ಆರು-ಎಂಟನೇ ತರಗತಿಗೆ ಪಬ್ಲಿಕ್ ಪರೀಕ್ಷೆ, ಆದರೆ ಯಾರನ್ನೂ ಫೇಲ್ ಮಾಡಲ್ಲ

ಬೆಂಗಳೂರು, ಅಕ್ಟೋಬರ್ 04: ಆರು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಪಬ್ಲಿಕ್ ಪರೀಕ್ಷೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಈಗಾಗಲೇ ಘೊಷಿಸಿದೆ. ಇದಕ್ಕೆ ಇನ್ನೋಂದು ಸೂಚನೆಯನ್ನು ಇಂದು ಸೇರಿಸಲಾಗಿದೆ.

ಆರು ಮತ್ತು ಎಂಟನೇ ತರಗತಿ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುತ್ತಿರುವ ವಿಷಯದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, 'ಪ್ರಾಯೋಗಿಕವಾಗಿ ಪಬ್ಲಿಕ್ ಪರೀಕ್ಷೆ ಮಾಡುತ್ತಿದ್ದೇವೆ ಆದರೆ ಈ ಬಾರಿ ಯಾರನ್ನೂ ನಪಾಸು (ಫೇಲ್) ಮಾಡುವುದಿಲ್ಲ' ಎಂದು ಹೇಳಿದ್ದಾರೆ.

ಇದುವರೆವಿಗೆ ರಾಜ್ಯದಲ್ಲಿ ಹತ್ತನೆಯ ತರಗತಿಯ ವರೆಗೆ ತಡೆರಹಿತ ಶಿಕ್ಷಣ (ನೋ ಡಿಟೆನ್ಷನ್ ಪಾಲಿಸಿ) ಅನ್ವಯ ಫೇಲ್ ಮಾಡದೆ ಪಾಸು ಮಾಡಿ ಮುಂದಕ್ಕೆ ಕರೆತರಲಾಗುತ್ತಿತ್ತು. ಇದರಿಂದ ಮಕ್ಕಳಿಗೆ ಪರೀಕ್ಷೆಯ ಭಯ ಇರುತ್ತಿರಲಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

Public Exam To Six And Eight Class: Suresh Kumar

ಹತ್ತನೆಯ ತರಗತಿಯಲ್ಲಿ ಧಿಡೀರನೇ ಪಬ್ಲಿಕ್ ಪರೀಕ್ಷೆ ಎದುರಿಸುವುದು ಮಕ್ಕಳಿಗೆ ಪರೀಕ್ಷಾ ಜ್ವರ ಬರಲೂ ಕಾರಣವಾಗುತ್ತಿತ್ತು.‌ ರಾಜ್ಯದ ಎಲ್ಲೆಡೆ ನಡೆಸಿದ ಪೋಷಕರ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜೊತೆಗಿನ ಸಂವಾದದ ಹಿನ್ನೆಲೆಯಲ್ಲಿ ಅವಶ್ಯಕ ಎನ್ನಿಸಿದ್ದರಿಂದ ರಾಜ್ಯದಲ್ಲಿ ಏಳನೆಯ ತರಗತಿಗೆ ಈ ಬಾರಿಯಿಂದ ಪ್ರಾಯೋಗಿಕವಾಗಿ ಪಬ್ಲಿಕ್ ಪರೀಕ್ಷೆ ಮಾಡಲು ನಿಶ್ಚಯಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಆರು ಮತ್ತು ಎಂಟನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇದ್ದರೂ ಯಾರನ್ನೂ ಫೇಲ್ ಮಾಡುವುದಿಲ್ಲ ಎಂದು ಹೇಳುವ ಮೂಲಕ ಪೋಕಷರಿಗೆ ವಿದ್ಯಾರ್ಥಿಗಳಿಗೆ ನೆಮ್ಮದಿ ನೀಡಿದ್ದಾರೆ ಸುರೇಶ್ ಕುಮಾರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+