕಾರಿಗಳ ವೀಕ್ಷಿಸಿದರು. ಅವಧಿ ಮೀರಿದ ಆಹಾರ ಪದಾರ್ಥ ವಶಕ್ಕೆ ಪಡೆದಿದ್ದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಕೃತಕ ಬಣ್ಣ ಬಳಕೆ ಪತ್ತೆ: ಪರಿಶೀಲನೆ ವೇಳೆ ಗೊತ್ತಾಗಿದ್ದೇನು?

ಮಂಗಳೂರು-ಕೇರಳ ಮತ್ತು ಹುಬ್ಬಳ್ಳಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲಿನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳಲಾಗಿದೆ ಎಂಬುದು ಗೊತ್ತಾಗಿದೆ. ಇನ್ನೂ ಆಹಾರ ಉತ್ಪನ್ನಗಳಲ್ಲಿ ಅನುಮತಿಯಿಲ್ಲದ ಕೃತಕ ಬಣ್ಣಗಳ ಬಳಕೆ ಕಂಡು ಬಂದಿದೆ. ಜಿಲೇಬಿಯಲ್ಲಿ ಹಳದಿ ಬಣ್ಣವನ್ನು ಮತ್ತು ಖೋವಾ ಪೇಡಾದಲ್ಲಿ ಗುಲಾಬಿ ಬಣ್ಣವನ್ನು ಬಳಸಿರುವುದನ್ನು ಅಧಕಾರಿಗಳು ಪತ್ತೆ ಹಚ್ಚಿಸಿದ್ದಾರೆ.

ಹಾವೇರಿಯಲ್ಲಿ ಅವಧಿ ಮೀರಿದ ಮೊಸು, ಹಾಲು

ಹಾವೇರಿ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಅವಧಿ ಮೀರಿದ ನಂದಿನಿ ಮೊಸರು ಮತ್ತು ದೋಡ್ಲಾ ಪ್ರಮಾಣೀಕೃತ ಹಾಲಿನ ಪ್ಯಾಕೆಟ್‌ಗಳು ಕಂಡು ಬಂದಿವೆ. ಇನ್ನೂ ಬೆಂಗಳೂರಿನ ಕೆ.ಆರ್. ಪುರಂ ರೈಲು ನಿಲ್ದಾಣದಲ್ಲಿರುವ ಹೋಟೆಲ್ ಇಲ್ಲಿ ಅನೈರ್ಮಲ್ಯತೆಯಿಂದ ಕೂಡಿದ್ದು, ಅಧಿಕಾರಿಗಳು ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರು ರೈಲು ನಿಲ್ದಾಣದಲ್ಲಿ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಇಡ್ಲಿಗಳನ್ನು ತಯಾರಿಸುತ್ತಿರುವುದು ಪತ್ತೆಯಾಗಿದ್ದು, ಇದರಿಂದ ಅನಾರೋಗ್ಯ ಉಂಟಾಗಲಿದೆ. ಹೀಗೆ ಮುಂದುವರಿಸಿದಂತೆ ಸೂಚಿಸಿದರು. ಅಡುಗೆಮನೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡು ಬಂದಿದ್ದು, ವಶಕ್ಕೆ ಪಡೆದರು.

ಈರುಳ್ಳಿ ಮತ್ತು ತರಕಾರಿಗಳ ಮೇಲೆ ಶಿಲೀಂಧ್ರಗಳ ಬೆಳೆದಿದ್ದ ಮಗನಿಸಿ ಅಧಿಕಾರಿಗಳು, ತ್ವರಿತವಾಗಿ ವಿಲೇವಾರಿ ಮಾಡುವ ಜೊತೆಗೆ ತಾಜಾ ಆಹಾರ, ತರಕಾರಿ ಬಳಸುವಂತೆ ತಿಳಿಸಿದರು. ಆಹಾರ ಸಂಗ್ರಹಣೆಗೆ ಸೂಕ್ತವಲ್ಲದ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಚಟ್ನಿ ಸಂಗ್ರಹಿಸಿರುವುದು ಬಂದಿದ್ದು, ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ ಎಂದು ಇಲಾಕೆ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+