ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ 3 ಉಪ ಮುಖ್ಯಮಂತ್ರಿಗಳು!

ಬೆಂಗಳೂರು, ಜುಲೈ 27: ರಾಜ್ಯದಲ್ಲಿ ಮತ್ತೊಂದು ಪ್ರಯೋಗಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ನಿರೀಕ್ಷೆಯಂತೆಯಂತೆ ಲಿಂಗಾಯತ ಸಮುದಾಯದವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಆದರೆ, ಉಪ ಮುಖ್ಯಮಂತ್ರಿ ಆಯ್ಕೆ ಕೂಡಾ ಕುತೂಹಲಕಾರಿಯಾಗಿದೆ.

2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮೂರು ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಬಿ. ಶ್ರೀರಾಮುಲು, ಆರ್. ಅಶೋಕ ಹಾಗೂ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ಒಲಿದು ಬಂದಿದೆ. ಒಕ್ಕಲಿಗ ಸಮುದಾಯದ ಡಾ. ಸಿ.ಎನ್ ಅಶ್ವಥ ನಾರಾಯಣ ಅವರು ತಮ್ಮ ಸ್ಥಾನವನ್ನು ಅದೇ ಸಮುದಾಯದ ಅಶೋಕ ಅವರಿಗೆ ಬಿಟ್ಟುಕೊಡಲಿದ್ದಾರೆ. ದಲಿತ ಕೋಟಾದಡಿ ಹಿರಿಯ ನಾಯಕ ಗೋವಿಂದ ಕಾರಜೋಳರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ವಾಲ್ಮೀಕಿ ಸಮುದಾಯದ ಬಿ ಶ್ರೀರಾಮುಲುರನ್ನು ಡಿಸಿಎಂ ಪಟ್ಟಕ್ಕೇರಿಸಲಾಗಿದೆ.

R Ashok, Govind Karajol, B Sriramulu elected as New DCMs of Karnataka

ನಾಲ್ವರು ಡಿಸಿಎಂ ನೇಮಕದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಬ್ರಾಹ್ಮಣ ಸಮುದಾಯ ಹಾಗೂ ಒಬಿಸಿ ಸಮುದಾಯದ ಒಬ್ಬರಿಗೆ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಸುರೇಶ್ ಕುಮಾರ್ ಅಥವಾ ಸುನಿಲ್ ಕುಮಾರ್ ಡಿಸಿಎಂಯಾದರೆ ಅಚ್ಚರಿ ಪಡಬೇಕಾಗಿಲ್ಲ ಎಂಬ ಮಾಹಿತಿಯಿತ್ತು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಬಿಜೆಪಿ ವರಿಷ್ಠರು ಡಿಸಿಎಂ ಸ್ಥಾನಕ್ಕೆ ಮೂರು ಹೆಸರುಗಳನ್ನು ಅಂತಿಮಗೊಳಿಸಿದೆ. ಇದರ ಜೊತೆಗೆ ಹೊಸ ಸಂಪುಟದಲ್ಲಿ ಅನೇಕ ಹಿರಿಯರಿಗೆ ಕೊಕ್ ಸಿಗುವ ಸಾಧ್ಯತೆ ಹೆಚ್ಚಿದೆ.

''ಜನಪರ ಆಡಳಿತ ನೀಡುವೆ, ನಂಬಿಕೆ ಹುಸಿಗೊಳಿಸಲ್ಲರೈತ, ಬಡವರು, ಹಿಂದುಳಿದವರು, ದೀನ ದಲಿತರ ರಕ್ಷಣೆ ಸರ್ಕಾರದ ಮೇಲಿದೆ. ಕೋವಿಡ್ 19 ಬಗ್ಗೆ ಮೊದಲಿಗೆ ಗಮನ ಹರಿಸಬೇಕಿದೆ'' ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+