ರಾಹುಲ್ ಗಾಂಧಿಗೆ ಬುದ್ದಿ ಮೆದುಳಲ್ಲಿಲ್ಲ, ತೊಡೆಯಲ್ಲಿದೆ: ಬಿಜೆಪಿ ನಾಯಕ ವಾಗ್ದಾಳಿ
ಹುಬ್ಬಳ್ಳಿ, ಏಪ್ರಿಲ್27: ದೇಶಾದ್ಯಂತ ಲೋಕಸಭೆ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ವೋಟಿಂಗ್ ಏಪ್ರಿಲ್ 19ರಂದು ನಡೆದಿದೆ. ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು ನಡೆದಿದ್ದು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ಇನ್ನೂ ಮೇ 7 ರಂದು ಉಳಿದ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದ್ದು, ಅಬ್ಬರ ಪ್ರಚಾರವನ್ನ ರಾಜಕೀಯ ನಾಯಕರು ನಡೆಸುತ್ತಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಪರ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಮ್ಮ ದೇಶ ಆಳಲು ರಾಹುಲ್ ಗಾಂಧಿ ಸಮರ್ಥನಾ? ಎಂದು ಪ್ರಶ್ನಿಸಿದ ಅವರು, ರಾಹುಲ್ ಗಾಂಧಿಗೆ ಬುದ್ಧಿ ಮೆದುಳಿನಲ್ಲಿಲ್ಲ, ತೊಡೆಯಲ್ಲಿದೆ ಎಂದು ಮಾತಿನ ಭರದಲ್ಲಿ ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಳಿ ತಪ್ಪಿದ್ದಾರೆ. ಇನ್ನೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಚಿವ ದಿನೇಶ್ ಗುಂಡೂರಾವ್ ಹುಚ್ಚರು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬಂಗಾರ ಬಂದ್ರೆ ನಮ್ಮ ದೇಶ ಯಾಕೆ ಬಡತನ ಇರುತ್ತಿತ್ತು ರಾಹುಲ್ಲಾ ಎಂದು ವ್ಯಂಗ್ಯವಾಡಿದ ಬಸನಗೌಡ ಪಾಟೀಲ್ ಯತ್ನಾಳ್, ರಾಹುಲ್ ಗಾಂಧಿ ಗೆದ್ರೆ ಬಟಾಯಿಂದ ಬಂಗಾರ ಬರುತ್ತದೆ, ಇದನ್ನು ರಾಹುಲ್ ಗಾಂಧಿನೇ ಹೇಳಿದ್ದು. ಅವನು ಏನ ಮಾತಾಡ್ತಾನೆ ಅವನಿಗೆ ಗೊತ್ತಿಲ್ಲ. ಮೊನ್ನೆ ರಾಣೆಬೆನ್ನೂರ ಕಡೆ ಬಂದಿದ್ದ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ ಎಲ್ಲರೂ ಯಾಕೆ ಕೆಂಪು ಮೆಣಸಿಕಾಯಿ ಬೆಳೆದಿದ್ದೀರಿ ಎಂದು ಕೇಳಿದ್ದಾನೆ. ಇಂತವನಿಗೆ ನೀವು ದೇಶ ಕೊಡ್ತೀರಾ ಎಂದು ಹಾಸ್ಯ ಮಾಡಿದ್ದಾರೆ. ಮೋದಿ ಅವರು 220 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಕೊಟ್ಟಿದ್ದಾರೆ. ಇದು ಮೋದಿ ವ್ಯಾಕ್ಸಿನ್, ಮಕ್ಕಳಾಗಲ್ಲ ಅಂದರು. ಆದರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವ್ಯಾಕ್ಸಿನ್ ಹಾಕಿಕೊಂಡಿದ್ದಾರೆ. ಅವರಿಗೆ ಏನಾದರೂ ಆಗಿದೆಯಾ? , ಎಂತಹ ನೀಚ ಬುದ್ದಿ ನೋಡಿ ಇವರದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.












Click it and Unblock the Notifications