ರಾಹುಲ್ ಸಮಾವೇಶ ಹಿನ್ನೆಲೆ: ಉತ್ತರ ಕರ್ನಾಟಕದಲ್ಲಿ ಪ್ರಯಾಣಿಕರಿಗೆ ಬಸ್ಸೇ ಇಲ್ಲ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ/ಧಾರವಾಡ/ವಿಜಯಪುರ, ಫೆಬ್ರವರಿ 10 : ಹೊಸಪೇಟೆ ಯಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಗುತ್ತಿಗೆಗೆ ಪಡೆಯಲಾಗಿದ್ದು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರಯಾಣಿಕರಿಗೆ ಬಸ್ಸುಗಳೇ ಇಲ್ಲದಂತಾಗಿದೆ.

ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ವಿಭಾಗದಿಂದಲೇ 200 ಬಸ್ ಗಳು ಶುಕ್ರವಾರ ಮಧ್ಯರಾತ್ರಿಯೇ ತೆರಳಿರುವ ಕಾರಣ ಹುಬ್ಬಳ್ಳಿ, ಧಾರವಾಡ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ. ಬೆಳಗ್ಗೆಯಿಂದಲೇ ಬಸ್ ಗಳಿಗಾಗಿ ಸಾರ್ವಜನಿಕರು ಕಾದು ಕಾದು ಸುಸ್ತಾಗಿದ್ದಾರೆ.

ರಾಹುಲ್ ಗಾಂಧಿ ರಾಜ್ಯ ಪ್ರವಾಸ : ಕಾರ್ಯಕ್ರಮಗಳ ಪಟ್ಟಿ

ಆಯಾ ಊರುಗಳಿಗೆ ತಲುಪಿದ ಬಸ್ ಗಳು ಜಿಲ್ಲೆಯಿಂದ ಹೊಸ ಪೇಟೆ ಗೆ ತೆರಳಿರುವ ಸಾರ್ವಜನಿಕರು ಬಸ್ ಸಂಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಯ ಸಮಸ್ಯೆ ಯಿಂದ ರಾತ್ರಿಯಿಡಿ ಪರದಾಡಿದ ಸಾರ್ವಜನಿಕರು ಎರಡು ದಿನಗಳ ಕಾಲ ಬಸ್ ಸಂಚಾರದಲ್ಲಿ ವ್ಯತ್ಯಯ ಆಗುತ್ತದೆ ಕ್ಷಮೆ ಇರಲಿ ಎಂದು ಅಧಿಕಾರಿಗಳು ಬಿತ್ತಿ ಪತ್ರ ಅಂಟಿಸಿದ್ದಾರೆ.

Rahul Gandhi effect: No buses in North Karnataka

ಸಾರ್ವಜನಿಕರಿಗೆ ಸಮಸ್ಯೆ ಮಾಡಿ ಬಸ್ ಕಳಿಸಿದ್ದಕ್ಕೆ ರಾತ್ರಿಯಿಂದ ಬಸ್ ಗಾಗಿ ಕಾದು ಕಾದು ಸುಸ್ತಾಗಿರುವ ಸಾರ್ವಜನಿಕರು ಸುಸ್ತಾಗಿದ್ದಾರೆ. ಸ್ವಂತ ವಾಹನಗಳನ್ನು ಮಾಡಿಸಿಕೊಂಡು ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸಪೇಟೆ, ಬಳ್ಳಾರಿ, ಕೊಪ್ಪಳದಲ್ಲೂ ಕೂಡ ರಾಹುಲ್ ಗಾಂಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ 38 ಬಸ್ ಗಳ ಸಂಚಾರ ರದ್ದಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಿಂದ ಹೀಗುವ ೩೫ ಬಸ್ ಗಳು ಇಲ್ಲದ ಕಾರಣ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As congress party hired thousand of KSRTC buses for Rahul Gandhi rally in Hospet, it has caused transport scarcity in many district of north karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ