ಪ್ರವಾಹ ಪೀಡಿತ ಜಿಲ್ಲೆಗಳ ಭೇಟಿಗೆ ರಾಹುಲ್ ಗಾಂಧಿ ಆಗಮನ
ಬೆಂಗಳೂರು, ಆಗಸ್ಟ್ 12: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಕಳೆದ ಎರಡು ದಿನದಿಂದ ತಮ್ಮ ಕ್ಷೇತ್ರವಾದ ಕೇರಳದ ವೈನಾಡಿನಲ್ಲಿ ಬೀಡು ಬಿಟ್ಟಿರುವ ರಾಹುಲ್ ಗಾಂಧಿ ಅಲ್ಲಿ ಪ್ರವಾಹದಿಂದ ತಲ್ಲಣಿಸಿರುವವರಿಗೆ ಭರವಸೆ ನೀಡುವ ಕಾರ್ಯ ಮಾಡಿದ್ದಾರೆ.
ಪ್ರವಾಹಕ್ಕೆ ತುತ್ತಾಗಿರುವ ವೈನಾಡಿನಲ್ಲಿ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಸಂತ್ರಸ್ತರಿಗೆ ನೆರವು ವಿತರಿಸಿದ್ದಾರೆ.

ಕೇರಳದ ಬಳಿಕ ರಾಹುಲ್ ಗಾಂಧಿ ಅವರು ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರಿಗೆ ರಾಜ್ಯದ ಕಾಂಗ್ರೆಸ್ ಮುಖಂಡರು ಜೊತೆ ಆಗಲಿದ್ದಾರೆ.












Click it and Unblock the Notifications