• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಶೂ ಲೇಸ್ ಕಟ್ಟಿದ ರಾಹುಲ್, ಟ್ವೀಟ್‌ನಲ್ಲಿ ಹಲವು ಕಮೆಂಟ್‌!

|
Google Oneindia Kannada News

ಮಂಡ್ಯ, ಅಕ್ಟೋಬರ್ 06; ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮಂಡ್ಯದಲ್ಲಿ ನಡೆಯುತ್ತಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಂಡವಪುರದ ನ್ಯಾಮನಹಳ್ಳಿ ಬಳಿ ಪಾದಯಾತ್ರೆಗೆ ಸೇರಿಕೊಂಡರು.

ಗುರುವಾರ ಬೆಳಗ್ಗೆ ಮಂಡ್ಯ ಜಿಲ್ಲೆಯ ಪಾಂಡವಪುರದ ಬೆಳ್ಳಾಲೆ ಗ್ರಾಮದಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಸೋನಿಯಾ ಗಾಂಧಿ ಶೂ ಲೆಸ್ ರಾಹುಲ್ ಗಾಂಧಿ ಕಟ್ಟಿದ್ದಾರೆ.

ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ: ಸೋನಿಯಾ ಗಾಂಧಿ ಶೂ ಸರಿಪಡಿಸಿದ ರಾಹುಲ್ ಗಾಂಧಿ ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ: ಸೋನಿಯಾ ಗಾಂಧಿ ಶೂ ಸರಿಪಡಿಸಿದ ರಾಹುಲ್ ಗಾಂಧಿ

ಕರ್ನಾಟಕ ಕಾಂಗ್ರೆಸ್ ಈ ಫೋಟೋವನ್ನು ಟ್ವೀಟ್ ಮಾಡಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಕಮೆಂಟ್‌ಗಳು ಬರುತ್ತಿವೆ. ನರೇಂದ್ರ ಮೋದಿ ತಾಯಿ ಪಾದಪೂಜೆ ಮಾಡುವ ಫೋಟೋವನ್ನು ಈ ಫೋಟೋ ಜೊತೆ ಹಾಕಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಗುರುವಾರ ಬೆಳ್ಳಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಭಾರತ್ ಜೋಡೋ ಯಾತ್ರೆ ಆರಂಭವಾಯಿತು. ಮಂಡ್ಯದ ಬ್ರಹ್ಮದೇವರ ಹಳ್ಳಿ ಗ್ರಾಮದ ತನಕ ಗುರುವಾರ ಯಾತ್ರೆ ನಡೆಯಲಿದೆ. ರಾಹುಲ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಟ್ವೀಟ್

ಕರ್ನಾಟಕ ಕಾಂಗ್ರೆಸ್ ಟ್ವೀಟ್

ಭಾರತ್ ಜೋಡೋ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಶೂ ಲೇಸ್ ಕಟ್ಟಿದ ಫೋಟೋವನ್ನು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ತಾಯಿಯನ್ನು ಗೌರವಿಸುವವರು, ಕಾಳಜಿ ತೋರುವವರು ಮಾತ್ರ ತಾಯ್ನೆಲವನ್ನೂ ಗೌರವಿಸಬಲ್ಲರು' ಎಂದು ಕ್ಯಾಪ್ಷನ್ ಹಾಕಿದೆ.

ನೆಟ್ಟಿಗರಿಂದ ಪ್ರಶ್ನೆಗಳು

ನೆಟ್ಟಿಗರಿಂದ ಪ್ರಶ್ನೆಗಳು

ಪ್ರಧಾನಿ ನರೇಂದ್ರ ಮೋದಿ ತಾಯಿಯನ್ನು ಭೇಟಿ ಮಾಡಲು ಹೋದಾಗ ಕ್ಯಾಮರಾಮೆನ್ ಕರೆದುಕೊಂಡು ಹೋಗುತ್ತಾರೆ ಎಂದು ಹೇಳುತ್ತೀರಿ. ಈಗ ನೀವು ಮಾಡಿರುವುದು ಏನು?. ಈಗ ಅದೇ ಪ್ರಶ್ನೆಯನ್ನು ನಿಮಗೂ ಕೇಳಬೇಕಾ? ಎಂದು ಜಿ. ಯೋಗಿ ಎನ್ನುವವರು ಕಾಂಗ್ರೆಸ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಿಆರ್ ಸ್ಟಂಟ್‌ ಮತ್ತು ತಾಯಿ

ಪಿಆರ್ ಸ್ಟಂಟ್‌ ಮತ್ತು ತಾಯಿ

ಪ್ರಧಾನಿ ಮೋದಿ ತಾಯಿಯ ಪಾದ ತೊಳೆಯುವುದು, ರಾಹುಲ್ ಶೂ ಲೆಸ್ ಕಟ್ಟುವ ಚಿತ್ರಗಳನ್ನು ಜೊತೆಯಾಗಿ ಟ್ವೀಟ್ ಮಾಡಲಾಗಿದೆ. ಮೊದಲನೇ ಫೋಟೋ ಪಿಆರ್ ಸ್ಟಂಟ್, ಎರಡನೇ ಚಿತ್ರ ತಾಯಿ ಎಂದು ಟೀಕೆ ಮಾಡಲಾಗಿದೆ.

ನರೇಂದ್ರ ಮೋದಿ ಫೋಟೋ

ನರೇಂದ್ರ ಮೋದಿ ಫೋಟೋ

ಚೆಲುವೇಗೌಡ ಎಂಬುವವರು ಕಾಂಗ್ರೆಸ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, 'ಸೇವೆಯನ್ನೇ ಸರ್ವಸ್ವ ಎಂದುಕೊಂಡವರು ಮಾತ್ರ ಪ್ರಜೆಗಳ ಸೇವೆಯಲ್ಲೇ ತಾಯಿ-ತಂದೆ, ದೈವ ಎಲ್ಲವನ್ನು ಕಾಣುವರು' ಎಂದು ಹೇಳಿದ್ದಾರೆ.

English summary
AICC president Sonia Gandhi joined Bharat Jodo Yatra in Mandya, Karnataka. Rahul Gandhi tied mother shoelace photo went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X